Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
All News

ಜನವರಿ 3: ಉಳ್ಳಾಲ ತಾಲೂಕು ಪ್ರಥಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ – ಕಸಾಪ ಉಳ್ಳಾಲ ಘಟಕ ಅಧ್ಯಕ್ಷ ಧನಂಜಯ ಕುಂಬ್ಳೆ

UllalaVaniBy UllalaVaniJanuary 1, 2025No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ತೊಕ್ಕೊಟ್ಟು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ (ರಿ.) ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ
ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ತಾಲೂಕು ಪ್ರಥಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಜನವರಿ 3 ರಂದು ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನ ಅಧ್ಯಕ್ಷರಾಗಿ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಹರೇಕಳ ಕುಮಾರಿ ಫಾತಿಮತ್ ರಫೀದ ಇವರನ್ನು ಆರಿಸಲಾಗಿದೆ ಎಂದು ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್‌ ಕ್ಲಬ್‌ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ
ಬೆಳಗ್ಗೆ 9-30 ಹರೇಕಳ ಗ್ರಾಮ ಪಂಚಾಯತ್ ಆವರಣದಿಂದ ಜಾನಪದ ದಿಬ್ಬಣ ನಡೆಯಲಿದ್ದು ಇದರ ಉದ್ಘಾಟನೆ ಗುಲಾಬಿ ಅಧ್ಯಕ್ಷರು ಹರೇಕಳ ಗ್ರಾಮ ಪಂಚಾಯತ್ ಇವರು ನೆರವೇರಿಸಲಿದ್ದಾರೆ
ಅಕ್ಷರ ಸಂತ ಹರೇಕಳ ಹಾಜಬ್ಬ ಪದ್ಮ ಶ್ರೀ ಪುರಸ್ಕೃತರು ಭಾಗವಹಿಸಲಿದ್ದಾರೆ.ಸಮ್ಮೇಳನದ ಉದ್ಘಾಟಕರಾಗಿ ವಿಧಾನಸಭಾಧ್ಯಕ್ಷರು ಯು ಟಿ ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ
ಡಾ. ಎಂ. ಪಿ. ಶ್ರೀನಾಥ, ಮುಖ್ಯ ಅತಿಥಿಗಳಾಗಿ ಸೌಜನ್ಯ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಚ್ ಆರ್ ಈಶ್ವರ್ , ಮಂಗಳೂರು ದಕ್ಷಿಣ ವಲಯ ಕೆ. ಎನ್. ಆಳ್ವ, ಪ್ರೊ . ಭಾಸ್ಕರ್ ರೈ ಕುಕ್ಕುವಳ್ಳಿ , ಕಡೆಂಜ ಸೋಮಶೇಖರ್ ಚೌಟ, ಡಾ. ಧನಂಜಯ ಕುಂಬ್ಳೆ, ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಸುರೇಶ್ ಅಸೈ ಉಷಾಲತಾ ಸಮ್ಮೇಳನ ಸಂಚಾಲಕ ತ್ಯಾಗಮ್ ಹರೇಕಳ ಮೊದಲಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಯಕ್ಷಗಾನ, ಸಾಂಸ್ಕೃತಿಕ ಮುಂತಾದ ಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು.
ಸಮ್ಮೇಳನದಲ್ಲಿ ತೋನ್ಸೆ ಪುಷ್ಕಳ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿ ಕಾವ್ಯ ವಾಚನ ಗೀತ ಗಾಯನ ಗೋಷ್ಠಿ, ಡಾ.ಭಾಸ್ಕರ್ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ನಮ್ಮ ಅಬ್ಬಕ್ಕ ನಾನು ಕಂಡಂತೆ ಎಂಬ ಸಂವಾದಗೋಷ್ಠಿ ನಡೆಯಲಿದೆ. ಅಪರಾಹ್ನ ಶಿಕ್ಷಣ ಮತ್ತು ಮಾಧ್ಯಮ ಕುರಿತ ಚಿಂತನಗೋಷ್ಠಿ ನಡೆಯಲಿದ್ದು ಮಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್, ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್ ಕೊಣಾಜೆ ಇವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಲಿದ್ದಾರೆ.
ಸಂಜೆ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಧನಂಜಯ ಕುಂಬ್ಳೆ ಸಮಾರೋಪ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ರವೀಂದ್ರ ರೈ ಕಲ್ಲಿಮಾರ್, ವಿಜಯಲಕ್ಷ್ಮಿ ಪ್ರಸಾದ್ ರೈ ಕಲ್ಲಿಮಾರ್,ಅಬ್ದುಲ್ ಮಜೀದ್, ರಾಧಾಕೃಷ್ಣ ರೈ ಧನಪಾಲ್ ಶೆಟ್ಟಿಗಾರ್ ಲಲಿತ ಕಲಾ ಆರ್ಟ್ಸ್ ಮೊದಲಾದವರು ಭಾಗವಹಿಸಲಿದ್ದಾರೆ.
ಉಳ್ಳಾಲ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕವಿಗಳಾಗಿ, ಪ್ರಬಂಧ ಮಂಡಕರಾಗಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಪತ್ರಿಕಾ ಗೋಷ್ಠಿಯಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟೀಯ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವೇ ಅಧಿಕೃತ
ಉಳಿದದ್ದೆಲ್ಲವೂ ಸಮಿತಿಯ ಕಾರ್ಯಕ್ರಮಗಳಷ್ಟೇ !

