UN NEWS NETWORKS
ಉಳ್ಳಾಲ: ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶನಿವಾರ ಶ್ರಾವಣ ಅಮವಾಸ್ಯೆ ಪ್ರಯುಕ್ತ ಸಹಸ್ರಾರು ಭಕ್ತಾಧಿಗಳು ಭಾಗವಹಿಸಿ ಪವಿತ್ರ ಸಮುದ್ರ ಸ್ನಾನದಲ್ಲಿ ಭಾಗವಹಿಸಿದರು.

ಶ್ರೀ ಕ್ಷೇತ್ರದಲ್ಲಿ ಬೆಳಗ್ಗಿನಿಂದಲೇ ಭಕ್ತಾಧಿಗಳು ಆಗಮಿಸಿ ವೀಳ್ಯದೆಲೆ ಮತ್ತು ಅಡಿಕೆಯನ್ನು ಸಮುದ್ರರಾಜನಿಗೆ ಅರ್ಪಿಸಿ ಸಮುದ್ರದಲ್ಲಿ ತೀರ್ಥ ಸ್ನಾನ ಮುಗಿಸಿ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಶ್ರಾವಣ ಅಮವಾಸ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದು, ಈ ಬಾರಿ ಬೆಳಗ್ಗೆ3.30ರಿಂದಲೇ ಭಕ್ತಾಧಿಗಳು ಸಮುದ್ರ ಸ್ನಾನಕ್ಕೆ ಉಡಪಿ, ಕಾಸರಗೋಡು, ದ.ಕ.ಜಿಲ್ಲೆಯಿಂದ ಆಗಮಿಸಿದ್ದು, ಕೆಲ ಭಕ್ತಾಧಿಗಳು ಗದಾ ತೀರ್ಥದಲ್ಲಿ ಸ್ನಾನ ಮುಗಿಸಿ ಸಮುದ್ರ ಸ್ನಾನ ನಡೆಸಿದರೆ, ಕೆಲವು ಭಕ್ತಾಧಿಗಳು ಸಮುದ್ರ ಸ್ನಾನ ಮಗಿಸಿ ಬಳಿಕ ಗದಾತೀರ್ಥದಲ್ಲಿ ತೀರ್ಥಸ್ನಾನ ನೆರವೇರಿಸಿದರು. ಮಧ್ಯಾಹ್ನವರೆಗೆ ಭಕ್ತಾಧಿಗಳು ಸಮುದ್ರ ಸ್ನಾ ನಕ್ಕೆ ಆಗಮಿಸಿದ್ದು ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು.
ಪ್ರತೀ ವರ್ಷದಂತೆ ಈ ಬಾರಿಯೂ ಸಮುದ್ರ ಸ್ನಾನಕ್ಕೆ ಬರುವ ಭಕ್ತಾಧಿಗಳ ರಕ್ಷಣೆಗೆ ಉಳ್ಳಾಲ ಮೊಗವೀರಪಟ್ಣದ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಭಾಗವಹಿಸಿದ್ದು, ಈ ಬಾರಿಯೂ ಕರ್ತವ್ಯ ನಿರ್ವಹಿಸಿ ಅಶಕ್ತರಿಗೆ ಸಮುದ್ರ ಸ್ನಾನ ನಡೆಸಲು ಸಹಕರಿಸಿದರು. ಉಳ್ಳಾಲ ಪೊಲೀಸ್ ಸಿಬ್ಬಂದಿಗಳು, ಗೃಹರಕ್ಷಕ ಸಿಬ್ಬಂದಿಗಳು, ಕರಾವಳಿ ಕಾವಲು ಪಡೆಯ ಸ್ಥಳೀಯ ಜೀವರಕ್ಷಕರು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು.


