UN NEWS NETWORKS
ಉಳ್ಳಾಲ: ಶಾಸಕರ ವಿಶೇಷ ಕಾಳಜಿಯಿಂದ ನರಿಂಗಾನ ಗ್ರಾಮ ಉದ್ದಕ್ಕೂ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಅದರ ಭಾಗವಾಗಿ ನಿಡ್ಮಾಡ್ ರಸ್ತೆಯ ಕಾಂಕ್ರೀಟಿಕರಣಕ್ಕೆ ಅನುದಾನ ಒದಗಿಸಿರುವ ಶಾಸಕರ ನಡೆಗೆ ಗ್ರಾಮಸ್ಥರ ಅಭಿನಂದನೆ ಎಂದು ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಶೆಟ್ಟಿ ಮೋರ್ಲ ಹೇಳಿದ್ದಾರೆ.
ನರಿಂಗಾನ ಗ್ರಾ.ಪಂ ವ್ಯಾಪ್ತಿಯ ನಿಡ್ಮಾಡ್ ನ 180 ಮೀ ರಸ್ತೆಯುದ್ದಕ್ಕೆ ಕಾಂಕ್ರೀಟಿಕರಣ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.

ನಿಡ್ಮಾಡ್ ಪ್ರದೇಶದ ಜನರ ಸಮಸ್ಯೆ ಕುರಿತು ಶಾಸಕರ ಗಮನ ಸೆಳೆದಾಗ ತಕ್ಷಣವೇ ಸ್ಪಂಧಿಸಿದ್ದು, ರಸ್ತೆಯ ಜೊತೆಗೆ ಮಸೀದಿಯ ಅಂಗಳಕ್ಕೆ ಇಂಟರ್ ಲಾಕ್ ವ್ಯವಸ್ಥೆಯನ್ನು ಶಾಸಕರು ಕಲ್ಪಿಸಿದ್ದಾರೆ ಎಂದರು.
ಗ್ರಾ.ಪಂ ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ ಮಾತನಾಡಿ, ಪ್ರತಿ ವಾರ್ಡಿನಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ, ಇಟ್ಟಿರುವ ಅನುದಾನದ ಕಾಮಗಾರಿಯನ್ನು ಶೀಘ್ರವೇ ಮುಗಿಸುವಂತೆ ಶಾಸಕರು ಸೂಚಿಸಿದ್ದಾರೆ. ಗ್ರಾಮದ ನೀರಿನ ಸಮಸ್ಯೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಶೀಘ್ರವೇ ಸ್ಪಂಧನೆ ಸಿಗಲಿದೆ ಎಂದರು.
ಈ ಸಂದರ್ಭ ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ವಲಯ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಚಂದಹಿತ್ಲು, ಮುಡಿಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜೋಸೆಫ್ ಕುಟಿನ್ಹಾ ಬೋಳ, ನರಿಂಗಾನ ವಲಯ ಕಾಂಗ್ರೆಸ್ ಪ್ರ.ಕಾ ಮುರಳೀಧರ್ ಶೆಟ್ಟಿ ಮೋರ್ಲ, ನಿಡ್ಮಾಡ್ ತಾಜುಲ್ ಫುಕ್ಹಾ ಮಸೀದಿಯ ಅಬ್ದುಲ್ ಖಾದರ್ ಸಖಾಫಿ, ಪಂ. ಸದಸ್ಯರುಗಳಾದ ಶೇಖಬ್ಬ ಬರೆಬಾಯಿ, ಸುಂದರ ಪೂಜಾರಿ, ಜ್ಯೋತಿ ಡಿಸೋಜ ಹಾಗೂ ಸ್ಥಳೀಯರಾದ ಅಬ್ಬಾಸ್ ನಿಡ್ಮಾಡ್, ಅಬ್ದುಲ್ಲಾ ಮುಂತಾದವರು ಉಪಸ್ಥಿತರಿದ್ದರು.


