Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಕುಂಪಲಾಷ್ಠಮಿ ಸಂಭ್ರಮದಲ್ಲಿ ಠಕ್ಕರ್ ಪಾಲಿಟಿಕ್ಸ್!: ಪ್ರತಿಷ್ಠೆಯ ಕಣವಾಯ್ತಾ ಮೊಸರುಕುಡಿಕೆ ಉತ್ಸವ!

UllalaVaniBy UllalaVaniAugust 25, 2024Updated:August 25, 2024No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಹಬ್ಬಗಳು ಜನರ ಮನಸ್ಸನ್ನ ಕಟ್ಟಬೇಕು, ಭಾವನೆಗಳನ್ನ ಬೆಸೆಯಬೇಕು ಅಂತಾರೆ. ವರ್ಷಕ್ಕೊಮ್ಮೆಯಾದ್ರೂ ಜನರನ್ನ ಒಟ್ಟು ಸೇರಿಸಿ ಸಂಭ್ರಮ ಪಡೋಕ್ಕಾದ್ರೂ ಹಬ್ಬಗಳು ಆಚರಣೆಯಲ್ಲಿರಬೇಕು. ಆಗ ಮಾತ್ರ ಒಂದು ಗ್ರಾಮ ಒಟ್ಟಾಗಿ ಸಂಭ್ರಮಿಸಿ ಉತ್ಸವಗಳ ಆಚರಣೆಯ ಜೊತೆಜೊತೆಗೆ ಮನಸ್ಸುಗಳು ಬೆಸೆಯಲು ಸಾಧ್ಯ. ಈ ಕಾರಣಕ್ಕಾಗಿಯೇ ಶ್ರೀಕೃಷ್ಣ ಜನ್ಮಾಷ್ಟಮಿ ನೆಪದಲ್ಲಿ ನಡೆಯೋ ಮೊಸರು ಕುಡಿಕೆ ಉತ್ಸವಗಳು ಆಯಾ ಗ್ರಾಮಗಳ ಜನರ ಸಂಭ್ರಮದ ಕೇಂದ್ರಬಿಂದುವಾಗಿ ನಿಂತಿದೆ. ಆದರೆ ಇಂಥ ಸಂಭ್ರಮಗಳ ಮಧ್ಯೆ ಕೆಲವೊಮ್ಮೆ ಸಣ್ಣಗೆ ತೂರಿಕೊಳ್ಳುವ ರಾಜಕೀಯ ಎಂಬ ತೆಳುರೇಖೆಗಳು ಸದ್ದಿಲ್ಲದೇ ಆ ಭಾಗದ ರಾಜಕೀಯ ವೈಮನಸ್ಸುಗಳತ್ತ ಬೆಳಕು ಚೆಲ್ಲುತ್ತವೇ. ಅಸಲಿಗೆ ಇಷ್ಟೆಲ್ಲಾ ಹೇಳೋಕೆ ಕಾರಣವಾಗಿದ್ದು ಉಳ್ಳಾಲದ ಜನಪ್ರಿಯ ಕುಂಪಲಾಷ್ಟಮಿ ಸಡಗರದ ಮಧ್ಯೆ ಭಾರೀ ಚರ್ಚೆ ಹುಟ್ಟು ಹಾಕಿರೋ ಠಕ್ಕರ್ ಪಾಲಿಟಿಕ್ಸ್. ಅಷ್ಟಕ್ಕೂ ಕುಂಪಲಾಷ್ಟಮಿ ಮಧ್ಯೆ ಇದೆಂಥಾ ಠಕ್ಕರ್ ಪಾಲಿಟಿಕ್ಸ್ ಅನ್ನೋ ಚರ್ಚೆಗೆ ವೇದಿಕೆ ಒದಗಿಸಿದ್ದು ಕುಂಪಲದ ಮುಖ್ಯ ರಸ್ತೆಗಳಲ್ಲಿ ರಾರಾಜಿಸ್ತಿರೋ ಬ್ಯಾನರ್ ಗಳು…!

