UN networks
ಮಂಗಳೂರು: ಬೆಳ್ತಂಗಡಿಯ ಹಲವಡೆ ಪೇ ಎಂಎಲ್ ಎ ಸ್ಟಿಕ್ಕರ್ ಪತ್ತೆಯಾಗಿದೆ. ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಕ್ಯೂ ಫೋಟೋ ಇರೋ ಕ್ಯೂ ಆರ್ ಕೋಡ್ ಸ್ಟಿಕ್ಕರ್ ಅನ್ನು ತಾಲೂಕಿನ ಹಲವೆಡೆ ಅಂಟಿಸಲಾಗಿದೆ.
ರಾತ್ರೋ ರಾತ್ರಿ ಬೆಳ್ತಂಗಡಿ ತಾಲೂಕಿನ ಕೆಲವು ಜಾಗದಲ್ಲಿ ಸ್ಟಿಕ್ಕರ್ ಅಳವಡಿಸಲಾಗಿದೆ.




ಎರಡು ದಿನಗಳ ಹಿಂದೆ ಬೆಳ್ತಂಗಡಿಯಲ್ಲಿ ಪೇ ಸಿಎಂ ಸ್ಟಿಕ್ಕರ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು
ಅಂಟಿಸಿದ್ದರು.ಬೆಳ್ತಂಗಡಿ ತಾಲೂಕಿನ ಹಲವಡೆ ಸ್ಟಿಕ್ಕರ್ ಅಂಟಿಸಲಾಗಿತ್ತು. ಕಾಂಗ್ರೆಸ್ ಎಂಎಲ್ ಸಿ ಹರೀಶ್ ಕುಮಾರ್ ಪುತ್ರ ಅಭಿನಂದನ್ ನೇತೃತ್ವದಲ್ಲಿ ಸ್ಟಿಕ್ಕರ್ ಅಳವಡಿಕೆಯಾಗಿತ್ತು
ಬೆಳ್ತಂಗಡಿ ಬಸ್ಸು ನಿಲ್ದಾಣ, ಅಂಗಡಿಗಳು ಹಾಗೂ ಸರ್ಕಾರಿ ಬಸ್ಸುಗಳಿಗೂ ಪೇ ಸಿಎಂ ಸ್ಟಿಕ್ಕರ್ ಅಳವಡಿಕೆ ನಡೆದಿತ್ತು.ಇಂದು ಶಾಸಕ ಹರೀಶ್ ಪೂಂಜಾ ಹೆಸರಿನಲ್ಲಿ ಸ್ಟಿಕ್ಕರ್ ಅಂಟಿಸಿರುವುದು ಹಲವೆಡೆ ಪತ್ತೆಯಾಗಿದೆ. ಶಾಸಕ ಹರೀಶ್ ಪೂಂಜಾ ವಿರುದ್ದವೂ 40% ಕಮೀಷನ್ ಆರೋಪ ಈ ಹಿಂದೆ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರಾ ಮಾಡಿದ್ದರು.


