UN networks
ಮಂಗಳೂರು: ಸರಕಾರ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳ ಮಾಡಿ ಜನರು ಅಚ್ಚೇ ದಿನ್ ಬೇಡ ಹಿಂದಿನ ಬೂರೇ ದಿನ್ ಕೊಡಿ ಅನ್ನುವಂತಾಗಿದೆ ಈ ಮೂಲಕ ಬಿಜೆಪಿ ಸಾಧನೆ ಮಾಡುವಂತಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ಮಾತನಾಡಿದ ಅವರು ಸಾವಿರಾರು ಕೋಟಿ ಪ್ರಚಾರದ ಮೂಲಕ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಅಚ್ಛೇ ದಿನ್ ಅನ್ನೋ ಕನಸು ಬಿತ್ತಿ ಯುವಕರಿಗೆ ಉದ್ಯೋಗದ ಆಮಿಷ ನೀಡಿದರು.ಆದರೆ ಉದ್ಯೋಗ ಸೃಷ್ಟಿ ಮಾಡದೆ ಉದ್ಯೋಗ ಕಸಿದುಕೊಂಡರು.
ದೇಶದ ಆಹಾರದ ಕೊರತೆ ನಿವಾರಿಸಿದ್ದು ಕಾಂಗ್ರೆಸ್ ಪಕ್ಷ. ನೀರಾವರಿ ಯೋಜನೆ ಸಹಿತ ತಂತ್ರಜ್ಞಾನದ ಅಭಿವೃದ್ಧಿ ಆಗಿದೆ.ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿ ಕೂಡಾ ಕಾಂಗ್ರೆಸ್ ಮಾಡಿದೆ. ಒಟ್ಟಾರೆ ದೇಶ ಕಟ್ಟುವ ಕೆಲಸಕ್ಕೆ ಕಾಂಗ್ರಸ್ ಪಕ್ಷ ಮಾಡಿದೆ. ಇದೆಲ್ಲವೂ 2014 ರ ಬಳಿಕ ನರೇಂದ್ರ ಮೋದಿ ಬಂದ ಬಳಿಕ ಆಗಿದ್ದಲ್ಲ. ಕೊರೊನಾ ಕಾಲದಲ್ಲಿ 25 ಲಕ್ಷ ಕೋಟಿ ಯಾರಿಗೂ ಸಿಕ್ಕಿಲ್ಲ. ಸ್ವಲ್ಪ ಖರ್ಚಾಗಿದೆ ಆದರೆ ಅದು ಯಾರಿಗೂ ಉಪಯೋಗ ಆಗಿಲ್ಲ.
ರೈತರ ಆದಾಯ ದ್ವಿಗುಣ ಮಾಡ್ತೇವೆ ಅಂತ ಹೇಳಿ ಅದನ್ನೂ ಮಾಡಿಲ್ಲ. ಇನ್ಸ್ಯೂರೆನ್ಸ್ ಮೂಲಕ ರೈತರ ಹಣವನ್ನು ಲೂಟಿ ಮಾಡಿದ್ದಾರೆ. ಕಪ್ಪು ಹಣ ತರ್ತೇವೆ ಅಂದ್ರೂ ಎಂಟು ವರ್ಷ ಆದರೂ ಬಂದಿಲ್ಲ
ಇದೆಲ್ಲ ಜನರನ್ನು ಮರಳು ಮಾಡುವ ತಂತ್ರ ಮಾತ್ರ ಆಗಿತ್ತು. ಚುನಾವಣೆ ವೇಳೆ ಪುಲ್ವಾಮ ಬಾಲಕೋಟ್ ವಿಷಯ ಮುಂದಿಟ್ಟರು. ಆ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಸಾದ್ಯವಾಯಿತು. ಎಲ್ಲಾ ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದು ಬಿಜೆಪಿ ಸಾಧನೆ ಹೀಗಾಗಿ ಜನರು ಅಚ್ಛೇ ದಿನ ಬೇಡ ಹಿಂದಿನ ಬೂರೇ ದಿನ್ ಕೊಡಿ ಅಂತಿದ್ದಾರೆ. ಕರ್ನಾಟಕ ರಾಜ್ಯ ಇತರ ರಾಜ್ಯಗಳಿಗೆ ಮಾದರಿಯಾಗಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಯು.