UN networks
ಮಂಗಳೂರು: ಎನ್ ಐ ಎ ತಂಡ ದ.ಕ ಜಿಲ್ಲೆಯ
ಪಿಎಫ್ ಐ ಹಾಗೂ ಎಸ್ ಡಿಪಿಐ ಕಚೇರಿ ಸೇರಿದಂತೆ ಆರು ಮಂದಿ ಪಿಎಫ್ ಐ ಮುಖಂಡರ ಮನೆಗಳಿಗೆ ದಾಳಿ ನಡೆಸಿದೆ.
1) ಪಿಎಫ್ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿಯ ಉಪ್ಪಿನಂಗಡಿ ಮನೆಗೆ ದಾಳಿ, 2) ಪಿಎಫ್ ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ನ ಜೋಕಟ್ಟೆ ನಿವಾಸಕ್ಕೆ ದಾಳಿ, 3) ಪಿಎಫ್ ಐ ರಾಜ್ಯ ನಾಯಕ ತಫ್ಸೀರ್ ನ ಎಸ್ಬಡಿ ಕಲ್ಲಡ್ಕ ದ ಬೋಳಂತೂರು ನಿವಾಸಕ್ಕೆ ದಾಳಿ
, 4) ಪಿಎಫ್ ಐ ದ.ಕ ಗ್ರಾಮಾಂತರ ಜಿಲ್ಲಾಧ್ಯಕ್ಷ ನವಾಜ್ ಕಾವೂರು ವಿನ ಕಾವೂರು ಬಳಿಯ ನಿವಾಸ, 5) ಪಿಎಫ್ ಐ ನಾಯಕ ಮೊಯಿದ್ದೀನ್ ಹಳೆಯಂಗಡಿಯ ಸುರತ್ಕಲ್ ನಿವಾಸ, 6) ಪಿಎಫ್ ಐ ನಗರಾಧ್ಯಕ್ಷ ಅಶ್ರಫ್ ನ ಬಜಪೆ ನಿವಾಸದ ಮೇಲೆ ದಾಳಿ, ಈ ಆರು ಜನರ ಮನೆಗಳ ಮೇಲೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸೂಚನೆ ಹಿನ್ನೆಲೆಯಲ್ಲಿ ದಾಳಿ
ನಡೆದಿದೆ. ಮಂಗಳೂರು ಕಮಿಷನರೇಟ್ ಮತ್ತು ದ.ಕ ಜಿಲ್ಲಾ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಬಳಿಕ ಎಸ್ ಡಿಪಿಐ ಮತ್ತು ಪಿಎಫ್ ಐ ಜಿಲ್ಲಾ ಕಚೇರಿಗೆ ಎನ್ ಐಎ ದಾಳಿ ನಡೆಸಿದೆ.


