Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
All News

ದೈವಾರಾಧನೆಗೆ ಭದ್ರತೆಯ ಬುನಾದಿಯನ್ನು ಕೊಡುವ ಕೆಲಸ ಉಳ್ಳಾಲದ ಮಾರುತಿ ಯುವಕ ಮಂಡಲ, ಜನಸೇವಾ ಸಂಘ ಮಾಡಿದೆ : ಉಪನ್ಯಾಸಕ ಡಾ| ಅರುಣ್ ಉಳ್ಳಾಲ್

UllalaVaniBy UllalaVaniSeptember 22, 2024No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಅಬ್ಬಕ್ಕ ಮೊಗವೀರರನ್ನೇ ಸಹಬಲ ಮಾಡಿದಳೆಂಬುದಕ್ಕೆ ಮಾರುತಿ ಇದೀಗ ನಡೆಸುತ್ತಿರುವ ಸ್ವಾಭಿಮಾನದ ಕೆಚ್ಚೆದೆಯ ಕೆಲಸಗಳೇ ಸಾಕ್ಷಿಯಾಗಿದೆ. ಮಾರುತಿದ್ವಯ ಸಂಸ್ಥೆಗಳು ಸಮಗ್ರ ತುಳುನಾಡಿನ ಸಾಂಸ್ಕøತಿಕ ಅಸ್ಮಿತೆಯಾಗಿರುವ ದೈವಾರಾಧನೆಗೆ ಭದ್ರತೆಯ ಬುನಾದಿಯನ್ನು ಕೊಡುವ ಕೆಲಸ ಮಾಡಿದೆ. ಅಬ್ಬಕ್ಕಳ ಹಾಗೆಯೇ ಉಳ್ಳಾಲದ ನಾಡಿಗಾಗಿ ಅವಿರತ ಶ್ರಮವಹಿಸಿದ ಚೆನ್ನಮರಕಾಲ ಹೆಸರಿನಲ್ಲಿ ರಸ್ತೆ, ದ್ವಾರಗಳ ನಿರ್ಮಾಣವಾಗಬೇಕಿದೆ. ಚೆನ್ನಮರಕಾಲನಿಗೆ ಸೂಚಿಸಬೇಕಾದ ಗೌರವ, ಶಾಶ್ವತವಾಗಿ ಉಳಿಯಬೇಕಾದ ಕುರುಹುಗಳ ಕುರಿತು ಮಾರುತಿ ಯುವಕ ಮಂಡಲ ಯೋಜನೆಗಳನ್ನು ರೂಪಿಸಬೇಕಿದೆ. ಪ್ರತಿಭಾ ಪುರಸ್ಕಾರ ಪಡೆದ ಸಾಮಾಜಿಕ ಋಣ ಅನ್ನುವ ಉದ್ದೇಶದೊಂದಿಗೆ ಸಮಾಜಕ್ಕೆ ವಾಪಸ್ಸು ನೀಡುವವರಾಗಿರಿ ಎಂದು ಸಂತ ಆಗ್ನೇಸ್ ಕಾಲೇಜು ಮಂಗಳೂರಿನ ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ಹೇಳಿದರು.
ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಮಾರುತಿ ವೇದಿಕೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಮೊಗವೀರಪಟ್ನದ ಮಾರುತಿ ಜನ ಸೇವಾ ಸಂಘ, ಮಾರುತಿ ಯುವಕ ಮಂಡಲ ಇದರ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಗೌರವ ಧನ ಪ್ರಧಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸಗೈದು ಮಾತನಾಡಿದರು.
ಮಾರುತಿ ಜನಸೇವಾ ಸಂಘದ ಅಧ್ಯಕ್ಷ ಸಂದೀಪ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು.
ಗೌರವ ಅತಿಥಿಗಳಾಗಿ ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಯಶವಂತ್ ವಿ. ಅಮೀನ್ , ಉಳ್ಳಾಲ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬಾಲಕೃಷ್ಣ ಹೆಚ್. ಎನ್, ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಬೊಕ್ಕಪಟ್ನ ಬೆಂಗ್ರೆ, ನಮ್ಮ ಕುಡ್ಲ ವಾಹಿನಿಯ ನಿರೂಪಕಿ ಡಾ| ಪ್ರಿಯಾ ಹರೀಶ್, ಮತ್ಸ್ಯೋದ್ಯಮಿಗಳಾದ ಎಸ್.