Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ತೊಕ್ಕೊಟ್ಟು ಓವರ್ ಬ್ರಿಡ್ಜ್ -ಕುಂಪಲ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ವಿಳಂಬ
ಎರಡು ದಿನಗಳಲ್ಲಿ ಕಾಮಗಾರಿ ಆರಂಬಿಸದೇ ಇದ್ದಲ್ಲಿ ಹೆದ್ದಾರಿ ಬಂದ್‍ನ ಎಚ್ಚರಿಕೆ

UllalaVaniBy UllalaVaniDecember 29, 2022No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN networks

ಉಳ್ಳಾಲ : ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಕುಂಪಲ ಬೈಪಾಸ್ ವರೆಗಿನ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬವನ್ನು ಖಂಡಿಸಿ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಮತ್ತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾಧಿಕಾರಿಯನ್ನು ತರಾಟೆಗೆ ಪಡೆದುಕೊಂಡ ಘಟನೆ ತೊಕ್ಕೊಟ್ಟು ಕಾಪಿಕಾಡಿನಲ್ಲಿ ಇಂದು ನಡೆಯಿತು.
2022ರ ಅಕ್ಟೋಬರ್ ತಿಂಗಳಲ್ಲಿ ಹೋರಾಟ ಸಮಿತಿಯ ಬೇಡಿಕೆಗೆ ಸ್ಪಂಧಿಸಿ ನವಯುಗ ಸಂಸ್ಥೆ ಕಾಮಗಾರಿ ಆರಂಭಿಸಿತು. ಆದರೆ ಅರ್ಧದಷ್ಟು ಕಾಮಗಾರಿ ನಡೆಸಿದ ಸಂಸ್ಥೆ ಇದೀಗ ಕಾಮಗಾರಿಯನ್ನು ನಿಲ್ಲಿಸಿ ವಿಳಂಬ ನಡೆಸುತ್ತಿದೆ. ಈಗಾಗಲೇ ಸರ್ವಿಸ್ ರಸ್ತೆಯಿಲ್ಲದೆ, ಕಾಪಿಕಾಡು ಬಳಿ ಯುಟರ್ನ್ ನೀಡಿರುವ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಅವಧಿಯಲ್ಲಿ ಅಪಘಾತದಲ್ಲಿ ಆರು ಜನ ಸಾವನ್ನಪ್ಪಿರುವುದನ್ನು ಪೊಲೀಸ್ ವರದಿಯೇ ನೀಡಿದೆ. ಈ ವರದಿಯನ್ನು ಮುಂದಿಟ್ಟುಕೊಂಡು ಹೋರಾಟ ಸಮಿತಿ ನಡೆಸಿದ ಹೋರಾಟದ ಫಲವಾಗಿ ಶಾಸಕರು, ಸಂಸದರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ನವಯುಗ ಸಂಸ್ಥೆಯವರನ್ನು ಒಟ್ಟುಗೂಡಿಸಿ ತಕ್ಷಣ ಕಾಮಗಾರಿ ನಡೆಸುವಂತೆ ಆದೇಶಿಸಿದ್ದರು.
`ಹೆದ್ದಾರಿ ಬಂದ್ ನಡೆಸಿ ಉಗ್ರ ಪ್ರತಿಭಟನೆ’
ಸಮಿತಿಯ ಹಿರಿಯ ಈಶ್ವರ್ ಉಳ್ಳಾಲ್ ಮಾತನಾಡಿ, ಇನ್ನೆರಡು ದಿನಗಳ ಒಳಗೆ ಕಾಮಗಾರಿಯನ್ನು ಆರಂಭಿಸದೇ ಇದ್ದಲ್ಲಿ ವಾಹನ ಸವಾರರು, ಗ್ರಾಮಸ್ಥರು , ಸಾರ್ವಜನಿಕರನ್ನು ಸೇರಿಸಿಕೊಂಡು ರಾ.ಹೆ.66 ನ್ನು ಕಾಪಿಕಾಡಿನಲ್ಲಿ ಬಂದ್ ಮಾಡಿ ಉಗ್ರ ರೀತಿಯಲ್ಲಿ ಹೋರಾಟ ನಡೆಸುತ್ತೇವೆ. ಬಾರ್ ಒಂದಕ್ಕಾಗಿ ಕಾಮಗಾರಿಯನ್ನು ವಿಳಂಬ ನಡೆಸುತ್ತಿರುವುದು ಸರಿಯಲ್ಲ. ಊರಿನ ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪಿರುವುದು ಬಹಳಷ್ಟು ನೋವುಂಟು ಮಾಡಿದೆ. ನವಯುಗ ಸಂಸ್ಥೆಯವರ ಸಂಬಂಧಿಕರಿಗೆ ಇದೇ ರೀತಿ ಅಪಘಾತವಾಗುತ್ತಿದ್ದರೆ ಕಾಮಗಾರಿಯನ್ನು ನಡೆಸುತ್ತಿರಲಿಲ್ಲವೇ?. ಎರಡು ದಿನಗಳ ಒಳಗೆ ಕಾಮಗಾರಿ ಆರಂಭವಾಗದೇ ಇದ್ದಲ್ಲಿ ಸಮಸ್ತ ಜನ ಸೇರಿಕೊಂಡು ಉಗ್ರ ಪ್ರತಿಭಟನೆ ನಡೆಸುವುದು ನಿಶ್ಚಿತ ಎಂದರು.
ಪತ್ರಕರ್ತ ತಾರನಾಥ್ ಕಾಪಿಕಾಡ್ ಮಾತನಾಡಿ, ಪಾದಚಾರಿಗೆ ಓಡಾಡಲು ಸ್ಥಳಾವಕಾಶವಿಲ್ಲದ ಸ್ಥಿತಿ. ಹೆದ್ದಾರಿ ಇಲಾಖೆ ಈಗಾಗಲೇ ಸ್ವಾಧೀನಪಡಿಸಿದ ಭೂಮಿಯಿದೆ. ಎಲ್ಲವೂ ಖಾಸಗಿಯವರು ಅಕ್ರಮವಾಗಿ ಕಬಳಿಸಿಕೊಂಡರೂ ಅವರನ್ನು ಎಬ್ಬಿಸುವ ಧೈರ್ಯ ಇಲಾಖೆ ಮಾಡದಿರುವುದು ಹೆದ್ದಾರಿ ಇಲಾಖೆಯ ಮೇಲೆ ಜನರು ಸಂಶಯ ಪಡುವಂತಾಗಿದೆ. ತಕ್ಕಮಟ್ಟಿಗೆ ಕಾಮಗಾರಿ ಆರಂಭಿಸಿ, ಸ್ವಾಧೀನಪಡಿಸಿದ ಭೂಮಿಯಲ್ಲಿದ್ದ ಕೆಲವರನ್ನು ಮಾತ್ರ ತೆಗೆಸಿ, ಇನ್ನು ಕೆಲವರನ್ನು ಹಾಗೆಯೇ ಬಿಡಲಾಗಿದೆ. ಎಲ್ಲವನ್ನೂ ತೆಗೆಯಿರಿ ವ್ಯವಸ್ಥಿತವಾಗಿ ಜನರು ಹಾಗೂ ಸ್ಥಳೀಯರ ಸಂಕಷ್ಟಕ್ಕೆ ಸ್ಪಂಧಿಸಿ. ಕಾಪಿಕಾಡು ಯು ಟನ್ ್ ಬಂದ್ ಮಾಡಬೇಕು, ಪೊಲೀಸರ ವರದಿಯಲ್ಲಿ ಆರು ಸಾವು ಒಂದೂವರೆ ವರ್ಷದಲ್ಲಿ ಆಗಿದೆ. ತಕ್ಷಣವೇ ಅಂಬಿಕಾರೋಡ್‍ನಲ್ಲಿ ಯುಟರ್ನ್ ನೀಡುವಂತೆ ಒತ್ತಾಯಿಸಿದರು.
ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯ ಸುಕುಮಾರ್ ತೊಕ್ಕೊಟ್ಟು, ಭವಾನಿ ಮೊದಲಾದವರು ಉಪಸ್ಥಿತರಿದ್ದರು.

