ತೊಕ್ಕೊಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಭಾರತೀಯ ಸೇನೆಯ ಶೌರ್ಯದ ಅಪರೇಷನ್ ಸಿಂಧೂರದ ಸಂಭ್ರಮಕ್ಕಾಗಿ ವಿಜಯ ಸಿಂಧೂರ ಸಾಹಸ ಕಾರ್ಯಕ್ರಮವು ಜುಲೈ 6 ಆದಿತ್ಯವಾರದಂದು ಮಧ್ಯಾಹ್ನ 1.00 ಘಂಟೆಗೆ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯಲಿದೆ.
ಈ ಸಂಧರ್ಭದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ದೇಶಭಕ್ತಿ ಗೀತೆ, 5 ರಿಂದ 7 ತರಗತಿ ಸಬ್ ಜೂನಿಯರ್ ವಿಭಾಗ (9632097959), 8 ರಿಂದ 10 ನೇ ತರಗತಿ ಜೂನಿಯರ್ ವಿಭಾಗ ( 9880043406), ಪಿ.ಯು.ಸಿ., ಡಿಗ್ರಿ ಸೀನಿಯರ್ ( 9663106817), ಭಾಷಣ ಸ್ಪರ್ಧೆ, ವಿಷಯ: ಆಪರೇಷನ್ ಸಿಂಧೂರ ಸೇನೆಯ ವೀರ ಸಾಹಸ ಇದರ ಬಗ್ಗೆ, 5 ರಿಂದ 7 ನೇ ತರಗತಿ ಜೂನಿಯರ್ ವಿಭಾಗ (8123373042), 8 ರಿಂದ 10 ನೇ ತರಗತಿ ಸೀನಿಯರ್ ವಿಭಾಗ (9972562858) ಸಂಗೀತ ಮತ್ತು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಒಂದು ನಿಮಿಷದ ವಿಡಿಯೋ ವನ್ನು ಪ್ರತೀ ವಿಭಾಗದಲ್ಲಿರುವ ನಂಬರ್ ಗೆ ವ್ಯಾಟ್ಸ್‌ಪ್ ಮೂಲಕ ಕಳುಹಿಸಬೇಕು. ಉತ್ತಮವಾಗಿರುವ 12 ಜನರನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗುವುದು.
ಚಿತ್ರಕಲಾ ಸ್ಪರ್ಧೆಯು 2 ರಿಂದ 4 ನೇ ತರಗತಿ ಕಿಡ್ಸ್ ವಿಭಾಗ ಐಚ್ಛಿಕ (ಯಾವುದೇ ಆಗಬಹುದು), 5 ರಿಂದ 7 ನೇ ತರಗತಿ ಸಬ್ ಜೂನಿಯರ್, 8 ರಿಂದ 10 ಜೂನಿಯರ್, ಪಿ.ಯು.ಸಿ. ಮತ್ತು ಡಿಗ್ರಿ ಸೀನಿಯರ್ ವಿಭಾಗದಲ್ಲಿ ವಿಷಯ: ಭಾರತೀಯ ಸೇನೆಯ ಶೌರ್ಯ, ಅಪರೇಷನ್ ಸಿಂಧೂರದ ಯಾವುದೇ ಘಟನಾವಳಿಗಳು. ಕಾರ್ಯಕ್ರಮದ ದಿನದಂದು ಕೊಲ್ಯ ಶ್ರೀ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಲಿದೆ.
ಎಲ್ಲಾ ವಿಭಾಗದಲ್ಲಿ ಪ್ರಥಮ, ದ್ವೀತಿಯ, ತೃತೀಯ ವಿಜೇತರಿಗೆ ಬಹುಮಾನವನ್ನು ಸಂಜೆ 4.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.