ಎಮ್ ಫಾರುಕ್, ಸಿಂಧೂರಾಮ್ ಪುತ್ರನ್, ಸೂರಜ್ ಮಂಗಳೂರು, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾದೇಶಿಕ ಸಹಕಾರ ಸಂಘದ ಅಧ್ಯಕ್ಷ ವರದರಾಜ್ ಬಂಗೇರ , ಪ್ರಧಾನ ಸಂಚಾಲಕ ಸುಧೀರ್ ವಿ.ಅಮೀನ್, ಗೌರವಾಧ್ಯಕ್ಷ ವರದರಾಜ ಬಂಗೇರ, ಉಪಾಧ್ಯಕ್ಷ ಪ್ರಶಾಂತ್ ಜಿ.ಉಳ್ಳಾಲ್, ಪ್ರ.ಕಾ. ಕಪಿಲ್ ಎಸ್ ಬಂಗೇರ, ಜೊತೆ ಕಾರ್ಯದರ್ಶಿ ಪವನ್ ಉಳ್ಳಾಲ್, ಕೋಶಾಧಿಕಾರಿ ಅನಿಲ್ ಚರಣ್, ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಭಾಗವಹಿಸಿದ್ದರು.
ಈ ಸಂದರ್ಭ ಅತಿಥಿಗಳು
ಮಾರುತಿ ಸಾಧಕ ಪುರಸ್ಕಾರವನ್ನು ಭಾರತೀಯ ಸೇನೆಯ ಕ್ಯಾ. ರಾಜೇಶ್ , ಅಂತರಾಷ್ಟ್ರೀಯ ಪವರ್ ಲಿಫ್ಟರ್ ವಿಜಯ್ ಕಾಂಚನ್, ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ ನ ರೋಹಿತ್ ಸಾಂಕ್ಟಸ್, ವಲ್ರ್ಡ್ ಸೈನ್ಸ್ ಸ್ಕಾಲರ್ ಹಾಗೂ ಎಪಿಜೆ ಕಲಾಂ ಪುರಸ್ಕಾರ ಪುರಸ್ಕøತ ಕುಮಾರಿ ಸಿಂಧೂರ ರಾಜ, ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಮಾ| ಚಿನ್ಮಯ್ ಜಿ.ಕೆ, ತುಳು ರಂಗಭೂಮಿ ಕಲಾವಿದ ರಂಜನ್ ಬೋಳೂರು, ಕ್ರಿಕೆಟ್ ಆಟಗಾರ ಕೃತಿನ್ ಕೆ.ಸಾಲ್ಯಾನ್ ಉಳ್ಳಾಲ ಇವರಿಗೆ ಪ್ರಧಾನ ಮಾಡಿದರು.
ಶ್ರೀ ವ್ಯಾಘ್ರ ಚಾಮುಂಡೇಶ್ವರಿ ಉಳ್ಳಾಲ ಪ್ರಧಾನ ಅರ್ಚಕರು, ಗುರಿಕಾರರು ಹಾಗೂ ದೈವ ಚಾಕರಿಯವರು ಅವರನ್ನು ಅಭಿನಂದಿಸಲಾಯಿತು. ಸಮನ್ವಯ ಕೇಂದ್ರ ಲೇಡಿಹಿಲ್ ಮಂಗಳೂರು ಉತ್ತರ ವಲಯ, ಸಿದ್ಧತಾ ಕೇಂದ್ರ ಕಾಟಿಪಳ್ಳ ಇಲ್ಲಿನ 33 ವಿಶೇಷ ಚೇತನ ಗೃಹಾಧಾರಿತ ಮಕ್ಕಳಿಗೆ ವ್ಹೀಲ್ ಚೇರ್ ಸೇರಿದಂತೆ ರೂ.35,000 ಬೆಲೆಯುಳ್ಳ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಡಾ| ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಉಳ್ಳಾಲ ಸಮುದಾಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಆಯ್ಕೆಯಾದ ಅಬ್ಬಕ್ಕ ಟಿ.ವಿ ಆಡಳಿತ ನಿರ್ದೇಶಕ ಶಶಿಧರ್ ಪೊಯ್ಯತ್ತಬೈಲ್ ಪುತ್ರಿ ಡಾ| ಚಿನ್ಮಯೀ ಪೊಯ್ಯತ್ತಬೈಲ್ ಅವರಿಗೆ ಅಭಿನಂದಿಸಲಾಯಿತು.
ಕಾಯಿಲೆಗಳಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯಹಸ್ತವನ್ನು ಚಾಚಲಾಯಿತು. ಒಟ್ಟು ರೂ.10 ಲಕ್ಷ ಯೋಜನೆಯನ್ನು ವಿನಿಯೋಗಿಸಲಾಯಿತು.
ಆರ್.ಜೆ.ಪ್ರಸನ್ನ ನಿರೂಪಿಸಿದರು. ಪ್ರಶಾಂತ್ ಬಿ. ಉಳ್ಳಾಲ ಸ್ವಾಗತಿಸಿದರು. ಅನಿಲ್ ಚರಣ್ ಪ್ರತಿಭಾ ಪುರಸ್ಕಾರದ ವಿದ್ಯಾರ್ಥಿಗಳ ವಿವರ ಓದಿದರು. ಕಪಿಲ್ ಎಸ್ ಬಂಗೇರ ವಂದಿಸಿದರು.

`ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯುತ್ತಮವಾಗಿ ಸೇವೆ ನಡೆಸಿದ ಫಲವಾಗಿ ಅತ್ಯುತ್ತಮ ನಾಗರಿಕ ಪ್ರಶಸ್ತಿಯನ್ನು ಪಡೆದುಕೊಂಡಿರುವ ಸಂಸ್ಥೆ ಮಾರುತಿಯಾಗಿದೆ. ಶವ ಸ್ನಾನ ನಡೆಸುವ ವಿಶೇಷ ಅಸ್ತ್ರವನ್ನು ಮಾನವೀಯತೆ ದೃಷ್ಟಿಯಿಂದ ಒದಗಿಸಿಕೊಟ್ಟವರು. ಜೀವನದಲ್ಲಿ ನ್ಯಾಯ, ನೀತಿ ಮತ್ತು ಪಾವಿತ್ರ್ಯತೆಯನ್ನು ಸಾಧಿಸಿದಲ್ಲಿ ಜೀವನ ಯಶಸ್ಸಾಗುವುದು. ಮನಸ್ಸು ವಿಶಾಲವಾಗಿಟ್ಟುಕೊಂಡು ಪರರ ನಿಂದಿಸದೆ, ತಮ್ಮಲ್ಲಿನ ತಪ್ಪುಗಳನ್ನು ತಿದ್ದುವವರಾಗಿರಿ’ ಎಂದರು.
ಡಾ| ಪ್ರಿಯಾ ಹರೀಶ್
ನಿರೂಪಕಿ
ನಮ್ಮ ಕುಡ್ಲ ವಾಹಿನಿ

`ಮೊಗವೀರರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಉಳ್ಳಾಲವನ್ನು ನಿಯಂತ್ರಿಸಲು ಸಾಧ್ಯ ಅನ್ನುವುದನ್ನು ಅಧಿಕಾರ ಪಡೆದುಕೊಂಡಾಗ ಕೇಳಲ್ಪಟ್ಟೆ. ಆದರೆ ಅದಕ್ಕಿಂತ ಮಿಗಿಲಾಗಿ ಸಮಸ್ತ ತಾಲೂಕಿಗೆ ಮೊಗವೀರರ ಕೊಡುಗೆ ಅಪಾರವಾಗಿದೆ. ಪರಂಪರೆಗಳನ್ನು ತಿರುಚದ ರೀತಿಯಲ್ಲಿ ಶಾರದೋತ್ಸವವನ್ನು ನಡೆಸುವವರಾಗಿರಿ. ಗುಣ ಮತ್ತು ನಡೆಗಳನ್ನು ಮರಣದಲ್ಲಿ ನೋಡುವಂತಾಗಬೇಕು’ ಎಂದರು.
ಹೆಚ್.ಎನ್.ಬಾಲಕೃಷ್ಣ
ವೃತ್ತ ನಿರೀಕ್ಷಕ
ಉಳ್ಳಾಲ ಪೊಲೀಸ್ ಠಾಣೆ

`ಮಾರುತಿ ಜನಸೇವಾ ಸಂಘದ ಸದಸ್ಯರೆಲ್ಲರೂ ಇಳಿ ಹರೆಯದಲ್ಲಿ ಕ್ರಿಕೆಟ್ ಆಟಕ್ಕಾಗಿ ಒಗ್ಗಟ್ಟಿನಿಂದ ಸಂಘ ಕಟ್ಟಿದವರು. ಈ ಮೂಲಕ ಸಮಾಜ ಸೇವೆಗೆ ನಿರಂತರವಾಗಿ ಸಂಘವನ್ನು ಉಪಯೋಗಿಸಿದವರು. ದಿನದ 18 ಗಂಟೆ ಕಾಲ ದುಡಿದು ಲಾಭದಲ್ಲಿ ಒಂದು ಅಂಶವನ್ನು ಸಮಾಜಕ್ಕೆ ಕೊಡಬೇಕು ಅನ್ನುವ ಪ್ರಯತ್ನದ ಕಾರ್ಯಕ್ರಮವಾಗಿದೆ. ಜಿಲ್ಲೆಯಾದ್ಯಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಶಕ್ತಿಯನ್ನು ದೇವರು ಸಂಸ್ಥೆಗೆ ಒದಗಿಸಿಕೊಡಲಿ’ ಎಂದು ಹಾರೈಸಿದರು.
ಅನಿಲ್ ಕುಮಾರ್ ಬೊಕ್ಕಪಟ್ನ ಬೆಂಗ್ರೆ
ಅಧ್ಯಕ್ಷರು
ಕರ್ನಾಟಕ ಪರ್ಸಿನ್ ಮೀನುಗಾರರ ಸಂಘ

`ಜಾತಿಬೇಧ ಕಾಣದೆ ಪ್ರತಿಭೆಯನ್ನು ಗುರುತಿಸಿರುವ ಕಾರ್ಯ ಶ್ಲಾಘನಾರ್ಹ. ಉತ್ತಮ ಕೆಲಸದ ಜಾಗದಲ್ಲಿ ದೇವದೂತರಿರುತ್ತಾರೆ. ಅಂತಹ ವಾತಾವರಣ ಮಾರುತಿ ಸಂಸ್ಥೆಯ ಜಾಗದಲ್ಲಿ ನಿರ್ಮಾಣವಾಗಿದೆ.
ಇಂತಹ ಸೇವೆಯಿಂದಾಗಿ ಮಾರುತಿ ಸದಸ್ಯರು ಮಾಡುತ್ತಿರುವ ಸೇವೆಗೆ ವ್ಯಾಪಾರದಲ್ಲಿ ಫಲ ಸಿಗುವಂತಾಗಲಿ. ಸಂಘ ಸಂಸ್ಥೆಗಳ ಪಿಲ್ಲರ್ ಗಟ್ಟಿಯಾಗಿರಬೇಕು ಅದು ಮಾರುತಿ ಸಂಸ್ಥೆಯಲ್ಲಿದೆ. ಈ ಮೂಲಕ ಉತ್ತಮ ಕೆಲಸಕಾರ್ಯಗಳು ನಡೆಯುತ್ತಿದೆ’ ಎಂದರು.
ಎಸ್.ಎಮ್ ಫಾರುಕ್
ಮತ್ಸ್ಯೋಧ್ಯಮಿಗಳು