ಗ್ರಾಮದ ಹಬ್ಬದಲ್ಲಿ ಇದೆಂಥಾ ವಿಭಜನೆ?

ಸೋಮವಾರ ಕುಂಪಲಾಷ್ಟಮಿ ಸಂಭ್ರಮ. ಪ್ರತೀ ವರ್ಷದಂತೆ ಈ ಬಾರಿಯೂ ಬಾಲಕೃಷ್ಣ ಮಂದಿರದ ಕುಂಪಲಾಷ್ಟಮಿ ಮೊಸರು ಕುಡಿಕೆ ಸಂಭ್ರಮಕ್ಕೆ ಇಡೀ ಕುಂಪಲವೇ ನವವಧುವಿನಂತೆ ಶೃಂಗಾರಗೊಂಡಿದೆ. ಒಂದು ಗ್ರಾಮದ ಉತ್ಸವ ಅಂದ ಮೇಲೆ ಅಲ್ಲೆಲ್ಲಾ ಒಂದಷ್ಟು ಶುಭಾಶಯದ ಬ್ಯಾನರ್ ಗಳು ರಾರಾಜಿಸೋದು ಸಹಜ. ಅದೇ ರೀತಿ ಕುಂಪಲಾಷ್ಟಮಿ ಬ್ಯಾನರ್ ಗಳು ಇಡೀ ಗ್ರಾಮದಲ್ಲಿ ರಾರಾಜಿಸ್ತಿವೆ. ಆದರೆ ಇದರ ಮಧ್ಯೆ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವೆ ಹೆಸರಿನಲ್ಲಿ ಎದ್ದುನಿಂತಿರೋ ಬ್ಯಾನರ್ ಗಳು ಹಲವರ ಅಚ್ಚರಿಕೆ ಕಾರಣವಾಗಿದೆ. ಅಸಲಿಗೆ ಈ ಬ್ಯಾನರ್ ನಲ್ಲಿ ಉಲ್ಲೇಖಿಸಿರೋ ಕಾರ್ಯಕ್ರಮದ ಬಗ್ಗೆಯೇ ಹಲವರಿಗೆ ಅಚ್ಚರಿಯಾಗಿದೆ. ಸೋಮವಾರ ಕುಂಪಲಾಷ್ಟಮಿ ಪ್ರಯುಕ್ತ ಸಂಜೆ ಇಡೀ ಗ್ರಾಮದಲ್ಲಿ ‌ಮೊಸರು ಕುಡಿಕೆ ಸಂಭ್ರಮ ನಡೆದ್ರೆ ಅದೇ ಕುಂಪಲ ಶಾಲೆಯ ಮೈದಾನದಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಪ್ರತ್ಯೇಕ ಕಾರ್ಯಕ್ರಮವೊಂದನ್ನ ಆಯೋಜಿಸಲಾಗಿದೆ. ಅತ್ತ ಕುಂಪಲಾಷ್ಟಮಿಯ ಸಂಭ್ರಮದ ಶೋಭಾಯಾತ್ರೆ ನಡುವೆಯೇ ತೊಕ್ಕೊಟ್ಟು ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಹುಲಿವೇಷ ಸ್ತಬ್ಥಚಿತ್ರಕ್ಕಾಗಿ ತಾರಾ ಮೆರುಗಿನ ಊದು ಇಡುವ ಕಾರ್ಯಕ್ರಮ ಕುಂಪಲದ ಶಾಲಾ ಮೈದಾನದಲ್ಲೇ ನಡೆಯಲಿದೆ. ಇಡೀ ಕುಂಪಲವೇ ಕುಂಪಲಾಷ್ಟಮಿ ಮೊಸರು ಕುಡಿಕೆ ಸಂಭ್ರಮಿಸೋ ಹೊತ್ತಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಪ್ರಯುಕ್ತ ಇಂಥದ್ದೊಂದು ಕಾರ್ಯಕ್ರಮವನ್ನ ಕುಂಪಲದಲ್ಲೇ ಆಯೋಜಿಸೋ ಅನಿವಾರ್ಯತೆ ಏನಿತ್ತು ಅಂತ ಜನ ಮಾತನಾಡಿಕೊಳ್ಳುವಂತಾಗಿದೆ. ಬೆಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ನಡೆಯೋ ಸಭಾ ಕಾರ್ಯಕ್ರಮ ಹಾಗೂ ಹುಲಿವೇಷ ಸ್ತಬ್ಧ ಚಿತ್ರಕ್ಕಾಗಿ ಊದು ಇಡೋ ಕಾರ್ಯಕ್ರಮ ಇದಾಗಿದೆ. ಅಸಲಿಗೆ ಈ ಕಾರ್ಯಕ್ರಮದಲ್ಲಿ ಕಿರುತೆರೆ ನಟಿಯರಾದ ಭವ್ಯಗೌಡ, ಮೌನ ಗುಡ್ಡೆಮನೆ, ನಟ ರಿಥ್ವಿಕ್ ಕೃಪಾಕರ್ ಭಾಗಿಯಾಗಲಿದ್ದಾರೆ. ಆದರೆ ಊರ ಹಬ್ಬದ ಮಧ್ಯೆ ಮತ್ತೊಂದು ಪ್ರತ್ಯೇಕ ಕಾರ್ಯಕ್ರಮ ಚರ್ಚೆ ಹುಟ್ಟು ಹಾಕಿದೆ.

