UN NEWS NETWORKS
ಉಳ್ಳಾಲ: ಮಹಾಶಿವರಾತ್ರಿಯ ಸೂರ್ಯಾಸ್ತದ ನಂತರ ಜಾಗರಣದ ಸಂಧಿಕಾಲದಲ್ಲಿ ಸೋಮೇಶ್ವರ ದೇವಸ್ಥಾನದ ಬಳಿ ಇರುವ ರುದ್ರಪಾದೆಯಲ್ಲಿ ಲೋಕಕಲ್ಯಾಣಕ್ಕಾಗಿ ಅಗ್ನಿಹೋತ್ರ ಮತ್ತು ಭಸ್ಮ ತಯಾರಿ ಯಜ್ಞವು ಕರಾವಳಿ ಕಲ್ಯಾಣ ಪರಿಷತ್, ಕರ್ನಾಟಕ ಸೋಮೇಶ್ವರ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಜರಗಲಿದೆ ಎಂದು ಪರಿಷತ್ ನ ಪದ್ಮನಾಭ ವರ್ಕಾಡಿ ತಿಳಿಸಿದ್ದಾರೆ.

ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವೈದಿಕರಿಲ್ಲದೆ ನಡೆಯುವ ಅಗ್ನಿಹೋತ್ರ ಮತ್ತು ಗೋವಿನ ಸೆಗಣಿಯಿಂದ ಭಸ್ಮ ತಯಾರಿ ಯಜ್ಞದಲ್ಲಿ ಎಲ್ಲರೂ ಭಾಗಿಯಾಗಿ, ಅವರವರೇ ಹೋಮವನ್ನು ನೆರವೇರಿಸಬಹುದು. ತುಳಸಿ, ಗಂಧ, ಬಿಲ್ವಪತ್ರೆ ವಸ್ತುಗಳನ್ನು ಯಜ್ಞದಲ್ಲಿ ಉಪಯೋಗಿಸಲಾಗುವುದು. ದೇಶೀ ತಳಿಯ ಗೋವಿನ ಬೆರಣಿಯನ್ನು ಭಕ್ತರು ತಂದು ಯಜ್ಞಕ್ಕೆ ಸ್ವತ: ಅರ್ಪಿಸಬಹುದು. ಯಾವುದೇ ಕಾಣಿಕೆ, ಹರಕೆಯಿಲ್ಲದೆ ನಡೆಯುವಂತಹ ಕಾರ್ಯಕ್ರಮ ಇದಾಗಿದ್ದು, ಜನರ ಉಪಸ್ಥಿತಿಯೇ ಪ್ರóಧಾನವಾಗಿದೆ. ಶಿವರಾತ್ರಿ ಜಾಗರಣದ ಮಹತ್ವವನ್ನು ಜನರಿಗೆ ಮನದಟ್ಟು ಮಾಡುವ ಸಲುವಾಗಿ ಮತ್ತು ಮನುಷ್ಯನಿಗೆ ವಿಷಪ್ರಾಷಣವಾದ ಸಂದರ್ಭ ಭಸ್ಮದಿಂದ ಗುಣಪಡಿಸಿರುವ ವಿಚಾರ ಪುರಾಣ ಕಥೆಗಳಲ್ಲಿದೆ. ಅನಾರೋಗ್ಯ ಕಾಡದಂತೆ ಯಜ್ಞದಲ್ಲಿ ದೊರಕುವ ಭಸ್ಮ ಉಪಯುಕ್ತವಾಗುವುದು. ಮಧ್ಯಪ್ರದೇಶದ ಭೋಪಾಲದಲ್ಲಿ ಅನಿಲ ದುರಂತದ ನಂತರ ವಿಷಾನಿಲ ತಡೆಗಟ್ಟಲು ಅಗ್ನಿಹೋತ್ರ ಯಾಗವನ್ನೇ ನಡೆಸಲಾಗಿತ್ತು. ಲೋಕಕಲ್ಯಾಣಾರ್ಥವಾಗಿ ಯಾಗವನ್ನು ಆಯೋಜಿಸಲಾಗಿದೆ ಎಂದರು.
ಶರತ್ಚಂದ್ರ ಒಂಭತ್ತುಕೆರೆ ಮಾತನಾಡಿ, ಸೂರ್ಯೋದಯದ ಸಮಯದಲ್ಲಿ ಯಜ್ಞದಲ್ಲಿ ದೊರೆತ ಭಸ್ಮವನ್ನು ಪವಿತ್ರವಾದ ಒಂಭತ್ತುಕೆರೆಯಲ್ಲಿ ಸಂಸ್ಕರಿಸಿ , ಬಳಿಕ ಂiÀiಜ್ಞದಲ್ಲಿ ಭಾಗಿಯಾದವರಿಗೆ ಹಂಚಲಾಗುವುದು. ಹಂಚುವ ದಿನವನ್ನು ವಾಟ್ಸ್ಯಾಪ್ ಗುಂಪಿನ ಮೂಲಕ ತಿಳಿಸಲಾಗುವುದು. ಯಜ್ಞದಲ್ಲಿ ಪಾಲ್ಗೊಳ್ಳುವ ಮಂದಿ ಯಾವುದೇ ಕಾಣಿಕೆ, ಶುಲ್ಕವನ್ನು ನೀಡದೇ ಸ್ಥಳದಲ್ಲಿ ನೋಂದಾಯಿಸಬಹುದು. ಶಿವರಾತ್ರಿ ದಿನದ ರಾತ್ರಿಯೇ ಭಸ್ಮ ತಯಾರಿ ನಡೆಸುವುದರಿಂದ ಪಾವಿತ್ರ್ಯತೆ ಇದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಕರಾವಳಿ ಕಲ್ಯಾಣ ಪರಿಷತ್ನ ದಿನೇಶ್ ಕಾಜವ, ದಿನಮಣಿ ರಾವ್ ಮತ್ತು ವಸಂತ್ ಉಳ್ಳಾಲ ಉಪಸ್ಥಿತರಿದ್ದರು.