⦁ ವೀರರಾಣಿ ಅಬ್ಬಕ್ಕ ರಾಷ್ಟೀಯ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ವೀರರಾಣಿ ಅಬ್ಬಕ್ಕ ರಾಷ್ಟೀಯ ಪ್ರತಿಷ್ಠಾನಕ್ಕೆ ೨೫ ವರ್ಷಗಳು ಕಳೆದಿದೆ. ೧೯೯೮ರಲ್ಲಿ ಪ್ರೊ. ವಿವೇಕ್‌ ರೈ ಅವರ ಪ್ರಚೋದನೆಯಿಂದ ಪ್ರತಿಷ್ಠಾನ ಆರಂಭವಾಗಿತ್ತು. ಈಗಾಗಲೇ ಪ್ರತಿಷ್ಠಾನ ೧೫ ಉತ್ಸವಗಳನ್ನು ಸಮಿತಿ ನಡೆಸಿದೆ. ಸರಕಾರದ ಅನುದಾನ ಬರಲು ಆರಂಭವಾಗಿದೆ. ಸರಕಾರದ ವತಿಯಿಂದಲೇ ಅಧಿಕೃತ ಅಬ್ಬಕ್ಕ ಉತ್ಸವವನ್ನು ಮಾಡಲಾಗುತ್ತಿದೆ. ಬೇರೆ ಯಾರು ಮಾಡಿದರೂ ಅದು ಅಬ್ಬಕ್ಕ ಉತ್ಸವ ಆಗುವುದಿಲ್ಲ. ಅದು ಸಮಿತಿಯ ಕಾರ್ಯಕ್ರಮವಷ್ಟೇ. ಸಮಿತಿಗಳಿಗೆ ಸರಕಾರವೂ ಅನುದಾನ ಕಡಿತಗೊಳಿಸಿ ಕಾರ್ಯಕ್ರಮ ಮಾಡಿಸುತ್ತಿಲ್ಲ. ಪ್ರತಿಷ್ಠಾನವು ರಾಣಿ ಅಬ್ಬಕ್ಕಳ ಚರಿತ್ರೆಯನ್ನು ಉಳ್ಳಾಲ ಮತ್ತು ಮಂಗಳೂರಿಗೆ ಸೀಮಿತಗೊಳಿಸದೇ ರಾಷ್ಟ್ರಮಟ್ಟಕ್ಕೆ ಸಾಧನೆ ಪಸರಿಸುವಂತಾಗಲು ಕಾರ್ಯಕ್ರಮ ನಡೆಸುತ್ತಾ ಬಂದಿದೆ. ದೆಹಲಿಯಲ್ಲಿ ವಸಂತ್‌ ಶೆಟ್ಟಿ ನೇತೃತ್ವದಲ್ಲಿ , ತುಉಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆಗೆ ರಾಣಿ ಅಬ್ಬಕ್ಕಳ ಮಹತ್ವವನ್ನು ದೇಶಕ್ಕೆ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದೆ. ಗೇಟ್‌ ವೇ ಆಫ್‌ ಇಂಡಿಯಾದಲ್ಲೂ ಕಾರ್ಯಕ್ರಮಗಳು ನಡೆದಿದ್ದು, ಇದೀಗ ವಿದ್ಯಾರ್ಥಿಗಳಲ್ಲಿ ರಾಣಿ ಅಬ್ಬಕ್ಕಳ ಮಹತ್ವವನ್ನು ಸಾರಲು, ಇತಿಹಾಸದ ತಿಳುವಳಿಕೆ, ಸಂವಹನದ ಶಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಷ್ಠಾನ ಕೈಜೋಡಿಸಿದೆ.

