
ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಆಯೋಜಿಸಿದ ಅದ್ದೂರಿ ತ್ರಿವಳಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ ಸುಗಿತ್ ನಲಿಪುಗ ಎಸಲ್ 2 ಇದರ ಪ್ರಥಮ ಸ್ಥಾನಿಯಾಗಿ ಹೊಸಬೆಟ್ಟಿನ ಶ್ರೀ ಬಾಲವಿಕಾಸ ಭಜನಾ ಮಂಡಳಿ ಪ್ರಶಸ್ತಿ ಗಳಿಸಿದೆ. ದ್ವಿತೀಯ ಶ್ರೀ ಈಶ್ವರಿ ಭಜನಾ ಮಂಡಳಿ ಪೊಳಲಿ, ತೃತೀಯ ಶ್ರೀ ರಾಮ ಮುಖ್ಯಪ್ರಾಣ ಕುಣಿತ ಭಜನಾ ತಂಡ ಕೋಡಿಕಲ್, ಚತುರ್ಥ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಮುಂಡ್ಕೂರು ಆಕರ್ಷಕ ಫಲಕ ಹಾಗು ನಗದು ಬಹುಮಾನ ಪಡೆದುಕೊಂಡಿದೆ.
ಹಾಗೆಯೇ 5 ತಂಡಗಳು ಸಮಾಧಾನಕರ ಬಹುಮಾನಗಳು ಶ್ರೀರಾಮ ಮಕ್ಕಳ ಕುಣಿತ ಭಜನಾ ತಂಡ ಕೋಡಿಕಲ್, ಶ್ರೀ ಶೇಷಶಯನ ಭಜನಾ ಮಂಡಳಿ ಕೋಡಿಕಲ್, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಕಲ್ಲಮುಂಡ್ಕೂರು ಮೂಡಬಿದ್ರೆ, ಶ್ರೀನಿವಾಸ ಮಕ್ಕಳ ಕುಣಿತ ಭಜನಾ ತಂಡ ಕೊಡೆತ್ತೂರು ಕಟೀಲು, ಸೀತರಾಮ ಭಜನಾ ಮಂಡಳಿ, ನಾರಾಳ.
ಸುಮಾರು 32 ತಂಡಗಳು ಭಾಗವಹಿಸಿದ್ದವು.




