
ಸೋಮೇಶ್ವರ : ರಾಜ್ಯ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಜನಸಮಾನ್ಯರು ಹೇಗೆ ಬದುಕುವುದು ಎನ್ನುವ ನಿಟ್ಟಿನಲ್ಲಿ ಚಿಂತಿತರಾಗಿದ್ದಾರೆ, ಭ್ರಷ್ಟಾಚಾರ, ಬೆಲೆ ಏರಿಕೆ, ಹಗರಣಗಳ ಮೂಲಕ ರೈತ ವಿರೋಽಯಾಗಿರುವ ಈ ಸರಕಾರದ ಜನವಿರೋಽ ನೀತಿಗಳ ವಿರುದ್ಧ ಬಿಜೆಪಿ ಹೋರಾಟವನ್ನು ಸಂಘಟಿಸುತ್ತಿದ್ದು, ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಮೇರೆಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಕರ್ಕೇರ ಮೇರೆಮಜಲು ಅಭಿಪ್ರಾಯಪಟ್ಟರು.
ದ.ಕ.ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ರಾಜ್ಯ ಕಾಂಗ್ರೆಸ್ ನೇತೃತ್ವದ ಸರಕಾದ ಜನವಿರೋಧ ನೀತಿಗಳ ವಿರುದ್ಧ ಸೋಮೇಶ್ವರ ಪುರಸಭಾ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು.
ಹಿರಿಯ ಮುಖಂಡ ಸೀತಾರಾಮ ಬಂಗೇರ, ದೇವದಾಸ ಕೊಲ್ಯ, ಸೋಮೇಶ್ವರ ಪುರಸಭೆ ಅಧ್ಯಕ್ಷೆ ಕಮಲಾ, ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಪರ್ಯತ್ತೂರು, ಸದಸ್ಯರಾದ ಹರೀಶ್ ಕುಂಪಲ, ಮೋಹನ್ ಶೆಟ್ಟಿ ಕುಂಪಲ, ಜಯ ಪೂಜಾರಿ, ಅನಿಲ್ ಕಾಸಿಂ ಬೆಟ್ಟು, ಯಶವಂತ್ ಪ್ರಕಾಶ್ನಗರ, ಸುಗಂಧಿ ಕನೀರುತೋಟ, ಮಾಲತಿ ನಾಯಕ್, ಸೋನಾ ಸುಭಾಷಿಣಿ, ಅಮಿತಾ ಸಾರಸ್ವತ ಕಾಲನಿ, ಶ್ರೀಲತಾ ಗಟ್ಟಿ, ಸಪ್ನಾ ಶೆಟ್ಟಿ, ಜಯಶ್ರೀ ಉಚ್ಚಿಲ, ಮನೋಜ್ ಕಟ್ಟೆಮನೆ, ಮಂಡಲ ಕಾರ್ಯದರ್ಶಿ ರಾಜೇಶ್ ಜಾಲಹಿತ್ಲು, ಮುಖಂಡರಾದ ಅರುಣ್ ಬೀರಿ, ಚೇತನ್ ಶೆಟ್ಟಿ , ಚರಣ್ರಾಜ್ ಉಳ್ಳಾಲ್, ಸೂರಜ್ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭನೆಯ ಬಳಿಕ ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

