Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಪ್ರೆಸ್ ಕ್ಲಬ್ ಉಳ್ಳಾಲ ನೇತೃತ್ವದಲ್ಲಿತಿಂಗಳ ಬೆಳಕು – ಸೌಹಾರ್ದ ದೀಪಾವಳಿ ಸಂಭ್ರಮದಲ್ಲಿಮೂವರು ಸಾಧಕರಿಗೆ ಸನ್ಮಾನ

UllalaVaniBy UllalaVaniNovember 7, 2024Updated:November 7, 2024No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಪ್ರೆಸ್ ಕ್ಲಬ್ ಉಳ್ಳಾಲ ನೇತೃತ್ವದಲ್ಲಿ ನಡೆದ ತಿಂಗಳ ಬೆಳಕು- ಸೌಹಾರ್ದ ದೀಪಾವಳಿ ಕಾರ್ಯಕ್ರಮದಲ್ಲಿ ಹೊರನಾಡ ಕನ್ನಡಿಗ, ಸಮಾಜಸೇವಕ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನ ಮನೆ, ಇಸ್ಮಾಯಿಲ್ ಕಣಂತೂರು ಬಾಳೆಪಣಿ, ರೀಚಲ್ ಫೌಂಡೇಷನ್ ಸ್ಥಾಪಕಾಧ್ಯಕ್ಷ ಸಿರಿಲ್ ರಾಬರ್ಟ್ ಡಿಸೋಜ ಸೇರಿದಂತೆ ಮೂವರು ಸಾಧಕರನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ, ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ ಮಾತನಾಡಿ,
ನಂಬಿಕೆಯ ಕ್ರಿಯಾತ್ಮಕ ರೂಪವೇ ಆಚರಣೆ . ನಂಬಿಕೆಯ ನೆಲಗಟ್ಟಿನಲ್ಲಿ ಹಬ್ಬಗಳ ಆಚರಣೆಗಳು ನೆಲೆನಿಂತಿದೆ. ಮತಗಳ ಮಾತ್ರ ಬೇರೆಯಾದರೂ ಧರ್ಮ ಒಂದೇ ಆಗಿದೆ. ಆಧುನಿಕವಾಗಿ ಸಮಾಜ ಬೆಳೆಯುತ್ತಿದ್ದರೂ ಆತ್ಮಜ್ಞಾನ ಅನ್ನುವಂತದ್ದು ಬೆಳೆದಿಲ್ಲ, ಅಂತರಂಗ ಸಂಸ್ಕಾರ ಬೆಳೆಯಬೇಕಿದೆ. ವೈಜ್ಞಾನಿಕತೆಯಿಂದ ಸಾಧ್ಯವಿಲ್ಲ. ಒಳ್ಳೆಯ ಮನಸ್ಸಿನಿಂದ ಸಾಧ್ಯ. ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ಹಬ್ಬದಾಚರಣೆಯಲ್ಲಿ ಸಾಧಕರನ್ನು ಗುರುತಿಸುವ ಕಾರ್ಯ ಸಂಸ್ಕಾರಯುತ ಕಾರ್ಯಕ್ರಮವಾಗಿದೆ ಎಂದರು.