`ತಕ್ಷಣವೇ ಕಾಮಗಾರಿ ಆರಂಭಿಸುವಂತೆ ನವಯುಗ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕ್ರಿಸ್ ಮಸ್ ವರೆಗೂ ಬಾರ್ ಮಾಲೀಕರು ತೆರವಿಗೆ ಅವಕಾಶ ಕೇಳಿರುವುದರಿಂದ ಕಾಮಗಾರಿ ನಿಂತಿತ್ತು. ಇದೀಗ 15 ದಿನಗಳಲ್ಲಿ ತೊಕ್ಕೊಟ್ಟುವಿನಿಂದ ಕುಂಪಲ ಬೈಪಾಸ್ ವರೆಗೆ ಎರಡು ಬದಿಗಳಲ್ಲಿ 2.5 ಮೀ ಕಚ್ಚಾ ಸರ್ವಿಸ್ ರಸ್ತೆ ನಿರ್ಮಿಸಲು ಸೂಚಿಸಲಾಗಿದೆ. ಒಂದು ವೇಳೆ ಕಾಮಗಾರಿ ಆಗದೇ ಇದ್ದಲ್ಲಿ ಊರವರೇ ಜೆಸಿಬಿ ಮೂಲಕ ಅಗೆದು ಕಾಮಗಾರಿ ನಡೆಸಲು ಒಪ್ಪುತ್ತೇನೆ’.
ಲಿಂಗೇ ಗೌಡ
ಯೋಜನಾ ನಿರ್ದೇಶಕರು
ರಾ.ಹೆ.ಅಭಿವೃದ್ಧಿ ಪ್ರಾಧಿಕಾರ

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ವಿಷಯ ಜ್ಞಾನ ವಿದ್ದು ಉತ್ತಮ ಭೋದನೆ ಮಾಡುವವರು ಉತ್ತಮ ಶಿಕ್ಷಕರು : ರವೀಂದ್ರ ರೈ ಕಳ್ಳಿಮಾರ್

June 9, 2026

ಮಂಜನಾಡಿ ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ ಹೊಸ ತಿರುವು: ತನಿಖೆಗೆ ಪೊಲೀಸ್ ಆಯುಕ್ತರ ಆದೇಶ – ಕೋಣಾಜೆ ಪೊಲೀಸರು ಆಯುಕ್ತರ ಜ್ಞಾಪನ ಪತ್ರದ ಆದೇಶ ಪಾಲಿಸುತ್ತಾರೋ?