`ನಾಟಕ ಆಟವಾಡಲು ಕಷ್ಟವಾದ ಸಂದರ್ಭ ಮಾರುತಿ ತಂಡದವರು ಒಗ್ಗಟ್ಟಾಗಿ ನಿಂತು ಸಹಕರಿಸಿದ ದಿನಗಳಿವೆ. ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದವ ನಾಟಕದ ಹುಚ್ಚಿನಿಂದ ನಾಟಕದ ಕಡೆಗೆ ವಾಲಿದ್ದೇನೆ. ಸಿನಿಮಾ ಅವಕಾಶಗಳು ಸಣ್ಣ ಕಲಾವಿದನಿಗೆ ಬರುತ್ತಿದ್ದು, ಎಲ್ಲರ ಆಶೀರ್ವಾದ ಅಗತ್ಯ ಬೇಕಿದೆ’ ಎಂದರು.
ರಂಜನ್ ಬೋಳೂರು
ನಟ
ತುಳುರಂಗಭೂಮಿ

`ಸಾಮಾನ್ಯ ಕ್ರಿಕೆಟ್ ಆಡುವ ಯುವಕರ ತಂಡ ಇಷ್ಟು ದೊಡ್ಡ ಛಾಪು ಮೂಡಿಸುವ ಕಾರ್ಯಗಳನ್ನು ನಡೆಸಿದಂತಹÀ ಸಂಘದ ಸದಸ್ಯರ ಕಾರ್ಯ ಶ್ಲಾಘನೀಯ. ಸಮಾಜದಲ್ಲಿನ ಸಣ್ಣ ವಿಚಾರದ ಚಿಂತನೆಗಳಿಗೆ ಮೆರುಗು ಕೊಡುವ ಕೆಲಸ ಮಾರುತಿ ಸಂಸ್ಥೆಯಿಂದ ಆಗಿದ್ದು, ಶವಸ್ನಾನಕ್ಕೆ ಶೆಡ್ ರಚಿಸುವ ಮಾನವೀಯತೆಯ ಕಾರ್ಯಕ್ಕೆ ಎಲ್ಲರು ಕೃತಜ್ಞತಾ ಭಾವ ಸಲ್ಲಿಸಬೇಕಿದೆ. ಇಂತಹ ಸಮಾಜಸೇವೆಗಳ ಮುಖೇನ ರಾಷ್ಟ್ರಪ್ರಶಸ್ತಿಯನ್ನು ರಾಷ್ಟ್ರಪತಿಯಿಂದ ಸಿಗುವಂತಾಗಲಿ. ರಾಷ್ಟ್ರಪ್ರಶಸ್ತಿ ಪಡೆದ ಸಂಸ್ಥೆಯನ್ನು ಗೌರವಿಸುವ ಕಾರ್ಯ ಮೊಗವೀರ ಸಮಾಜ ಕಾತರದಿಂದ ಕಾಯುತ್ತದೆ’ ಎಂದರು.
ಯಶವಂತ ವಿ ಅಮೀನ್
ಅಧ್ಯಕ್ಷರು
ಮೊಗವೀರ ಸಂಘ ಉಳ್ಳಾಲ

