UN networks
ಉಳ್ಳಾಲ: ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ, ಅಂಬಿಕಾ ರೋಡ್ ತೊಕ್ಕೋಟ್ಟು. ಇದರ ಅಮೃತ ಮಹೋತ್ಸವದ ಅಂಗವಾಗಿ ಗಟ್ಟಿ ಸಮಾಜ ಅಂಬಿಕಾರೋಡ್ ಇದರ ಗುಂಡ್ಯ ವೇದಾವತಿ ಗುರುವಪ್ಪ ಗಟ್ಟಿ ವೇದಿಕೆಯಲ್ಲಿ ಜರುಗಿದ ದೇಹದಾಢ್ಯ ಸ್ಪರ್ಧೆ ‘ಮಿಸ್ಟರ್ ಗಟ್ಟೀಸ್ ಕ್ಲಾಸಿಕ್’ ಚಾಂಪಿಯನ್ ಆಫ್ ಚಾಂಪಿಯನ್ ಟೈಟಲನ್ನು ಮೊಹಮ್ಮದ್ ಸಫ್ವಾನ್ ಪಡೆದುಕೊಂಡರೆ, ರನ್ನರ್ ಆಫ್ ಆಗಿ ದಿನೇಶ್ ಆಚಾರ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಗಟ್ಟಿಸ್ ಫಿಟ್ಲೈನ್ ಜಿಮ್ನ ನೇತೃತ್ವದಲ್ಲಿ ನಡೆದ ದೇಹದಾಡ್ರ್ಯ ಸ್ಪರ್ಧೆಯ ಪುರುಷರ ಫಿಸಿಕ್ ಟೈಟಲ್ ಪ್ರಶಸ್ತಿಯನ್ನು ತ್ರಿಜೇಶ್ ಗಟ್ಟಿ ಪಡೆದರೆ, ಫಿಸಿಕಲಿ ಚಾಂಲೇಂಜ್ಡ್ ಟೈಟಲ್ ಪ್ರಶಸ್ತಿಯನ್ನು ಜಗದೀಶ್ ಪೂಜಾರಿ ಪಡೆದರು. ಮಾಸ್ಟರ್ಸ್ ಟೈಟಲ್ ಪ್ರಶಸ್ತಿಯನ್ನು ದಿನೇಶ್ ಆಚಾರ್ಯ ಪಡೆದುಕೊಂಡರು.
ಸಮಾರಂಭದಲ್ಲಿ ಪಾವಂಜೆ ಹರೀಶ್ ಭಟ್, ಉಳ್ಳಾಲ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್, ಪೆರ್ಮನ್ನೂರು ಚರ್ಚ್ನ ಧರ್ಮ ಗುರು ಸಿಪ್ರಿಯನ್ ಪಿಂಟೋ, ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ , ಮಂಗಳೂರು ವಿವಿ ಕುಲಪತಿ ಪಿ. ಸುಬ್ರಮಣ್ಯ ಯಡಪಡಿತ್ತಾಯ, ಗಣ್ಯರಾದ ಅಬ್ದುಲ್ ಅಜೀಜ್ (ಮೈಸೂರು ಬಾವ ) ಸಂತೋಷ್ ಕುಮಾರ್ ರೈ ಬೋಳಿಯಾರ್, ಸತೀಶ್ ಕುಂಪಲ , ವಿಶ್ವಾಸ್ ಕುಮಾರ್ ದಾಸ್, ಎಸಿಪಿ ದಿನಕರ್ ಶೆಟ್ಟಿ, ಯೋಗೀಶ್ ಶೆಟ್ಟಿ ಜಪ್ಪು, ಏಕಲವ್ಯ ಪ್ರಶಸ್ತಿ ವಿಜೇತ ದೇಹದಾಡ್ರ್ಯ ಪಟು ಭಾಸ್ಕರ್ ತೊಕ್ಕೋಟ್ಟು, ವೈದ್ಯರಾದ ಡಾ| ಯೋಗಿಶ್ ಗಟ್ಟಿ , ವಿಠಲ್ ಶ್ರೀಯಾನ್, ಶ್ರೀಕಾಂತ್ ಗಟ್ಟಿ ಮೇರಿಯಿಲ್, ಸುರೇಶ್ ಭಟ್ನಗರ, ರಾಘವ ಗಟ್ಟಿ ಕೋಟೆಕಾರ್ ,ಭರತ್ ರಾಜ್ ಶೆಟ್ಟಿ ಪಜೀರ್ ಗುತ್ತು, ಗಟ್ಟಿ ಸಮಾಜ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ರೋಹನ್ಚಂದ್ರ ಆರ್. ಗಟ್ಟಿ, ಅಧ್ಯಕ್ಷ ದಯಾನಂದ ಗಟ್ಟಿ ಪಿಲಿಕೂರು, ಮೆಸ್ಕಾಂನ ಉಪಲೆಕ್ಕ ನಿಯಂತ್ರಣಾಧಿಕಾರಿ ಉಮೇಶ್ ಗಟ್ಟಿ , ನಿತಿನ್ ಗಟ್ಟಿ ಲೇಡಿಹಿಲ್ ಮತ್ತಿತರರು ಉಪಸ್ಥಿತರಿದ್ದರು. ಗಟ್ಟಿಸ್ ಫಿಟ್ಲೈನ್ ಜಿಮ್ನ ಮಾಲಕ ಅರುಣ್ ಗಟ್ಟಿ ಅಗರಿಮಾರ್ ಕಾರ್ಯಕ್ರಮ ಸಂಯೋಜಿಸಿದ್ದರು.


