UN networks
ಉಳ್ಳಾಲ: ಅಭಿವೃದ್ಧಿಯ ಹರಿಕಾರ, ರೈತ ನಾಯಕ, ಜನಪರ ಯೋಜನೆಗಳನ್ನು ರಾಜ್ಯಕ್ಕೆ ನೀಡಿದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಜನ್ಮ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರಬಿ.ಎಸ್.ಯಡಿಯೂರಪ್ಪರವರ ಜನ್ಮ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ಫೆ. 27ರಂದು ಸೋಮವಾರ ಬೆಳಿಗ್ಗೆ ಗಂಟೆ 600 ರಿಂದ ಮಧ್ಯಾಹ್ನ ಗಂಟೆ 1.00 ರವರೆಗೆ ಉಳ್ಳಾಲ ತಾಲೂಕಿನ ಜನಸೇವಾ ಯುವಕ ಮಂಡಲ ಅಂಬ್ಲಮೊಗರು ಪರಿಸರದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ನಿಕಟಪೂರ್ವ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದರು.
ತೊಕ್ಕೊಟ್ಟಿನ ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ನಲ್ಲಿ ಮಾಹಿತಿ ನೀಡಿದ ಅವರು ಜಸ್ಟೀಸ್ ಕೆ. ಎಸ್, ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಟ್ಟೆಯ ತಜ್ಞ ವೈದ್ಯರುಗಳ ನೇತೃತ್ವದಲ್ಲಿ ಶಿಬಿರವನ್ನು ಆಯೋಜಿಸಿದ್ದು, ಸಾಮಾನ್ಯ, ವೈದ್ಯಕೀಯ ವಿಭಾಗ, ಕಿವಿ-ಮೂಗು-ಗಂಟಲು ವಿಭಾಗ, ಕಣ್ಣಿನ ತಪಾಸಣೆ, , ಚರ್ಮ ವಿಭಾಗ, ಎಲುಬು ಮತ್ತು ಕೀಲು ವಿಭಾಗದ ನುರಿತ ವೈದ್ಯರುಗಳಿಂದ ಉಚಿತ ತಪಾಸಣೆ ಮತ್ತು ಅಗತ್ಯ ಇರುವವರಿಗೆ ಚಿಕಿತಸಎ, ಯುವಕ ಮಂಡಲದ ಪರಿಸರದಲ್ಲಿ 80 ಸಸಿಗಳನ್ನು ನೆಡುವುದು ಮತ್ತು ವಿತರಿಸುವುದು, ಬೆಳ್ಳ ಸೇವಾಶ್ರಮಕ್ಕೆ ಭೇಟಿ ನೀಡಿ ಆಶ್ರಮವಾಸಿಗಳಿಗೆ ವಸ್ತ್ರದಾನ ಹಾಗೂ ಹಣ್ಣು ಹಂಪಲು ನೀಡುವುದು, ಪ್ರಧಾನಮಂತ್ರಿ ಜನ್ ಧನ್ ಬ್ಯಾಂಕ್ ಖಾತೆ, ಆಭಾ ಆರ್ಡ್- ಡಿಜಿಟಲ್ ಹೆಲ್ತ್ ಕಾರ್ಡ್, ವೋಟರ್ ಐಡಿ ಹೊಸತು ಮತ್ತು ತಿದ್ದುಪಡಿ ಮಾಡಿ ಕೊಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದರು.ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಶೆಟ್ಟಿ ಅಂಬ್ಲಮೊಗರು, ರವಿಕುಮಾರ್ ಕೋಡಿ, ಸತೀಶ್ ದೀಪಂ, ಜನಸೇವಾ ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.


