

ಕುಂಪಲ: 360 ಸಿಸಿ ಡ್ಯೂಕ್ ಬೈಕ್ ಅಪಘಾತಕ್ಕೀಡಾಗಿ ಕುಂಪಲ ನಿವಾಸಿ ಯುವಕ 21 ದಿನಗಳ ನಂತರ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಮಾ.7 ಕ್ಕೆ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕುಂಪಲ ವಿದ್ಯಾನಗರ ನಿವಾಸಿ ಪ್ರಶಾಂತ್ ಎಂಬವರ ಪುತ್ರ ಪವಿತ್ (19) ಸಾವನ್ನಪ್ಪಿದವರು. ಫೆ.21 ರಂದು ಕಾರ್ಕಳ ಸಮೀಪ ನಡೆದಿದ್ದ ಕೋಲದಲ್ಲಿ ಭಾಗವಹಿಸಿದ್ದ ಪವಿತ್ ತನ್ನ ಸ್ನೇಹಿತನ ಜೊತೆಗೆ ಮಂಗಳೂರಿಗೆ ವಾಪಸ್ಸಾಗುವ ಸಂದರ್ಭ ಬೆಳ್ಮಣ್ ಸಮೀಪ ರಾ.ಹೆ.ಯಲ್ಲಿರುವ ಉಬ್ಬುಗಳನ್ನು ಗಮನಿಸದೇ ಬೈಕ್ ಚಲಾಯಿಸಿದ ಪರಿಣಾಮವಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕಂಪೌAಡಿಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಲಿವರ್ ಭಾಗಕ್ಕೆ ಗಂಭೀರ ಗಾಯವಾಗಿ , ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 21 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವಿತ್ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಂಗಳೂರಿನ ಖಾಸಗಿ ಕಂಪೆನಿ ಷೋರೂಂನಲ್ಲಿ ಉದ್ಯೋಗಿಯಾಗಿದ್ದ ಅವರು, ಐದು ತಿಂಗಳ ಹಿಂದೆಯಷ್ಟೇ ಡ್ಯೂಕ್ ಬೈಕ್ ಖರೀದಿಸಿದ್ದರು. ಆದರೆ ಮರಣ ಬಂಡಿಯೆAದೇ ಖ್ಯಾತಿ ಪಡೆದಿರುವ ಬೈಕ್ ಪವಿತ್ ನನ್ನು ಬಲಿ ಪಡೆದಿದೆ. ಮೃತ ಪವಿತ್ ತಂದೆ-ತಾಯಿ ಹಾಗೂ 3ನೇ ತರಗತಿಯನ್ನು ಕಲಿಯುತ್ತಿರುವ ಸಹೋದರನನ್ನು ಅಗಲಿರುವರು.
ಉಳ್ಳಾಲವಾಣಿ ಕಾಳಜಿ
ಎಷ್ಟೇ ಸಿ.ಸಿ ಹೆಚ್ಚಿರುವ ಬೈಕನ್ನು ಖರೀದಿಸಿರಿ. ಆದರೆ ಹೋಗುವ ವೇಗಕ್ಕೆ ಮಿತಿಯಿರಲಿ. ನಮ್ಮವರೂ ಅಂತ ತಾಯಿ, ತಂದೆ, ಪತ್ನಿ ಹಾಗೂ ನಮ್ಮನ್ನು ಪ್ರೀತಿಸುವವರು ಕಾಯುತ್ತಿರುತ್ತಾರೆ. ವಾಹನದ ಮೇಲೆ ಜಾಗರೂಕತೆಯಿರಲಿ, ಜೀವ ಸುರಕ್ಷೆತೆಯಿಂದಿರಲಿ ಎಂಬುವುದೇ ಆಶಯವಾಗಿದೆ.

