Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಉಳ್ಳಾಲ

ಬಿಲ್ಲವ ಸಮಾಜದಲ್ಲಿ  ಶಿಕ್ಷಣ ಕ್ರಾಂತಿಯೊಂದಿಗೆ ಉದ್ಯೋಗ ಕ್ರಾಂತಿಯಾಗಬೇಕು : ಪಿತಾಂಬರ ಹೇರಾಜೆ

UllalaVaniBy UllalaVaniSeptember 11, 2022No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN networks

ಕೊಲ್ಯ: ಶೋಷಿತ ಕೆಳವರ್ಗವಾದ ಹಿಂದುಳಿದ ವರ್ಗಗಳಿಗೆ ಈಗಲೂ ಕಷ್ಟದ ದಿನಗಳಿವೆ. ಈ ನಿಟ್ಟಿನಲ್ಲಿ  ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣದ ಜೊತೆಗೆ ಶಿಕ್ಷಣ ಕ್ರಾಂತಿಯಾಗುವ ಮೂಲಕ ಯುವಕರು ಉದ್ಯೋಗಿಗಳಾಗಬೇಕು. ಇದರಿಂದ ಮನೆಗಳು ಗಟ್ಟಿಯಾದಾಗ ಸಮಾಜ ಬಲಿಷ್ಠವಾಗುವುದು ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ಪಿತಾಂಬರ ಹೇರಾಜೆ ಅಭಿಪ್ರಾಯಪಟ್ಟರು.
ಸೋಮೇಶ್ವರ ಕೊಲ್ಯ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 168 ನೇ ಜನ್ಮ ದಿನಾಚರಣೆಯ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಬ್ರಹ್ಮಶ್ರೀ ನಾರಾಯಣ ಗುರುಗಳು ಎಸ್‌ ಎನ್‌ ಡಿಪಿಯನ್ನು ಸ್ಥಾಪಿಸಿ  ಅದರ ಮೂಲಕ ಕೇರಳದಲ್ಲಿ ಸ್ಥಾಪಿಸಿರುವ ಶಿಕ್ಷಣ ಸಂಸ್ಥೆ ಇಡೀ ಕೇರಳಕ್ಕೆ ಸಾಕ್ಷರತೆಯನ್ನು ಒದಗಿಸಿತು. ಇಂತಹ ನಡೆಗಳಿಂದ ಬ್ರಹ್ಮಶ್ರೀಗಳ ಆರಾಧನೆ ಪ್ರಪಂಚದಾದ್ಯಂತ ನಡೆಯುತ್ತಿದೆ. ಕೆಲವರಿಗೆ ಗುರುಗಳು ಇರುವುದಿಲ್ಲ, ಗುರಿಯೂ ಇರದೇ  ತಪ್ಪಾಗಿ ಮಾತನಾಡುವವರೇ ಜಾಸ್ತಿ. ಗುರುಗಳ ನಿದರ್ಶನದಲ್ಲಿ ಬಾಳಿದವರು ಸಂಘರ್ಷದಿಂದ ಹೋಗದೇ ಸಾಮರಸ್ಯದಿಂದ ಬಾಳಿದವರು. ಬ್ರಹ್ಮಶ್ರೀಗಳ ಕಾರ್ಯಕ್ರಮವನ್ನು ಟಿಎಂಎ ಪೈ ನಲ್ಲಿ ಆಯೋಜಿಸಿರುವ ಸಂಘಟಕರ ನಿರ್ಧಾರ ಸರಿಯಲ್ಲ. ಬ್ರಹ್ಮಶ್ರೀಗಳ ಯಾವುದೇ ಕಾರ್ಯಕ್ರಮಗಳನ್ನು ನಡೆಸಬೇಕಾದರೂ, ಹಿರಿಯರ ಜತೆಗೆ ಚಿಂತನೆ ನಡೆಸಿ ಎಲ್ಲರ ಅಭಿಪ್ರಾಯದ ಮೇರೆಗೆ ಸಂಘಟಿಸುವುದು ಉತ್ತಮ ಎಂದರು.
ಗುರುಸಂದೇಶ ನೀಡಿದ  ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನಪೀಠದ ಸಂಯೋಜಕ ಗಣೇಶ್‌ ಅಮೀನ್‌ ಸಂಕಮಾರ್‌  ಮಾತನಾಡಿ, ನಾಲಗೆಗೆ ಬಿದ್ದ ಶಿಕ್ಷಣದಿಂದ ಆತನ ರಕ್ಷಣೆಯ ಹಾದಿ ಸುಗಮವಾಗಿರುತ್ತದೆ.  ಪ್ರತಿ ಹಬ್ಬಗಳ ಆಚರಣೆಯ ಮುನ್ನ  ಹಬ್ಬದ ಸಂದೇಶವನ್ನು ಅರಿಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ  ಉದ್ಯಮಿ ಜಯಚಂದ್ರ  ಕೆ.ಎ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್‌ ಕುಂಪಲ, ಬಿರುವೆರ್‌ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್‌ ಬಾಗ್‌ , ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ  ಮಾಲಿನಿ, ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್‌ ನ ಗೌರವಾಧ್ಯಕ್ಷ  ಗೋಪಾಲಕೃಷ್ಣ ಸೋಮೇಶ್ವರ, ಕೊಲ್ಯ ಬಿಲವ ಸೇವಾ ಸಮಾಜದ ಅಧ್ಯಕ್ಷ ಜಯರಾಮ ಪಿಲಿಕೂರು, ಕೊಲ್ಯ ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷ ಕುಸುಮ ಭರತ್‌ ಕುಂಪಲ, ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ಸುಂದರ್‌ ಸುವರ್ಣ ಉಪಸ್ಥಿತರಿದ್ದರು.     
ಗೋಪಾಲ ಕೊಂಡಾಣ ನೇತೃತ್ವದಲ್ಲಿ ಧ್ಯಾನ ಮಂದಿರದಲ್ಲಿ ಪೂಜೆ ನೆರವೇರಿತು.  ಈ ಸಂದರ್ಭ ನಿವೃತ್ತ ವಿಜಯ ಬ್ಯಾಂಕ್‌ ಉದ್ಯೋಗಿ ನಾರಾಯಣ ಶೆಟ್ಟಿ ಸಂಕೊಳಿಗೆ  ಹಾಗೂ  ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಗಳ ಅಧ್ಯಕ್ಷ ಚಿತ್ತರಂಜನ್‌ ಬೋಳಾರ್‌ ಸನ್ಮಾನಿಸಲಾಯಿತು. ಉಳ್ಳಾಲ ನಗರಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಗೊಂಡ ಭಗವಾನ್‌ ದಾಸ್‌ ತೊಕ್ಕೊಟ್ಟು ಅವರನ್ನು ಅಭಿನಂದಿಸಲಾಯಿತು.
ಬಿಲ್ಲವ ಸೇವಾ ಸಮಾಜ ಟ್ರಸ್ಟ್‌ ಅಧ್ಯಕ್ಷ ವೇಣುಗೋಪಾಲ್‌ ಕೊಲ್ಯ ಸ್ವಾಗತಿಸಿದರು. ಲತೀಶ್‌ ಮತ್ತು ಜೀವನ್‌ ಕೊಲ್ಯ ನಿರೂಪಿಸಿದರು. ಆನಂದ ಮಲಯಾಳಕೋಡಿ ವಂದಿಸಿದರು
ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು , ಬಿಲ್ಲವ ಸಮಾಜದ ವಿಜೇತ ಸದಸ್ಯರುಗಳಿಗೆ ಬಹುಮಾನ ವಿತರಿಸಲಾಯಿತು. 
ಈ ವೇಳೆ ನಾರಾಯಣ ಗುರು ಯಕ್ಷಗಾನ ಮಂಡಳಿ ಕೊಲ್ಯ ಇವರ ವತಿಯಿಂದ ʻಗುರುದಕ್ಷಿಣʼ  ಯಕ್ಷಗಾನ ತಾಳಮದ್ದಳೆ  ಪ್ರದರ್ಶನಗೊಂಡಿತು.  ನಾರಾಯಣ ಗುರು ಕುಣಿತ ಭಜನಾ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮವೂ ಜರಗಿತು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದ ಮಂದಿ ಸ್ವಾಭಿಮಾನದಿಂದ ಬಾಳಲುವೀರರಾಣಿ ಅಬ್ಬಕ್ಕಳೇ ಕಾರಣ : ಮಂಜಪ್ಪ ಕಾರ್ನವರ್

