ಉಳ್ಳಾಲ: ಜು. 2 ರಂದು ರಾತ್ರಿ ಮಲಗುವ ಕೊಠಡಿ ಯಿಂದ ನಾಪತ್ತೆಯಾದ ಬೀರಿ ನಿವಾಸಿ ಯುವಕನ ಮೃತ ದೇಹ ಉಚ್ಚಿಲ ರೈಲ್ವೇ ಗೇಟ್ ಸಮೀಪ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತಿಳಿದು ಬಂದಿದೆ. ಕೋಟೆಕಾರು ಬೀರಿ ನಿವಾಸಿ ಮೋಹದಾಸ್ ಅಮೀನ್ ಎಂಬವರ ಪುತ್ರ ತೇಜಸ್(25) ಜು.2ರಂದು ರಾತ್ರಿ ಮಲಗುವ ಕೋಣೆಯಿಂದ ನಾಪತ್ತೆಯಾಗಿದ್ದನು.
ಈ ಕುರಿತು ತಂದೆಯವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂದು ಬೆಳಿಗ್ಗೆ ರೈಲ್ವೇ ಹಳಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಯುವಕ ಮಣಿಪಾಲ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.


