UN networks
ಉಳ್ಳಾಲ: ಉಳ್ಳಾಲ ತಾಲೂಕು ತಹಸೀಲ್ದಾರ್ ಅವರ ವಾಹನ ಚಾಲಕರಾಗಿದ್ದ ಸಜೀಪನಡು ನಿವಾಸಿ ಕಿಶೋರ್ (35) ಜ್ವರಕ್ಕೆ ತುತ್ತಾಗಿ ಇಂದು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕಳೆದ ಒಂದು ವರ್ಷದಿಂದ ಉಳ್ಳಾಲ ತಾಲೂಕು ತಹಸೀಲ್ದಾರ್ ಪುಟ್ಟರಾಜು ಅವರ ಕಾರು ಚಾಲಕರಾಗಿದ್ದ ಕಿಶೋರ್, ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರದವರೆಗೂ ಕರ್ತವ್ಯ ನಿರ್ವಹಿಸಿದ್ದ ಕಿಶೋರ್ ಶುಕ್ರವಾರ ಜ್ವರದ ಹಿನ್ನೆಲೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ನಸುಕಿನ ಜಾವ ಮೃತರಾಗಿದ್ದಾರೆ. ವಿವಾಹಿತರಾಗಿದ್ದ ಇವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಹೆತ್ತವರನ್ನು ಅಗಲಿದ್ದಾರೆ. ಮೃತರಿಗೆ ಮಂಗಳೂರು ಹಾಗೂ ಉಳ್ಳಾಲ ತಾಲೂಕು ಕಚೇರಿ ಸಿಬ್ಬಂದಿ ಕಂಬನಿ ಸಲ್ಲಿಸಿದ್ದಾರೆ.