ಗೌರವ ಸ್ವೀಕರಿಸಿದ ಪ್ರವೀಣ್ ಶೆಟ್ಟಿ ಮೇಗಿನಮನೆ ಮಾತನಾಡಿ, ಸಮಾಜದಿಂದ ಯಾವುದನ್ನೂ ನಿರೀಕ್ಷಸದೆ ಸೇವೆಯನ್ನು ನಡೆಸುತ್ತಾ ಬಂದಿರುವೆನು. ಸರಳತೆಯಿಂದ ಬದುಕುವುದಷ್ಟೇ ನನ್ನ ಕನಸು. ಜನರ ನಡುವೆ ಗುರುತಿಸಬೇಕು ಎಂದು ಸಹಾಯ ಮಾಡಿದವನಲ್ಲ. ಮಕ್ಕಳಿರುವಾಗ ಬಹಳಷ್ಟು ಕಷ್ಟದ ದಿನಗಳಾಗಿತ್ತು. ಅದೇ ಪ್ರೇರಣೆಯಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ನೆಮ್ಮದಿ ಆರೋಗ್ಯವನ್ನು ಕಂಡಿದ್ದೇನೆ. ಕೊರೊನಾ ಸಂದರ್ಭದಲ್ಲಿ ಬಿಲ್ ಪಾವತಿಸಲು ಅಸಾಧ್ಯವಾಗಿ ಆಸ್ಪತ್ರೆಯಲಿ ಬಾಕಿಯುಳಿದಿದ್ದವರನ್ನು ಪತ್ರಕರ್ತರ ಮಾಹಿತಿಯಿಂದ ಬಿಡುಗಡೆಗೊಳಿಸಿದ್ದೇನೆ. ಸಮಾಜಸೇವೆಗೆ ಪತ್ರಕರ್ತರೇ ಸ್ಪೂರ್ತಿಯಾಗಿದ್ದಾರೆ ಎಂದರು.
ಸಿರಿಲ್ ರಾಬರ್ಟ್ ಡಿಸೋಜ ಮಾತನಾಡಿ, ಸಮಾಜಸೇವೆಗೆ ತಾಯಿಯೇ ಪ್ರೇರಣೆ. ನೇರ ನಡೆ, ನುಡಿ ವ್ಯಕ್ತಿತ್ವವನ್ನು ಜೀವನದಲ್ಲಿ ಅನುಸರಿಸುತ್ತಾ, ಗ್ರೂಪ್ ಡಿಸರಕಾರಿ ನೌಕರನಾಗಿದ್ದರೂ, ಕೆಲಸದ ಬಹುಪಾಲು ಸಮಾಜಸೇವೆಯಲ್ಲಿ ಮೀಸಲಿಟ್ಟಿದ್ದೆನು. ಇದೀಗ ನಿವೃತ್ತನಾದ ನಂತರವೂ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಅಶಕ್ತರ ಧ್ವನಿಯಾಗಲು ಬಯಸಿದ್ದೇನೆ. ಶಿವಾಜಿ ಫ್ರೆಂಡ್ಸ್ ಕ್ಲಬ್ ಸಂಘ ತನ್ನ ಬೆನ್ನೆಲುಬಾಗಿ ನಿಂತು ಕ್ರೀಡೆಯಲ್ಲಿ, ತೊಡಗಿಸಿಕೊಳ್ಳಲು ಸಹಕಾರಿಯಾಯಿತು. ಕಬ್ಬಡ್ಡಿ ಪಂದ್ಯಾಟವನ್ನು ಆಯೋಜಿಸುತ್ತಾ ಯುವಕರಲ್ಲಿ ಕ್ರೀಡಾಸ್ಪೂರ್ತಿ ತುಂಬಲು ಸಂಘದ ಜತೆಗೆ ಪತ್ರಕರ್ತರ ಪಾತ್ರವೂ ಮಹತ್ವದ್ದಾಗಿದೆ ಎಂದರು.