June 9, 2026

ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ- ಆರೋಪಿಯ ಮನೆ ಮತ್ತು ದನದ ಕೊಟ್ಟಿಗೆ ಜಪ್ತಿ

June 9, 2026
Leave A Reply

Advertise
ಸಂಪರ್ಕಿಸಿ

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026
All News

ಮಾದಕ ವಸ್ತುಗಳ ವಿರುದ್ಧ ಹೋರಾಟಕ್ಕೆ ಶಾಲಾ ಹಂತದಲ್ಲೇ ಜಾಗೃತಿ ಮತ್ತು ಮಾನಸಿಕ ಆರೋಗ್ಯ ಶಿಕ್ಷಣ ಅಗತ್ಯ

By UllalaVaniJune 10, 20260

ಮಂಗಳೂರು ನಗರದಲ್ಲಿ ಇತ್ತೀಚೆಗೆ ನಡೆದ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಮತ್ತು ಮೂವರು ಡ್ರಗ್ ಪೆಡ್ಲರ್‌ಗಳ ಬಂಧನದ ಘಟನೆ…

ಕಕ್ಷಿದಾರರ ಕಣ್ಣೀರು: ಮುಂದೂಡಿಕೆಗಳ ನಡುವೆ ಸಿಲುಕಿದ ನ್ಯಾಯ ? ಸಾರ್ವಜನಿಕರ ಆತಂಕ

June 10, 2026

ಮಾಡೂರು ಕಟಿಲೇಶ್ವರಿ ಶಾಮಿಯಾನ ಮತ್ತು ಟ್ರಾನ್ಸ್ ಪೋರ್ಟ್ ಮಾಲಕರಾದ ವೇಣುಗೋಪಾಲ್ ಶೆಟ್ಟಿ ನಿಧನ

June 10, 2026

ವಿಷಯ ಜ್ಞಾನ ವಿದ್ದು ಉತ್ತಮ ಭೋದನೆ ಮಾಡುವವರು ಉತ್ತಮ ಶಿಕ್ಷಕರು : ರವೀಂದ್ರ ರೈ ಕಳ್ಳಿಮಾರ್

June 9, 2026
1 2 3 … 1,958 Next
Automatic YouTube Gallery

ಪ್ರಧಾನಿ ಮೋದಿ ಆಡಳಿತದ 12 ವರ್ಷ; ಉಳ್ಳಾಲದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಪ್ರಧಾನಿ ಮೋದಿ ಆಡಳಿತದ 12 ವರ್ಷ; ಉಳ್ಳಾಲದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ
Now Playing
ಪ್ರಧಾನಿ ಮೋದಿ ಆಡಳಿತದ 12 ವರ್ಷ; ಉಳ್ಳಾಲದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಜೂ.13ಕ್ಕೆ ಕಣಚೂರಿನಲ್ಲಿ ಮಕ್ಕಳ ಚರ್ಮರೋಗಶಾಸ್ತ್ರ ಸಿಎಮ್‌ಇ ಸಮ್ಮೇಳನ
Now Playing
ಜೂ.13ಕ್ಕೆ ಕಣಚೂರಿನಲ್ಲಿ ಮಕ್ಕಳ ಚರ್ಮರೋಗಶಾಸ್ತ್ರ ಸಿಎಮ್‌ಇ ಸಮ್ಮೇಳನ
ಕಣಚೂರು:ಜೂ.13ಕ್ಕೆ ವೈದ್ಯಕೀಯ ಸಮ್ಮೇಳನ;ಖ್ಯಾತ ತಜ್ಞರಿಂದ ಮಕ್ಕಳ ಚರ್ಮರೋಗಗಳ ...
ಕಣಚೂರು:ಜೂ.13ಕ್ಕೆ ವೈದ್ಯಕೀಯ ಸಮ್ಮೇಳನ;ಖ್ಯಾತ ತಜ್ಞರಿಂದ ಮಕ್ಕಳ ಚರ್ಮರೋಗಗಳ ಕುರಿತು ವಿಶೇಷ ಉಪನ್ಯಾಸ

ಬೆಂಗಳೂರು-ಮಣಿಪಾಲ ತಜ್ಞರ ಭಾಗವಹಿಸುವಿಕೆಯಲ್ಲಿ ಸಂವಾದಾತ್ಮಕ ಚರ್ಚೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version