ಮಂಗಳೂರು: ಭಾರತೀಯ ಎರಡು ನೌಕಾಪಡೆಯ ಸಬ್ ಮೆರೀನ್ ಗಳಿಗೆ ಮಂಗಳೂರಿನ ಮುಲ್ಕಿ ಹಾಗೂ ಉಡುಪಿಯ ಮಲ್ಪೆ ಹೆಸರನ್ನು ಇಡುವ ಮೂಲಕ ಕೇರಳದ ಕೊಚ್ಚಿಯ ಭಾರತೀಯ ನೌಕಾ ಪಡೆ ಶಿಪ್ ಯಾರ್ಡ್ ನಲ್ಲಿ ಅಧಿಕೃತ ಲೋಕಾರ್ಪಣೆಯನ್ನು ಮಾಡಲಾಗಿದೆ.





ಆಳವಿಲ್ಲದ ನೀರಿನಲ್ಲಿ ಚಲಿಸಬಲ್ಲ ಎರಡು ಜಲಾಂತರ್ಗಾಮಿ ನಿಗ್ರಹ ಹಡಗುಗಳು ಇದಾಗಿದ್ದು ಐಎನ್ ಎಸ್ ಮುಲ್ಕಿ ಹಾಗೂ ಐಎನ್ ಎಸ್ ಮಲ್ಪೆ ಹೆಸರಿನ ನಾಮಕರಣಗೊಂಡಿದೆ.
ಈ ಹಿಂದೆ ಇದೇ ಹೆಸರಿನ ನೌಕೆಗಳು ಭಾರತೀಯ ನೌಕಾ ಪಡೆಯಲ್ಲಿ ಇದ್ದವು 1984ರಿಂದ 2003ರವರೆಗೆ ಮುಲ್ಕಿ ಮತ್ತು ಮಲ್ಪೆ ಹೆಸರಿನ ಸ್ಪೋಟಕ ಪತ್ತೆ ನೌಕೆಗಳಿತ್ತು ಆದರೆ 2003ರಲ್ಲಿ ಇವರೆಡೂ ಸೇವೆಯಿಂದ ನಿವೃತ್ತಿಯಾಗಿತ್ತು ಮಂಗಳೂರಿನ ಮುಲ್ಕಿ ಈ ಹಿಂದೆ ರಾಜ್ಯದ ಬಂದರುಗಳಲ್ಲೊಂದಾಗಿತ್ತು. ದೇಶ-ವಿದೇಶದ ಸಣ್ಣ ಹಡಗುಗಳು ಮುಲ್ಕಿ ಬಂದರಿಗೆ ಬರುತ್ತಿದ್ದವು.ಬ್ರಿಟಿಷರ ಕಾಲದ ನಕ್ಷೆಯಲ್ಲೂ ಮುಲ್ಕಿ ಹಾಗೂ ಮಲ್ಪೆ ಹೆಸರುಗಳಿತ್ತು ಇದೀಗ ಮತ್ತೆ ಕರ್ನಾಟಕದ ಎರಡು ಪ್ರದೇಶಗಳ ಹೆಸರಿಗೆ ಭಾರತೀಯ ನೌಕಾಪಡೆ ಗೌರವ ನೀಡಿದೆ