February 5, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
ಉಳ್ಳಾಲ

ಉಳ್ಳಾಲದ ಮಂದಿ ಸ್ವಾಭಿಮಾನದಿಂದ ಬಾಳಲುವೀರರಾಣಿ ಅಬ್ಬಕ್ಕಳೇ ಕಾರಣ : ಮಂಜಪ್ಪ ಕಾರ್ನವರ್

By UllalaVaniFebruary 5, 20260

ಅಬ್ಬಕ್ಕ ಉತ್ಸವದ ಕರಪತ್ರ ಬಿಡುಗಡೆಗೊಳಿಸಿದ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರುಉಳ್ಳಾಲ: ಉಳ್ಳಾಲದ ಮಣ್ಣಿನಲ್ಲಿ ನಾವು ಖುಷಿಯಿಂದ, ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿರುವುದು…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026
1 2 3 … 1,793 Next
Automatic YouTube Gallery

ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ

ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
Now Playing
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ...
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
Now Playing
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು ...
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು

ದೇವಳದ ಆಡಳಿತ ಮೋಕ್ತೆಸರರಾದ ಎ.ಜೆ.ಶೇಖರ್ ಹೇಳಿದ್ರೂ ಅಂದಿನ ಕಥನ

#ullalavani #news #tulunad #latestnews #ullala #kapikad #umamaheshwaridevi #history
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d