ಮೊಸರು ಕುಡಿಕೆ ಉತ್ಸವದಲ್ಲೂ ನಡೀತಿದ್ಯಾ ಕಾಂಗ್ರೆಸ್-ಬಿಜೆಪಿ ಪಾಲಿಟಿಕ್ಸ್?

ಅಸಲಿಗೆ ಕುಂಪಲಾಷ್ಟಮಿ ದಿನವೇ ಠಕ್ಕರ್ ಕೊಡೋ ರೀತಿಯಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಹೆಸರಲ್ಲಿ ಕುಂಪಲದಲ್ಲಿ ಕಾರ್ಯಕ್ರಮವೊಂದನ್ನ ಆಯೋಜನೆ ಮಾಡಲಾಗಿದೆ. ‌ಇನ್ನು ಈ ಕಾರ್ಯಕ್ರಮದ ಹಿಂದಿರೋ ಶಕ್ತಿ ಖ್ಯಾತ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಪ್ರಕಾಶ್ ಕುಂಪಲ. ಕೆಲ ಸಮಯದಿಂದೀಚೆಗೆ ಉಳ್ಳಾಲ ಭಾಗದಲ್ಲಿ ಪ್ರಕಾಶ್ ಕುಂಪಲ ಹೆಸರು ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ. ಕೇವಲ ಬ್ಯಾನರ್ ಗಳಲ್ಲಷ್ಟೇ ಅಲ್ಲದೇ ಕುಂಪಲದ ಹಲವು ಕಾರ್ಯಕ್ರಮಗಳಿಗೆ ವಿವಿಐಪಿ, ವಿಐಪಿಗಳನ್ನ ಕರೆಸಿ ಸೆಲೆಬ್ರಿಟಿಗಳ ಜೊತೆಗೆ ಅತ್ಯಂತ ಸಮೀಪದ ನಂಟು ಹೊಂದಿರೋ ವ್ಯಕ್ತಿ ಈ ಪ್ರಕಾಶ್ ಕುಂಪಲ. ಹಲವು ರಾಜಕಾರಣಿಗಳ ಪರಮಾಪ್ತ ವಲಯದಲ್ಲೂ ಇವರ ಹೆಸರು ಚಾಲ್ತಿಯಲಿದೆ. ಹೀಗಾಗಿಯೇ ರಾಜಕೀಯವಾಗಿ ಬೆಳೀತಾ ಇರೋ ಈ ಯುವನಾಯಕ ಈ ಭಾಗದಲ್ಲಿ ಹಲವು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಹಾಗೇ ನೋಡಿದರೆ ಕುಂಪಲದ ಮತ್ತೊಂದು ದೊಡ್ಡ ಹೆಸರು ಈಗಿನ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರದ್ದು. ರಾಜಕೀಯದ ಹಿರಿಯ ತಲೆ ಸತೀಶ್ ಕುಂಪಲ ಬಾಲಕೃಷ್ಣ ಮಂದಿರದಲ್ಲಿ ಕಟ್ಟಿದ ಕುಂಪಲಾಷ್ಟಮಿ ಸದ್ಯ ಈ ಭಾಗದ ಅತ್ಯಂತ ಜನಪ್ರಿಯ ಉತ್ಸವಗಳ ಸಾಲಿನಲ್ಲಿ ಬಂದು ನಿಂತಿದೆ. ಅದರಲ್ಲೂ ಸತೀಶ್ ಕುಂಪಲ ಬಿಜೆಪಿ ಜಿಲ್ಲಾಧ್ಯಕ್ಷರಾಗಿರೋ ಈ ಹೊತ್ತಲ್ಲಿ ಈ ಕುಂಪಲಾಷ್ಟಮಿ ಸಂಭ್ರಮ ಮತ್ತಷ್ಟು ಮೇಲೈಸಿದೆ. ಆದರೆ ಈ ಹೊತ್ತಲ್ಲೇ ಕುಂಪಲದ ಮಣ್ಣಲ್ಲಿ ವಿಭಜನೆ ರಾಜಕೀಯ ಭಾರೀ ಚರ್ಚೆ ಹುಟ್ಟು ಹಾಕಿದೆ. ಒಂದು ಗ್ರಾಮದ ಸಂಭ್ರಮದ ಹಬ್ಬದ ಮಧ್ಯೆ ಮತ್ತೊಂದು ಗ್ರಾಮದ ಉತ್ಸವದ ಹೆಸರಿನಲ್ಲಿ ಅದೇ ಊರಲ್ಲಿ ಪ್ರತ್ಯೇಕ ಕಾರ್ಯಕ್ರಮವೊಂದು ಆಯೋಜನೆಯಾಗಿರೋದು ಇಲ್ಲಿನ ರಾಜಕೀಯ ಜಿದ್ದಾಜಿದ್ದಿನ ಕಥೆ ಹೇಳ್ತಿದೆ. ಬಿಜೆಪಿಯ ಪ್ರಭಾವಿ ನಾಯಕ ಸತೀಶ್ ಕುಂಪಲರ ಸಾರಥ್ಯದ ಕುಂಪಲಾಷ್ಟಮಿಗೆ ಠಕ್ಕರ್ ಕೊಡಲೆಂದೇ ಕುಂಪಲ ಶಾಲೆಯ ಮೈದಾನದಲ್ಲಿ ತಾರಾ‌ಮೆರುಗಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅನ್ನೋ ಮಾತುಗಳು ಕುಂಪಲದ ಹಾದಿ ಬೀದಿಯಲ್ಲಿ ಹರಿದಾಡ್ತಿದೆ. ಕಾಂಗ್ರೆಸ್ ನ ಪ್ರಭಾವಿಗಳ ಆಪ್ತರಾಗಿರೋ ಪ್ರಕಾಶ್ ಕುಂಪಲ, ಬಿಜೆಪಿಯ ಪ್ರಭಾವಿ ನಾಯಕ ಸತೀಶ್ ಕುಂಪಲರ ಪ್ರಭಾವ ಕುಗ್ಗಿಸಲು ಇಂಥದ್ದೊಂದು ಕಾರ್ಯಕ್ರಮವನ್ನ ಕುಂಪಲಾಷ್ಟಮಿ ದಿನವೇ ಕುಂಪಲದ ಮೈದಾನದಲ್ಲೇ ಹಮ್ಮಿಕೊಂಡಿದ್ದಾರಾ ಅನ್ನೋ ಚರ್ಚೆಗಳೂ ಇವೆ.

