UN networks
ಉಳ್ಳಾಲ: ಮುಂಬೈನ ವಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಳ್ಳಾಲದ ಯುವಕನೋರ್ವನ ಮೃತದೇಹ ಬೃಹತ್ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಜೇಬಿನಲ್ಲಿ ಸಿಕ್ಕ ಚುನಾವಣಾ ಗುರುತಿನ ಚೀಟಿಯ ಆಧಾರದಲ್ಲಿ ಉಳ್ಳಾಲ ಗುತ್ತು ಬಂಡಿಕೊಟ್ಯ ನಿವಾಸಿ ಸುಂದರ ಎಂಬವರ ಪುತ್ರ ಸುಧೀರ್ ಕುಮಾರ್(32) ಎಂದು ಗುರುತಿಸಲಾಗಿದೆ.
ಸುಧೀರ್ ಅವರನ್ನು ಕಾಣೆಯಾದ ಬಗ್ಗೆ ಮುಂಬೈಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಗಸ್ಟ್14ರಂದು ಪ್ರಕರಣ ದಾಖಲಾಗಿತ್ತು. ತನಗೆ ಜೀವ ಬೆದರಿಕೆ ಇದೆ ಎಂದು ಸುಧೀರ್ ಸ್ನೇಹಿತರಲ್ಲಿ ಈ ಹಿಂದೆ ತಿಳಿಸಿದ್ದರು ಎನ್ನಲಾಗಿದೆ. ಇದೊಂದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