`ಕರ್ನಾಟಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸಂಘದ ಎಲ್ಲಾ ಸದಸ್ಯರುಗಳೇ ಕಾರಣ. ದುಡಿಮೆಯ ಹಲವು ಪಾಲನ್ನು ಸಮಾಜಸೇವೆಗೆ ಸದಸ್ಯರು ಮುಡಿಪಾಗಿಸಿದ್ದಾರೆ. ಮುಂದಿನ 40 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಹಲವು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಈ ಮೂಲಕ ರಾಷ್ಟ್ರಪ್ರಶಸ್ತಿಯನ್ನು ಸಂಘ ಪಡೆಯುವಂತೆ ಎಲ್ಲಾ ಸದಸ್ಯರು ಶಕ್ತಿಮೀರಿ ದುಡಿಯುವಂತ ಮನಸ್ಸನ್ನು ದೇವರು ಒದಗಿಸಿಕೊಡಲಿ’ ಎಂದರು.
ಸಂದೀಪ್ ಪುತ್ರನ್
ಅಧ್ಯಕ್ಷರು
ಮಾರುತಿ ಜನಸೇವಾ ಸಂಘದ

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಬಡ್ಡಿ ತರಬೇತಿ ಶಿಬಿರ

March 17, 2026

ಭಕ್ತಿ ಶ್ರದ್ಧೆಯ ಆರಾಧನೆ,ದಾನ,ಧರ್ಮಗಳ ಆಧಾರದಡಿ ಕ್ಷೇತ್ರದ ಶಕ್ತಿ ಬೆಳಗುತ್ತದೆ; ಕೆ.ಆರ್.ಚಂದ್ರ

March 17, 2026

ಮಂಗಳೂರು ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

March 17, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು

By UllalaVaniMarch 17, 20260

ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರ ಆದೇಶದಂತೆ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ಅಮಾನತು ಮಾಡಲಾಗಿದೆ.…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ದ್ವಿತೀಯ ಪಿಯು ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರ, ಪ್ರಾಂಶುಪಾಲರ ಸಂಘ ನಿರ್ಧಾರ

March 17, 2026

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಬಡ್ಡಿ ತರಬೇತಿ ಶಿಬಿರ

March 17, 2026

ಭಕ್ತಿ ಶ್ರದ್ಧೆಯ ಆರಾಧನೆ,ದಾನ,ಧರ್ಮಗಳ ಆಧಾರದಡಿ ಕ್ಷೇತ್ರದ ಶಕ್ತಿ ಬೆಳಗುತ್ತದೆ; ಕೆ.ಆರ್.ಚಂದ್ರ

March 17, 2026
1 2 3 … 1,836 Next
Automatic YouTube Gallery

ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ

ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ಶ್ರದ್ಧಾಂಜಲಿ

ಅಪ್ನಾ ದೇಶ್ ಮಾದರಿ ಗ್ರಾಮ ಅಭಿಯಾನದಿಂದ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ
Now Playing
ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ
ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ...
ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ಶ್ರದ್ಧಾಂಜಲಿ

ಅಪ್ನಾ ದೇಶ್ ಮಾದರಿ ಗ್ರಾಮ ಅಭಿಯಾನದಿಂದ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಂಗ್ರೆಸ್ ಕೋಮುವಾದಕ್ಕೆ ಪರಿಹಾರ..??- ಪತ್ರಕರ್ತ ನವೀನ್ ಸೂರಿಂಜೆ
Now Playing
ಕಾಂಗ್ರೆಸ್ ಕೋಮುವಾದಕ್ಕೆ ಪರಿಹಾರ..??- ಪತ್ರಕರ್ತ ನವೀನ್ ಸೂರಿಂಜೆ
ದ್ವೇಷಭಾಷಣಕಾರರನ್ನು ಮಟ್ಟಹಾಕುವಲ್ಲಿ ಇವರುಗಳು ವಿಫಲ; ಕೋಮುವಾದಿಗಳನ್ನು ...
ದ್ವೇಷಭಾಷಣಕಾರರನ್ನು ಮಟ್ಟಹಾಕುವಲ್ಲಿ ಇವರುಗಳು ವಿಫಲ; ಕೋಮುವಾದಿಗಳನ್ನು ಜೈಲಿಗಟ್ಟಬೇಕು

ಕುತ್ತಾರಿನಲ್ಲಿ ಡಿವೈಎಫ್‌ಐ ಬಹಿರಂಗ ಸಭೆಯಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಕಿಡಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d