ಸಮಾಜಸೇವಕ ಇಸ್ಮಾಯಿಲ್ ಕಣಂತೂರು ಬಾಳೆಪುಣಿ ಮಾತನಾಡಿ, ಗುಜಿರಿ ವ್ಯಾಪಾರಿಯಾಗಿ ಸಮಾಜಸೇವೆಂiÀiಲ್ಲಿ ತೊಡಗಿಸಿಕೊಂಡ ಫಲವಾಗಿ ಇಂದು 5 ಕ್ಕೂ ಹೆಚ್ಚಿನ ದೇಶದವರು ಮನೆಗೆ ಬಂದು ಸಂದರ್ಶನ ಪಡೆದುಕೊಂಡಿದ್ದಾರೆ. ಆಂಗ್ಲಭಾಷೆ ಗೊತ್ತಿಲ್ಲದೇ ಇದ್ದರೂ ಒಂಬುಡ್ಸ್ ಮೆನ್ ಸಹಾಯದಿಂದ ಅರ್ಥವನ್ನು ಮಾಡಿಕೊಂಡಿದ್ದೇನೆ. ಕಳೆದುಹೋದ ಚಿನ್ನ, ಕಳವು ನಡೆಸಿದ ಆರೋಪಿಗಳ ಹುಡುಕಾಡುವಲ್ಲಿ, ಅಪಘಾತದ ಸಂದರ್ಭ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಗುಜರಿ ವ್ಯಾಪಾರದೊಂದಿಗೆ ನಿರಂತರವಾಗಿ ನಡೆಸುತ್ತಾ ಬಂದಿರುವೆ. ಬಹುಮುಖ್ಯವಾಗಿ ಪ್ಲಾಸ್ಟಿಕ್ ವಿರೋಧಿ ಆಂದೋಲನದಲ್ಲಿ ಜನಶಿಕ್ಷಣ ಟ್ರಸ್ಟ್ ಜೊತೆಗೆ ಕೈಜೋಡಿಸಿರುವ ನಾನು, ಗುಜರಿ ಹೆಕ್ಕಲು ಮನೆಗಳಿಗೆ ತೆರಳುವ ಸಂದರ್ಭ ಪ್ರತೀ ಮನೆಗಳಲ್ಲಿ ಪ್ಲಾಸ್ಟಿಕ್ ಉರಿಸದಂತೆ, ಉಪಯೋಗಿಸದಂತೆ, ಉಪಯೋಗಿಸಿದ ಪ್ಲಾಸ್ಟಿಕ್ ಅನ್ನು ಸಮರ್ಪಕವಾಗಿ ಜೋಡಿಸಿ ಕಸವಿಲೇವಾರಿ ನಡೆಸುವಂತೆ ಒತ್ತಾಯಿಸುತ್ತಾ ಬಂದಿರುವೆನು ಎಂದರು.
ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್ ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಬಶೀರ್ ಕಲ್ಕಟ್ಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ನಿರೂಪಿಸಿದರು. ಉಪಾಧ್ಯಕ್ಷ ದಿನೇಶ್ ನಾಯಕ್ ತೊಕ್ಕೊಟ್ಟು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಸತೀಶ್ ಪುಂಡಿಕಾಯಿ, ಉಪಾಧ್ಯಕ್ಷ ಆರೀಫ್ ಯು.ಆರ್, ಕಾರ್ಯದರ್ಶಿ ಸತೀಶ್ ಕೊಣಾಜೆ ಅತಿಥಿಗಳ ಪರಿಚಯ ಮಾಡಿದರು. ವಜ್ರ ಗುಜರನ್ ವಂದಿಸಿದರು
ಪತ್ರಕರ್ತರುಗಳಾದ ಸುಪ್ರೀತ್ ಭಂಡಾರಿ, ಆಸೀಫ್ ಬಬ್ಬುಕಟ್ಟೆ, ಶಿವಶಂಕರ್, ಮೋಹನ್ ಕುತ್ತಾರ್, ಅನ್ಸಾರ್ ಇನೋಳಿ, ಅಶ್ವಿನ್ , ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ :  ಪ್ರಶಾಂತ ಕಾಜವ

