ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ವಿಭಿನ್ನ ಧರ್ಮಕ್ಕೆ ಸೇರಿದ ಬಾಲಕ ಹಾಗೂ ಯುವತಿ ಚಕ್ಕಂದವಾಡುವುದನ್ನು ಕಂಡ ಹಿಂದು ಸಂಘಟನೆ ಕಾರ್ಯಕರ್ತರು ಥಳಿಸಿ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿಯ ಸಮೀಪ ಗುರುವಾರ ಸಂಜೆ ವೇಳೆ ನಡೆದಿದೆ.

ಚೆಂಬುಗುಡ್ಡೆ ನಿವಾಸಿ ಅಫ್ರೀದಿ(17) ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತೊಕ್ಕೊಟ್ಟು ರೈಲ್ವೇ ಹಳಿ ಸಮೀಪ ಬಾಡಿಗೆ ಮನೆಯಲ್ಲಿದ್ದ 18ರ ಹರೆಯದ ಹಿಂದು ಯುವತಿ ಮನೆಗೆ ಬಂದಿದ್ದ ಈತ ಆಕೆಯ ಜತೆಗೆ ರೈಲ್ವೇ ಹಳಿಯಲ್ಲಿ ಕುಳಿತು ಅಸಭ್ಯವಾಗಿ ವರ್ತಿಸುತ್ತಿದ್ದ.ಇದನ್ನು ಗಮನಿಸಿದ್ದ ಪಾದಚಾರಿಗಳು ಹಿಂದು ಸಂಘಟನೆ ಕಾರ್ಯಕರ್ತರ ಗಮನಕ್ಕೆ ತಂದಿದ್ದರು. ಅದರಂತೆ ಕಾರ್ಯಕರ್ತರ ದಂಡು ಸ್ಥಳಕ್ಕಾಗಮಿಸಿ ಯುವತಿಗೆ ಎಚ್ಚರಿಸಿ, ಬಾಲಕನಿಗೆ ಥಳಿಸಿ ಬಳಿಕ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.