ಕಾಂಗ್ರೆಸ್ ನಾಯಕನಿಂದಲೇ ಉಲ್ಲಂಘನೆಯಾಯ್ತಾ ಶಿಕ್ಷಣ ಇಲಾಖೆ ಮಾರ್ಗಸೂಚಿ?

ಇನ್ನು ಸೋಮವಾರ ಸಂಜೆ ಕಾಂಗ್ರೆಸ್ ನಾಯಕ, ಬೆಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ಕುಂಪಲ ಸರ್ಕಾರಿ ಶಾಲೆಯ ವಠಾರದಲ್ಲಿ ಈ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‌ಸ್ಟಾರ್ ನಟ-ನಟಿಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಸಲಿಗೆ ಕುಂಪಲದ ಶಾಲಾ ಮೈದಾನದಲ್ಲಿ ಈ ಹಿಂದೆ ಕುಂಪಲದ ಮೊಸರು ಕುಡಿಕೆ ಹಿನ್ನೆಲೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೀತಾ ಇದ್ದವು. ಆದರೆ ಈ ಬಾರಿ ಕಾರ್ಯಕ್ರಮ ಬದಲಾಗಿದೆ. ಆದರೆ ಈ ಮಧ್ಯೆಯೇ ಸರ್ಕಾರದ ಆದೇಶವೊಂದು ಕಾಂಗ್ರೆಸ್ ಮುಖಂಡನಿಂದಲೇ ಉಲ್ಲಂಘನೆಯಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಇತ್ತೀಚೆಗಷ್ಟೇ ಶಿಕ್ಷಣ ಇಲಾಖೆ ಸುತ್ತೋಲೆಯೊಂದನ್ನ ಹೊರಡಿಸಿ ಸರ್ಕಾರಿ ಶಾಲಾ ಮೈದಾನಗಳನ್ನ ಶಿಕ್ಷಣೇತರ ಚಟುವಟಿಕೆಗಳಿಗೆ ಬಳಸಬಾರದು ಅಂತ ಆದೇಶ ಮಾಡಿದೆ‌.ಶಾಲೆಗಳನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಮಹತ್ವದ ಸುತ್ತೋಲೆಯನ್ನ ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರೇ ಹೊರಡಿಸಿದ್ದರು. ಶಾಲಾ ಮೈದಾನ, ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ-ಉದ್ದೇಶಗಳಿಗೆ ಬಳಸಬಾರದಾಗಿ ಸೂಚನೆ ನೀಡಲಾಗಿತ್ತು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಮರೇ ಹೊಣೆಗಾರರಾಗುತ್ತಾರೆಂದು ದ.ಕ ಡಿಡಿಪಿಐ ಖಡಕ್ ಎಚ್ಚರಿಕೆ ನೀಡಿದ್ದರು. ಇದರ ವಿರುದ್ದ ಕರಾವಳಿಯ ಬಿಜೆಪಿ‌ ಮತ್ತು ಹಿಂದೂ ಪರ ಸಂಘಟನೆಗಳಿಂದ ಅಪಸ್ವರ ಕೇಳಿ ಬಂದಿತ್ತು. ಅದರೆ ಕುಂಪಲದಲ್ಲಿ ಕಾಂಗ್ರೆಸ್ ನಾಯಕರ ಆಪ್ತರೇ ನಿಯಮ ಉಲ್ಲಂಘಿಸಿದ್ದಾರೆ. ಹಾಗಂತ ಈ ನಿಯಮಗಳನ್ನ ಹಾಗೆಲ್ಲಾ ಜಾರಿಗೆ ತರೋದು ಸುಲಭವೂ ಅಲ್ಲ ಬಿಡಿ. ಶಾಲೆಗಳನ್ನ ಕಟ್ಟಿ ಬಿಡೋ ಸರ್ಕಾರಗಳು ಮತ್ತೆ ಅತ್ತ ತಲೆ ಹಾಕೋದು ಅಷ್ಟರಲ್ಲೇ ಇದೆ. ಹೀಗಿರುವಾಗ ಈ ಶಾಲೆಗಳು ಇಂದಿಗೂ ಸುಣ್ಣ ಬಣ್ಣ ಬಳಸಿಕೊಂಡು ಒಂದು ಹಂತಕ್ಕೆ ಚೆನ್ನಾಗಿರೋದು ಸ್ಥಳೀಯ ಪ್ರಭಾವಿ ವ್ಯಕ್ತಿಗಳು, ರಾಜಕೀಯ ನಾಯಕರು ಹಾಗೂ ದಾನಿಗಳ ನೆರವಿನಿಂದ ಅನ್ನೋದು ಅಷ್ಟೇ ಸತ್ಯ. ಹೀಗಿರುವಾಗ ಶಾಲಾ ಮೈದಾನಗಳನ್ನು ಅವರ ಕಾರ್ಯಕ್ರಮಗಳಿಗೆ ಕೊಡದೇ ಇರೋದಕ್ಕೆ ಆಗುತ್ತಾ?…ಆಗಲ್ಲ ಅನ್ನೋಕಾಗಲ್ಲ ಎಂಬ ಜಿಜ್ಞಾಸೆಯ ಮಧ್ಯೆಯೇ ಸರ್ಕಾರದ ಇಂಥಹ ಆದೇಶಗಳು ಮತ್ತೆ ಮತ್ತೆ ಚರ್ಚೆ ಹಾಗೂ ವಿವಾದಕ್ಕೆ ಒಳಗಾಗುತ್ತಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ವಿಷಯ ಜ್ಞಾನ ವಿದ್ದು ಉತ್ತಮ ಭೋದನೆ ಮಾಡುವವರು ಉತ್ತಮ ಶಿಕ್ಷಕರು : ರವೀಂದ್ರ ರೈ ಕಳ್ಳಿಮಾರ್

