
ಉಳ್ಳಾಲ : ಶಿಕ್ಷಣವನ್ನು ತಮ್ಮ ಜೀವದಾಧಾರವಾಗಿ ಪರಿಗಣಿಸಿ. ಪರಿಸರಕ್ಕೆ ನಿಮ್ಮ ಹೃದಯ ಮತ್ತು ಪ್ರಯತ್ನವನ್ನು ಅರ್ಪಿಸಿ. ನಿಶಾರಾ ಶಾಲಾ ಬಳಗ ನಿಮ್ಮ ಅನುಭವದ ಶಕ್ತಿಯಾಗಿರಲಿ ಎಂದು ಹೈದ್ರೋಸ್ ಹಾಜಿ ಮೆಮೋರಿಯಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ನಿಶಾರ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಅಭಿಪ್ರಾಯಪಟ್ಟರು.
ಅವರು ಹರೇಕಳ ಇಲ್ಲಿನ ನಿಶಾರ ಪಬ್ಲಿಕ್ ಸ್ಕೂಲ್ ನಲ್ಲಿ ಜರಗಿದ ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಪರಿಸರ ದಿನಾಚರಣೆಯ ಅಂಗವಾಗಿ ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಶಾಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತ ಕಿರು ನಾಟಕ ಪ್ರದರ್ಶಿಸಿದರು. ರಾಹಿಯ ರುಕಯ್ಯಾ ಸನ್ಮಾನಿತರ ವಿವರ ನೀಡಿದರು. ನಿಶಾರ ಸಮೂಹ ಸಂಸ್ಥೆಯ ಆಡಳಿತ ಅಧಿಕಾರಿ ಜೀವನ್ ಪಿಂಟೋ, ಶಾಲಾ ಪ್ರಾಂಶುಪಾಲೆ ಶಾಂತಿ ಡಿಸೋಜ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ದೀಕ್ಷಿತಾ ರೈ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಝಕಿಯಾ ಪರಿಸರದ ಮಹತ್ವ ತಿಳಿಸಿದರು. ವಿದ್ಯಾರ್ಥಿನಿ ರಾಯಿಷಾ ಸ್ವಾಗತಿಸಿದರು. ತಸ್ಫಿಯಾ ನಿರೂಪಿಸಿದರು. ಶಾಹೀಮ್ ವಂದಿಸಿದರು.




