

ಕೋಟೆಕಾರು: ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳ ಬಂಧನವಾಗಿದೆ. ತಿರುವನ್ವೇಲಿಯಲ್ಲಿ ಮುಂಬೈ ಗ್ಯಾಂಗ್ ಎನ್ನಲಾದ ಮೂವರು ತಮಿಳುನಾಡು ನಿವಾಸಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ನಿವಾಸಿ ಮುರುಗಂಡಿ ದೇವರ್ . ಪ್ರಕಾಶ್ ಯಾನೆ ಜೋಶ್ವಾ, ಮನಿವೆನ್ನನ್ ಬಂಧಿತರು. ಬಂಧಿತರಿಂದ ಫಿಯೇಟ್ ಕಾರು ಸಹಿತ ಎರಡು ಗೋಣಿ ಚೀಲದಲ್ಲಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಬಜಪೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಮೂರು ದಿನದಲ್ಲಿ 763.2 ಕಿ.ಮೀ ಪ್ರಯಾಣ !
ಕೆ.ಸಿ.ರೋಡ್ ಕಣ್ಣೂರು , ಕೋಝಿಕ್ಕೋಡ್, ಒಟ್ಟುಪಾಳಂ, ವಾಡಿಪಟ್ಟಿ, ತಿರುಮಂಗಲಂ ಮೂಲಕ ತಿರುವನ್ವೇಲಿ ತೆರಳಿರುವ ದರೋಡೆಕೋರರ ತಂಡ ಒಟ್ಟು ಮೂರು ದಿನದಲ್ಲಿ 763.2 ಕಿ.ಮೀ ಪ್ರಯಾಣಿಸಿದೆ. ತನಿಖೆ ಸಂದರ್ಭ ಫಿಯೇಟ್ ಕಾರಿನ ಅಸಲಿ ನೋಂದಣಿ ಸಂಖ್ಯೆಯಿಂದ ಕಾರಿನ ಮಾಲೀಕ ತಮಿಳುನಾಡು ಮೂಲದವನೆಂಬುದನ್ನು ಪತ್ತೆಹಚ್ಚಲಾಗಿತ್ತು. ಅದರಂತೆ ತಂಡ ತಮಿಳುನಾಡಿಗೆ ಪ್ರಯಾಣ ಬೆಳೆಸಿತ್ತು. ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಯೂ ಪರಿಣಾಮಕಾರಿಯಾಗಿ ಕರ್ಯಾಚರಿಸಿದ ಫಲವಾಗಿ ಆರೋಪಿಗಳನ್ನು ಕಾರು ಸಮೇತ ತಿರುವನ್ವೇಲಿಯಲ್ಲಿ ಪತ್ತೆಹಚ್ಚಲು ಸಾಧ್ಯವಾಗಿದೆ.
ಸ್ಥಳೀಯರು ಭಾಗಿ: ದರೋಡೆ ಕೃತ್ಯದಲ್ಲಿ ಸ್ಥಳೀಯರ ಕೈವಾಡವೂ ಇರುವ ಸಂಶಯ ದಟ್ಟವಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಬಾಡಿಗೆ ದರೋಡೆ ತಂಡ ಕೃತ್ಯವನ್ನು ಎಸಗಿರುವ ಸಾಧ್ಯತೆಯಿದೆ. ಅದರ ಆಧಾರದಡಿ ಬಂಧಿತ ದರೋಡೆ ತಂಡದಿAದ ಮಾಹಿತಿ ಕಲೆಹಾಕಲಾಗುವುದು ಎಂದು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