June 9, 2026

ಬ್ಲಾಕ್‌ಮೇಲ್ ಪ್ರಕರಣ: ನಿಝಾಮ್ ಯುವ ಕಾಂಗ್ರೆಸ್ ಹುದ್ದೆಯಿಂದ ಅಮಾನತು

June 9, 2026

ಮಂಜನಾಡಿ ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ ಹೊಸ ತಿರುವು: ತನಿಖೆಗೆ ಪೊಲೀಸ್ ಆಯುಕ್ತರ ಆದೇಶ – ಕೋಣಾಜೆ ಪೊಲೀಸರು ಆಯುಕ್ತರ ಜ್ಞಾಪನ ಪತ್ರದ ಆದೇಶ ಪಾಲಿಸುತ್ತಾರೋ?

June 9, 2026

Comments are closed.

Advertise
ಸಂಪರ್ಕಿಸಿ

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026
All News

ವಿಷಯ ಜ್ಞಾನ ವಿದ್ದು ಉತ್ತಮ ಭೋದನೆ ಮಾಡುವವರು ಉತ್ತಮ ಶಿಕ್ಷಕರು : ರವೀಂದ್ರ ರೈ ಕಳ್ಳಿಮಾರ್

By UllalaVaniJune 9, 20260

ಹರೇಕಳ : ವಿಷಯ ಜ್ಞಾನವಿದ್ದು ಒಳ್ಳೆಯ ಬೋಧನೆಯೊಂದಿಗೆ ಮಕ್ಕಳ ಮನಸ್ಸನ್ನು ಗೆಲ್ಲುವ ಶಿಕ್ಷಕರು ಅತ್ಯುತ್ತಮ ಶಿಕ್ಷಕರಾಗುತ್ತಾರೆ. ಶಿಕ್ಷಕರು ಸಚ್ಚಾರಿತ್ಯವಂತರು ಸಂಸ್ಕಾರವಂತರು…

