UN NEWS NETWORKS
ಉಳ್ಳಾಲ: ಶಾರೀರಿಕ, ಮಾನಸಿಕ, ಸಾಮಾಜಿಕ , ಆಧ್ಯಾತ್ಮಿಕ ನೆಲೆಯಲ್ಲಿ ಕ್ರೀಡೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಸುಖ ಶಾಂತಿ ನೆಮ್ಮದಿಗೆ ಯಾವುದಾದರೂ ಕ್ರೀಡೆಯಲ್ಲಿ ಪ್ರತಿಯೊಬ್ಬರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ.ಎಸ್ ಯಡಪಡಿತ್ತಾಯ ಅಭಿಪ್ರಾಯಪಟ್ಟರು.









ಅವರು ದ.ಕ – ಉಡುಪಿ ಜಿಲ್ಲಾ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಉಳ್ಳಾಲ ವಲಯದ ಆಶ್ರಯದಲ್ಲಿ ಕೊಣಾಜೆ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯ ಕ್ಯಾಂಪಸ್ ಮೈದಾನದಲ್ಲಿ ಭಾನುವಾರ ಜರಗಿದ ಜಿಲ್ಲಾ ವಾರ್ಷಿಕ ಕ್ರೀಡಾಕೂಟ-2022 ನ್ನು ಉದ್ಘಾಟಿಸಿ ಮಾತನಾಡಿದರು.
ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿ. ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ಛಾಯಗ್ರಾಹಕರಲ್ಲಿನ ಒಗ್ಗಟ್ಟು ಕಂಡಾಗ ಶಾಸಕರ ಚುನಾವಣೆಗೆ ತಮ್ಮಲ್ಲಿ ಯಾರಾದರೂ ನಿಂತಲ್ಲಿ ಗೆಲುವು ಖಂಡಿತ. ಕೊರೊನಾ ಸಂಕಷ್ಟದಲ್ಲಿ ಸಿಲುಕಿದವರು ಛಾಯಾಗ್ರಾಹಕರು.ಅದನ್ನೆಲ್ಲವನ್ನು ಹಿಮ್ಮೆಟ್ಟಿ ಬೆಳೆದು ನಿಂತವರು ಎಲ್ಲರಿಗೂ ಸ್ಫೂರ್ತಿ. ಆಯೋಜನೆಗೊಂಡ ಕ್ರೀಡಾಕೂಟ ಎಲ್ಲರಿಗೂ ಮಾದರಿಯಾಗಲಿ ಎಂದರು.
ಎಂಸಿಎಫ್ ಡಿಜಿಎಂ ಕೀರ್ತನ್ ಕುಮಾರ್ ಕಾರ್ಕಳ ಮಾತನಾಡಿ, ಕ್ರೀಡಾಕೂಟ ಸಾಮರಸ್ಯದ ಕೇಂದ್ರವಾಗಬೇಕು. ಎಲ್ಲರೂ ಜತೆಗೂಡಿ ನೆರೆಯುವಾಗ ಅಂತಹ ವಾತಾವರಣ ಸೃಷ್ಟಿಯಾಗುವುದು. ಇದಕ್ಕೆ ಎಸ್ ಕೆಪಿಎ ಆಯೋಜಿಸಿರುವ ಕ್ರೀಡಾಕೂಟ ಪೂರಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಪಿಎ ಜಿಲ್ಲಾಧ್ಯಕ್ಷ ಆನಂದ್ ಎನ್. ಬಂಟ್ವಾಳ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕೊಣಾಜೆ ಗ್ರಾ.ಪಂ ಅಧ್ಯಕ್ಷೆ ಚಂಚಲಾಕ್ಷಿ, ಉಪಾಧ್ಯಕ್ಷೆ ರಾಮಕೃಷ್ಣ ಪಟ್ಟೋರಿ
ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ವಾಸುದೇವ ರಾವ್, ಎಸ್ ಕೆಪಿಎ ದ.ಕ-ಉಡುಪಿ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಕೋಶಾಧಿಕಾರಿ ನವೀನ್ ರೈ ಪುತ್ತೂರು,ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ರಾಜೇಶ್ ತೊಕ್ಕೊಟ್ಟು, ಶ್ರೀನಿವಾಸ್ ಐತಾಳ್, ಸಲಹಾ ಸಮಿತಿಯ ಲೋಕೇಶ್ ಸುಬ್ರಹ್ಮಣ್ಯ, ಪದ್ಮಪ್ರಸಾದ್ ಜೈನ್, ಮಾಜಿ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಉಡುಪಿ, ಜಗನ್ನಾಥ್ ಶೆಟ್ಟಿ ಮಂಗಳೂರು, ಮಾಜಿ ಸಂಚಾಲಕ ವಿಠಲ್ ಚೌಟ, ಜಯಕರ್ ಸುವರ್ಣ, ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಕುಮಾರ್, ನಾಗರಾಜ್ ಉಪಸ್ಥಿತರಿದ್ದರು.
ಎಸ್ ಕೆಪಿಎ ಉಳ್ಳಾಲ ವಲಯ ಅಧ್ಯಕ್ಷ ತನಂಜಯ್ ರಾವ್ ಸ್ವಾಗತಿಸಿದರು.ನಿತಿನ್ ಬೆಳುವಾಯಿ ವಂದಿಸಿದರು.


