ದೇರಳಕಟ್ಟೆ : ಮಳೆ ನೀರು ಹರಿಯಲು ನಡೆಸಿದ ಅಗೆತದಿಂದಾಗಿ ಬೆಳ್ಮ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರ ಮನೆಯ ಅಂಗಳ ಕುಸಿತಗೊಂಡು, ಇದೀಗ ಮನೆಯೂ ಕುಸಿಯುವ ಹಂತದಲ್ಲಿದೆ. ಜಿಲ್ಲಾಡಳಿತ ತಕ್ಷಣವೇ ಕ್ರಮಕೈಗೊಳ್ಳುವಂತೆ ಹಾಗೂ ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆಗೊಳಿಸುವಂತೆ ಪಂ. ಸದಸ್ಯೆ ಮನವಿಯನ್ನು ಮೂರು ತಿಂಗಳಿನಿAದ ಮಾಡುತ್ತಾ ಬಂದರೂ ಈವರೆಗೆ ಪರಿಹಾರ ಸಿಕ್ಕಿಲ್ಲ.
ಬೆಳ್ಮ ಗ್ರಾಮದ ದೇರಳಕಟ್ಟೆಯಿಂದ ಕಾನಕೆರೆ ಸಂಪರ್ಕಿಸುವ ಇಳಿಜಾರು ಪ್ರದೇಶದಲ್ಲಿ ಇರುವ ಬೆಳ್ಮ ಗ್ರಾ.ಪಂ ಸದಸ್ಯೆ ಪುಷ್ಪಲತಾ ರೈ ಎಂಬವರ ಮನೆ ಅಪಾಯದಂಚಿನಲ್ಲಿ ಸಿಲುಕಿದೆ. ಬೆಳ್ಮ ಗ್ರಾಮದ ದೇರಳಕಟ್ಟೆಯಿಂದ ಕಾನಕೆರೆಯನ್ನು ಸಂಪರ್ಕಿಸುವ ರಸ್ತೆ ಇಳಿಜಾರು ಪ್ರದೇಶದಲ್ಲಿದ್ದು, ಮಳೆಗಾಲ ಆರಂಭದಲ್ಲಿ ಮಳೆ ನೀರು ಹರಿದು ಹೋಗಲು ಲೋಕೋಪಯೋಗಿ ಇಲಾಖೆ ಚರಂಡಿ ನಿರ್ಮಿಸಿತ್ತು. ಈ ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಮಣ್ಣು ಅಗೆತದಿಂದ ಈ ಕುಸಿತ ಆರಂಭಗೊAಡಿದ್ದು, ಪ್ರತೀ ಬಾರಿ ಮಳೆ ಬಂದಾಗಲೂ ಹಂತ ಹಂತವಾಗಿ ಮಣ್ಣು ಕುಸಿದು ಇದೀಗ ಮನೆ ಕುಸಿಯುವ ಭೀತಿಯಲ್ಲಿದೆ.