ಮಂಗಳೂರು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಜಿಲ್ಲಾ ನೋಟರಿ ವಕೀಲರಾದ ಪ್ರವೀಣ್‌ ಕುಮಾರ್‌ ಅದ್ಯಪಾಡಿ ಜಯ

June 9, 2026

ಸರ್ಕಾರಿ ಆರೋಗ್ಯ ವ್ಯವಸ್ಥೆ ಖಾಸಗಿ ದಾನಧರ್ಮದ ಅವಲಂಬಿತವೇ? ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಪ್ರಶ್ನೆಗಳು

June 9, 2026

ಬ್ಲಾಕ್‌ಮೇಲ್ ಪ್ರಕರಣ: ನಿಝಾಮ್ ಯುವ ಕಾಂಗ್ರೆಸ್ ಹುದ್ದೆಯಿಂದ ಅಮಾನತು

June 9, 2026
1 2 3 … 1,957 Next
Automatic YouTube Gallery

ಕೊಣಾಜೆ: ಮುಡಾ ಅಕ್ರಮ ಪ್ರಕರಣ; ಅಕ್ಬರ್ ಅಖ್ತರ್ ಪಾಷಾ ಮನೆ ಮೇಲೆ ಲೋಕಾಯುಕ್ತ ದಾಳಿ

ಅಕ್ಬರ್ ಅಖ್ತರ್ ಪಾಷಾ ಮನೆ ಮೇಲೆ ಲೋಕಾಯುಕ್ತ ದಾಳಿ;ಕೊಣಾಜೆ ಮೂಡಾ ಲೇಔಟ್ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ಶಂಕೆ

ಸಾರ್ವಜನಿಕರ ಹಣ ದುರ್ಬಳಕೆ ಆರೋಪ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೊಣಾಜೆ: ಮುಡಾ ಅಕ್ರಮ ಪ್ರಕರಣ; ಅಕ್ಬರ್ ಅಖ್ತರ್ ಪಾಷಾ ಮನೆ ಮೇಲೆ ಲೋಕಾಯುಕ್ತ ದಾಳಿ
Now Playing
ಕೊಣಾಜೆ: ಮುಡಾ ಅಕ್ರಮ ಪ್ರಕರಣ; ಅಕ್ಬರ್ ಅಖ್ತರ್ ಪಾಷಾ ಮನೆ ಮೇಲೆ ಲೋಕಾಯುಕ್ತ ದಾಳಿ
ಅಕ್ಬರ್ ಅಖ್ತರ್ ಪಾಷಾ ಮನೆ ಮೇಲೆ ಲೋಕಾಯುಕ್ತ ದಾಳಿ;ಕೊಣಾಜೆ ಮೂಡಾ ಲೇಔಟ್ ...
ಅಕ್ಬರ್ ಅಖ್ತರ್ ಪಾಷಾ ಮನೆ ಮೇಲೆ ಲೋಕಾಯುಕ್ತ ದಾಳಿ;ಕೊಣಾಜೆ ಮೂಡಾ ಲೇಔಟ್ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ಶಂಕೆ

ಸಾರ್ವಜನಿಕರ ಹಣ ದುರ್ಬಳಕೆ ಆರೋಪ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಜೂನ್ 22ರವರೆಗೆ ಕೋಟೆಕಾರ್ ಬೀರಿಯಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ
Now Playing
ಜೂನ್ 22ರವರೆಗೆ ಕೋಟೆಕಾರ್ ಬೀರಿಯಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ
ಕೋಟೆಕಾರ್ ಬೀರಿಯಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಆರಂಭ; ಜೂನ್ 22ರವರೆಗೆ ...
ಕೋಟೆಕಾರ್ ಬೀರಿಯಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಆರಂಭ; ಜೂನ್ 22ರವರೆಗೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಆರೋಗ್ಯ ಶಿಬಿರ

ಮಧುಮೇಹ, ಸಂಧಿವಾತ ಸೇರಿ ಹಲವು ಕಾಯಿಲೆಗಳಿಗೆ ಉಚಿತ ಚಿಕಿತ್ಸೆ


📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version