ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಸ್ಕೂಟರಿನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ನಡೆಸುತ್ತಿದ್ದ ಯುವಕನನ್ನು ಬಜರಂಗದಳದ ಕಾರ್ಯಕರ್ತರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಂಡಿತ್ ಹೌಸ್ ಬಳಿ ಶನಿವಾರ ನಡೆದಿದೆ.
ಉಳ್ಳಾಲದ ಮೇಲಂಗಡಿ ನಿವಾಸಿ ಮಲಿಕ್(೨೩) ಬಂಧನಕ್ಕೊಳಗಾದವ. ಮದನಿನಗರದಿಂದ ಉಳ್ಳಾಲದ ಕಡೆಗೆ ಅಕ್ರಮವಾಗಿ ಸ್ಕೂಟರಿನಲ್ಲಿ ಮಾಂಸವನ್ನು ಸಾಗಾಟ ನಡೆಸುತ್ತಿರುವ ಮಾಹಿತಿಯನ್ನು ಬಜರಂಗದಳದ ಕಾರ್ಯಕರ್ತರು ಪಡೆದಿದ್ದರು. ಎಂದಿನಂತೆ ಇಂದು ಮಲಿಕ್ ಉಳ್ಳಾಲದಿಂದ ಮದನಿನಗರಕ್ಕೆ ಆಕ್ಟಿವಾ ಸ್ಕೂಟರಿನಲ್ಲಿ ತೆರಳಿ ಕಾದು ಕುಳಿತ ಬಜರಂಗದಳದ ಕಾರ್ಯಕರ್ತರು ಬಳಿಕ ವಾಪಸ್ಸಾಗುವ ಸಂದರ್ಭ ಪಂಡಿತ್ ಹೌಸ್ ಸಮೀಪ ಅಡ್ಡ ಹಾಕಿದ್ದಾರೆ. ಬಳಿಕ ಉಳ್ಳಾಲ ಪೊಲೀಸರಿಗೆ ಆರೋಪಿಯನ್ನು ಸ್ಕೂಟರ್ ಸಮೇತ ವಶಕ್ಕೊಪ್ಪಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.