May 26, 2026

ಮಂಗಳೂರು: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ ಮತ್ತೊರ್ವ ಆರೋಪಿಯ ಬಂಧನ

May 26, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026

Comments are closed.

Advertise
ಸಂಪರ್ಕಿಸಿ

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025
All News

ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ :  ಪ್ರಶಾಂತ ಕಾಜವ

By UllalaVaniMay 26, 20260

ಕೊಣಾಜೆ: ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರಾದ ಪ್ರಶಾಂತ…

ಮಂಗಳೂರು: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ ಮತ್ತೊರ್ವ ಆರೋಪಿಯ ಬಂಧನ

May 26, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026

70 ವರ್ಷದ ಹಿರಿಯ ನಾಗರಿಕಳಿಗೆ ಗ್ಯಾಸ್ ಸಪ್ಲೈ ನಿರಾಕರಣೆ : ಆಹಾರ ಇಲಾಖೆಗೆ ದೇವಕಿ ಕೊಟ್ಯಾನ್ ಮನವಿ

May 26, 2026
1 2 3 … 1,935 Next
Automatic YouTube Gallery

ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯಕ್ಕೆ ಕಲಿಯುವ ಸ್ವಾತಂತ್ರ್ಯ ನೀಡಿದೆ; ಡಾ.ಯೆಸ್.ಯೆಸ್ ಇಂಜಗಣೇರಿ

ಪ್ರಾಜೆಕ್ಟ್ ಸಂಕಲ್ಪ್ ಕೋಡ್ 4 ಚೇಂಜ್ ರಾಷ್ಟ್ರೀಯ 24ಗಂಟೆಗಳ ಹ್ಯಾಕಥಾನ್ ;ಯೆನೆಪೋಯ ವಿಶ್ವವಿದ್ಯಾಲಯದ ಯೆಂಡ್ಯೂರನ್ಸ್ ಝೋನ್ ಸಭಾಂಗಣದಲ್ಲಿ ಚಾಲನೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸಹ್ಯಾದ್ರಿ ಇಂಜಿನಿಯರಿoಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜು ಪ್ರಾಂಶುಪಾಲರಾದ ಡಾ.ಯೆಸ್.ಯೆಸ್ ಇಂಜಗಣೇರಿ

📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯಕ್ಕೆ ಕಲಿಯುವ ಸ್ವಾತಂತ್ರ್ಯ ನೀಡಿದೆ; ಡಾ.ಯೆಸ್.ಯೆಸ್ ಇಂಜಗಣೇರಿ
Now Playing
ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯಕ್ಕೆ ಕಲಿಯುವ ಸ್ವಾತಂತ್ರ್ಯ ನೀಡಿದೆ; ಡಾ.ಯೆಸ್.ಯೆಸ್ ಇಂಜಗಣೇರಿ
ಪ್ರಾಜೆಕ್ಟ್ ಸಂಕಲ್ಪ್ ಕೋಡ್ 4 ಚೇಂಜ್ ರಾಷ್ಟ್ರೀಯ 24ಗಂಟೆಗಳ ಹ್ಯಾಕಥಾನ್ ;ಯೆನೆಪೋಯ ...
ಪ್ರಾಜೆಕ್ಟ್ ಸಂಕಲ್ಪ್ ಕೋಡ್ 4 ಚೇಂಜ್ ರಾಷ್ಟ್ರೀಯ 24ಗಂಟೆಗಳ ಹ್ಯಾಕಥಾನ್ ;ಯೆನೆಪೋಯ ವಿಶ್ವವಿದ್ಯಾಲಯದ ಯೆಂಡ್ಯೂರನ್ಸ್ ಝೋನ್ ಸಭಾಂಗಣದಲ್ಲಿ ಚಾಲನೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸಹ್ಯಾದ್ರಿ ಇಂಜಿನಿಯರಿoಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜು ಪ್ರಾಂಶುಪಾಲರಾದ ಡಾ.ಯೆಸ್.ಯೆಸ್ ಇಂಜಗಣೇರಿ

📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾರ್ಮಿಕರಿಗೆ ಸರಕಾರ ನೀಡುವ ಸೌಲಭ್ಯಗಳ ಪ್ರಯೋಜನ ಪಡೆಯಲು ಸ್ಪೀಕರ್ ಯು.ಟಿ. ಖಾದರ್ ಕರೆ
Now Playing
ಕಾರ್ಮಿಕರಿಗೆ ಸರಕಾರ ನೀಡುವ ಸೌಲಭ್ಯಗಳ ಪ್ರಯೋಜನ ಪಡೆಯಲು ಸ್ಪೀಕರ್ ಯು.ಟಿ. ಖಾದರ್ ಕರೆ
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ;ಹಿರಿಯ ಅಸಂಘಟಿತ ಕಾರ್ಮಿಕರಿಗೆ ...
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ;ಹಿರಿಯ ಅಸಂಘಟಿತ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ

ನಾಟೆಕಲ್ ತಿಪ್ಪೆಪದವು ಅಲ್ ಮದಿನಾ ಕಮ್ಯುನಿಟಿ ಹಾಲ್‌ನಲ್ಲಿ ಕಾರ್ಯಕ್ರಮ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version