ಪಿ.ಮಾಡೆಲ್ ಮಾಡಲು ಹೊರಟಿದ್ದಾರೆ. ನಮ್ಮ ರಾಜ್ಯದ ಗೌರವ ಹಾಳಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಪರೇಷನ್ ಕಮಲ ಮೂಲಕ ಕೋಟ್ಯಾಂತರ ಖರ್ಚು ಮಾಡಿದ್ದರು. ಅದಕ್ಕಾಗಿ ಈಗ 40% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಪ್ರಧಾನಿಯವರಿಗೆ 1.3 ತಿಂಗಳ ಹಿಂದೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಎಲ್ಲಾ ಕಡೆ ಐಟಿ ,ಇಡಿ,ಸಿಬಿಐ ರೈಡ್ ಮಾಡ್ತಾ ಇದೆ.ಆದರೆ ಕಮಿಷನ್ ಆರೋಪ ಮಾಡಿದವರ ಮೇಲೆ ಯಾಕೆ ದಾಳಿ ಆಗಿಲ್ಲ? ಎಂದು ಅವರು ಪ್ರಶ್ನಿಸಿದರು.
ಅಭಿಮಾನಿಗಳು ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಸಿಎಂ ಆಗಲಿ ಅಂತಾರೆ. ಆದರೆ ಪಕ್ಷಕ್ಕೆ ಅದರದ್ದೇ ಆದ ನಿಯಮ ಮತ್ತು ಸಿದ್ದಾಂತ ಇದೆ. ಶಾಸಕಾಂಗ ಸಭೆಯ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಆಯ್ಕೆ ನಡೆಯುತ್ತದೆ.ನಾನು ಮುಖ್ಯಮಂತ್ರಿ ಆಗಬೇಕು ಅಂದರೂ ಆಗಲ್ಲ, ಶಾಸಕರ ಅಭಿಪ್ರಾಯ ಅಂತಿಮ. ನಳಿನ್ ಕುಮಾರ್ ಕಟೀಲ್ ಗೆ ಮಲಪ್ರಭಾ ಬಗ್ಗೆ ಗೊತ್ತಿಲ್ಲ. ಅವರು ಅದರ ಬಗ್ಗೆ ನನ್ನ ವಿರುದ್ದ ಆರೋಪ ಮಾಡಿದ್ದಾರೆ. ಅವರಿಗೆ ಅದರ ಬಗ್ಗೆ ಗೊತ್ತೇ ಇಲ್ಲ, ಹೀಗಾಗಿ ಅವರಿಗೆ ನೋಟೀಸ್ ಕೊಟ್ಟಿದ್ದೇನೆ
ನಳಿನ್ ಇದರ ಯಾವುದೇ ಪರಿಜ್ಞಾನ ಇಲ್ಲದೇ ನನ್ನ ಮೇಲೆ ಆರೋಪ ಮಾಡಿದ್ದಾರೆ. ನಳಿನ್ ಕುಮಾರ್ ಪುಣ್ಯಾತ್ಮನಿಗೆ ಇದರ ಬಗ್ಗೆ ಗೊತ್ತೇ ಇಲ್ಲ
ಆದರೂ ಸುಖಾಸುಮ್ಮನೆ ಆರೋಪ ಮಾಡುತ್ತ ಇದ್ದಾರೆ
ನಳಿನ್ ಕುಮಾರ್ ಕಟೀಲ್ ಗೆ ಮೆದುಳು ಇದೆಯೋ ಗೊತ್ತಿಲ್ಲ.ಎಲ್ಲಾ ದಾಖಲೆ ಇಟ್ಟು ನಾನು ನಳಿನ್ ಕುಮಾರ್ ಗೆ ಲೀಗಲ್ ನೋಟೀಸ್ ಕೊಡುತ ಇದೀನಿ ಎಂದರು