ಕಸಾಪ ಉಳ್ಳಾಲ ತಾಲೂಕು ಘಟಕ ತನ್ನದೇ ಶೈಲಿಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇದೀಗ ಪ್ರಥಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಸಾಹಿತ್ಯ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಇಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಐಕ್ಯತೆ, ಸಂವಹನಶಕ್ತಿಯೂ ಹೆಚ್ಚಾಗಲಿದೆ.
ಚಂದ್ರಹಾಸ್‌ ಶೆಟ್ಟಿ

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನ – ವ್ಯಕ್ತಿಯ ರಕ್ಷಣೆ

March 2, 2026

ಸೈಂಟ್ ಜೋಯ್ ಲ್ಯಾಂಡ್ ಕೊಲ್ಯ- ಸೋಮೇಶ್ವರ ಇಲ್ಲಿನ ವಿದ್ಯಾರ್ಥಿನಿ ಶೀತಲ್. ಎಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ

February 27, 2026

ಮುಡಿಪಿನಲ್ಲಿ “ಗೋ ಗ್ಯಾಸ್” ವಿಶೇಷ ಹೊಸ ವರ್ಷದ ಆಫರ್

February 26, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ವಿದೇಶಿ ಕರೆನ್ಸಿ ಅಕ್ರಮ ಸಾಗಾಟ – ಓರ್ವ ಪುರುಷ, ಇಬ್ಬರು ಮಹಿಳೆಯರು ಸೆರೆ

By UllalaVaniMarch 2, 20260

ಮಂಗಳೂರು, ಮಾ. 02: ಸುಮಾರು 80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗುತ್ತಿದ್ದ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಇರಾನ್ ದಾಳಿ ; ಕರಾವಳಿಗರಲ್ಲಿ ಆತಂಕ ಬೇಡ – ಅನಿವಾಸಿ ಭಾರತೀಯರ ಮಾಹಿತಿ

March 2, 2026

ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನ – ವ್ಯಕ್ತಿಯ ರಕ್ಷಣೆ

March 2, 2026

ಇರಾನ್ ಮೇಲೆ ದಾಳಿ;ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನ ಸೇವೆಗಳಲ್ಲಿ ವ್ಯತ್ಯಯ…!!

February 28, 2026
1 2 3 … 1,819 Next
Automatic YouTube Gallery

ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭ

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳೀನ್ ಕಟೀಲ್ ಮಾಹಿತಿ

#ullalavani #news #tulunad #ullala #latestnews #breakingnews #package #mangalore #Sasihitlutemple
ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
Now Playing
ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ...
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭ

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳೀನ್ ಕಟೀಲ್ ಮಾಹಿತಿ

#ullalavani #news #tulunad #ullala #latestnews #breakingnews #package #mangalore #Sasihitlutemple
ಕೊಣಾಜೆ:ಮಂಗಳಾ ಅಲ್ಯುಮಿನಿ ಮೀಟ್ ಸ್ಮೃತಿ ಸಂಗಮ ಕಾರ್ಯಕ್ರಮಕ್ಕೆ ಚಾಲನೆ
Now Playing
ಕೊಣಾಜೆ:ಮಂಗಳಾ ಅಲ್ಯುಮಿನಿ ಮೀಟ್ ಸ್ಮೃತಿ ಸಂಗಮ ಕಾರ್ಯಕ್ರಮಕ್ಕೆ ಚಾಲನೆ
ಮಂಗಳಾ ಅಲ್ಯುಮಿನಿ ಮೀಟ್ ಸ್ಮೃತಿ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ;ಮಂಗಳೂರು ...
ಮಂಗಳಾ ಅಲ್ಯುಮಿನಿ ಮೀಟ್ ಸ್ಮೃತಿ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ;ಮಂಗಳೂರು ವಿಶ್ವವಿದ್ಯಾನಿಲಯದ ಸ್ಪೋರ್ಟ್ಸ್ ಮೈದಾನದಲ್ಲಿ ಆಯೋಜನೆ

ವೆಬ್ಸೈಟ್ ಅನಾವರಣಗೊಳಿಸಿದ ಕಣಚೂರು ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು

#ullalavaninews #ullalavani #ullala #ullalvaninewspaper #mangloreunivercity
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d