ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಬೇಕರಿ ಮಾಲೀಕನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿ ಸಹಿತ ಆತನ ತಂಡದಲ್ಲಿದ್ದ ಇನ್ನೋರ್ವನನ್ನು ಬಂಧಿಸಿದ್ದು, ಅಲ್ಲಿಗೆ ಒಟ್ಟು ಐದು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಈವರೆಗೆ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಮಂಚಿಲದ ಜಮಾಲ್ ಕ್ವಾಟ್ರಸ್ ನಿವಾಸಿ ಫಯಾಝ್ (29), ಉಮ್ಮರ್ ನೌಫಾಲ್ (26) ಬಂಧಿತರು. ಈ ಹಿಂದೆ ಆ.11 ರಂದು ಅರ್ಫಾನ್ ಅಲಿಯಾಸ್ ಅರ್ಫಾ, ಸೈಫುಲ್ಲಾಸನ್ ಯಾನೆ ಸೈಫು, ಹನೀಫ್ ಅಲಿಯಾಸ್ ಇಬ್ರಾಹಿಂ ಎಂಬವರನ್ನು ಪೊಲೀಸರು ಬಂಧಿಸಿದ್ದರು.
ಮಾಸ್ತಿಕಟ್ಟೆಯಲ್ಲಿ ಬೇಕರಿ ಅಂಗಡಿಯನ್ನು ನಡೆಸುತ್ತಿರುವ ಅಬ್ದುಲ್ ಸಲಾಂ ಅವರನ್ನು ಫಯಾಝ್ ಮತ್ತು ಐದು ಜನರ ತಂಡ ಆ.8ರಂದು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಿಂದೆ ಬೇಕರಿ ಅಂಗಡಿ ಮುಂದೆ ಬಂದು ಗಾಂಜಾ ಮುಂತಾದ ದುರಾಭ್ಯಾಸಗಳನ್ನು ನಡೆಸಿ ಗ್ರಾಹಕರಿಗೆ ತೊಂದರೆ ನೀಡುತ್ತಿದ್ದ ಫಯಾಝ್ ಮತ್ತು ತಂಡದ ವಿರುದ್ಧ ಅಂಗಡಿ ಮಾಲೀಕ ಅಬ್ದುಲ್ ಸಲಾಂ ಅವರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ವಿರುದ್ಧ ಫಯಾಝ್ ಮತ್ತು ತಂಡ ಅವರ ಮನೆಯ ಗಾಜು ಒಡೆದು ಪುಂಡಾಟಿಕೆ ಮೆರೆದಿತ್ತು. ಕೃತ್ಯ ಎಸೆದು ಕೆಲ ದಿನಗಳಾಗುತ್ತಿದ್ದಂತೆ ಅದೇ ದ್ವೇಷದ ಹಿನ್ನೆಲೆಯಲ್ಲಿ ಸಲಾಂ ಅವರನ್ನು ಕಡಿದು ಕೊಲೆಗೆ ಯತ್ನಿಸಿದ್ದಾರೆ.
ರೌಡಿಶೀಟರ್ ಫಯಾಝ್
2001ರಲ್ಲಿ ಅಪರಾಧ ಜಗತ್ತಿಗೆ ಎಂಟ್ರಿ ಪಡೆದ ಫಯಾಝ್ ನ ವಿರುದ್ಧ ಈವರೆಗೆ ಉಳ್ಳಾಲ ಠಾಣೆಯಲ್ಲಿ 14 ಪ್ರಕರಣಗಳಿವೆ. ಅವುಗಳಲ್ಲಿ ಎರಡು ಖುಲಾಸೆಗೊಂಡಿವೆ. ಬಬ್ಬುಕಟ್ಟೆ ನಿವಾಸಿ ರಿಕ್ಷಾ ಚಾಲಕ ಲ್ಯಾನ್ಸಿ, ಮಂಗಳೂರಿನ ಕಾಂಚನ ಟೆಕ್ಸ್‍ಟೈಲ್ಸ್ ಪ್ರಬಂಧಕನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಫಯಾಝ್ ನ ವಿರುದ್ಧ ಬೆದರಿಕೆ ಸಹಿತ



