ಮಾಡೂರು : ಅವಿವಾಹಿತರೊಬ್ಬರು ಬಾಡಿಗೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟೆಕಾರು ಪ.ಪಂ ವ್ಯಾಪ್ತಿಯ ಮಾಡೂರು ಸಮೀಪ ನಡೆದಿದೆ.
ಬಾಡಿಗೆ ಮನೆಯ ನಿವಾಸಿ ಹರೀಶ್ (೩೫) ಆತ್ಮಹತ್ಯೆ ನಡೆಸಿದವರು. ಮರ ಹಾಗೂ ಚಿನ್ನದ ಕೆಲಸ ನಿರ್ವಹಿಸುತ್ತಿದ್ದ ಅವರು ಮನೆಯಲ್ಲಿ ಒಂಟಿಯಾಗಿದ್ದರು. ಅವಿವಾಹಿತರಾಗಿರುವ ಇವರು ಮೂರು ವರ್ಷಗಳಿಂದ ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಹರೀಶ್ ಪತ್ತೆಯಾಗಿದ್ದಾರೆ. ಮೃತರ ಸಂಬAಧಿಕರು ಮಡ್ಯಾರು ಸಮೀಪ ವಾಸಿಸುತ್ತಿದ್ದರು. ಸ್ಥಳೀಯವಾಗಿ ಹೆಚ್ಚು ಮಾತನಾಡದ ವ್ಯಕ್ತಿತ್ವದ ಹರೀಶ್ , ಖಿನ್ನತೆಯಿಂದ ಕೃತ್ಯ ಎಸಗಿರುವ ಶಂಕೆಯಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಶವಮಹಜರಿಗೆ ಕಳುಹಿಸಿದ್ದಾರೆ.


