
ಉಳ್ಳಾಲ: ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಮತ್ತು ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿತು. ಈ ಸಂದರ್ಭದಲ್ಲಿ ಆರೋಗ್ಯಕರ ಅಡುಗೆ ಸ್ಪರ್ಧೆ, ಹಾಸ್ಯ ಕಾರ್ಯಕ್ರಮ, ಪ್ರೇರಣಾದಾಯಕ ಭಾಷಣಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.
ಮಹಿಳಾ ಸಿಬ್ಬಂದಿಯ ಆರೋಗ್ಯಕರ ಅಡುಗೆ ಸಾಮರ್ಥ್ಯವನ್ನು ಉತ್ತೇಜಿಸುವ “ಸ್ವಸ್ಥ ಆಹಾರ” ಸ್ಪರ್ಧೆಯಲ್ಲಿ ಬೋಧಕ ಮತ್ತು ಬೋಧಕೇತರ ಮಹಿಳಾ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರು. ವಿಜೇತರನ್ನು ಪ್ರಮಾಣಪತ್ರ ಮತ್ತು ನಗದು ಬಹುಮಾನಗಳೊಂದಿಗೆ ಗೌರವಿಸಲಾಯಿತು.
ನಿಟ್ಟೆ ಸಂವಹನ ಸಂಸ್ಥೆಯ ಉಪನ್ಯಾಸಕ, ಹಾಸ್ಯಪ್ರದರ್ಶಕ ಅರ್ಪಿತ್ ಇಂದ್ರವರ್ಧನ್ ಅವರು “ಕ್ಷೇಮ ಹಾಸ್ಯಂ” ಎಂಬ ಹಾಸ್ಯಪ್ರದರ್ಶನದ ಮೂಲಕ ಪ್ರೇಕ್ಷಕರಿಗೆ ನಗೆಭರಿತ ಕ್ಷಣಗಳನ್ನು ಒದಗಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆ “ಗ್ಲೋಬ್ ಆಫ್ ವುಮನ್‌ಹುಡ್” ದೀಪಾರಾಧನೆಯ ಮೂಲಕ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಸೀಮಾ ಪಾವ್ಮನ್ ಅವರು ಮಹಿಳಾ ಸಬಲೀಕರಣದ ಮಹತ್ವದ ಬಗ್ಗೆ ಪ್ರೇರಣಾದಾಯಕ ಭಾಷಣ ನೀಡಿದರು.
ಡಾ. ನವ್ಯ ಡಿ ಹರಿಕಾಂತ್ ಪ್ರಾರ್ಥಿಸಿದರು. ಮಾನಸಿಕ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸ್ಮಿತಾ ಟಿ ಸ್ವಾಗತಿಸಿದರು.
ಮಾನಸಿಕ ಆರೋಗ್ಯ ವಿಭಾಗದ ಸಮಾಜಕ ಸೇವಾ ಉಪನ್ಯಾಸಕಿ ಅಘ್ನೈತಾ ಐಮನ್ ವಂದಿಸಿದರು.
ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ. ರಿತಿಕಾ ಮೋದಿ ಮತ್ತು ಡಾ. ಮೃದುಲಾ ಕೌಲ್ ನಿರೂಪಿಸಿದರು.


