UN network
ದೇರಳಕಟ್ಟೆ: ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಮುಖದ ಕ್ಯಾನ್ಸರ್ ಆವರಿಸಿಕೊಂಡ ೧೭ವರ್ಷದ ಕೊಪ್ಪದ ಬಾಲಕನಿಗೆ ತಜ್ಞರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ಆ ಮೂಲಕ ಸಾವಿನ ದವಡೆಯಲ್ಲಿದ್ದ ಬಾಲಕನಿಗೆ ಮರುಜನ್ಮ ಸಿಕ್ಕಿದಂತಾಗಿದೆ ಎಂದು ಕಣಚೂರು ಆಸ್ಪತ್ರೆಯ ಕ್ಯಾನ್ಸರ್ ವಿಭಾಗ ಮುಖ್ಯಸ್ಥ ಡಾ. ಗುರುಪ್ರಸಾದ್ ಹೇಳಿದರು.
ಕಣಚೂರು ಆಸ್ಪತ್ರೆಯಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಅವರು ಕೊಪ್ಪದ ಬಾಲಕನಿಗೆ ನಡೆದ ಶಸ್ತ್ರಚಿಕಿತ್ಸೆಯ ವಿವರಣೆ ನೀಡಿ ಕ್ಯಾನ್ಸರ್ ಕುರಿತಾಗಿ ಜನರಲ್ಲಿ ಭಯ ಆವರಿಸಿದ್ದು ಮಕ್ಕಳಲ್ಲಿ ಕ್ಯಾನ್ಸರ್ ತಗುಲಿದಾಗ ೯೦ಶೇ. ವಾಸಿ ಆಗುವ ಸಾಧ್ಯತೆ ಇದ್ದು ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮಾತ್ರ ವಾಸಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಿದ್ದರೂ ಕಣಚೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊಪ್ಪದ ೧೭ವರ್ಷದ ಬಾಲಕನಿಗೆ ಕಣ್ಣು, ಮೂಗು, ಕಿವಿ ಎಲ್ಲವನ್ನೂ ಟ್ಯೂಮರ್ ಆವರಿಸಿದ್ದು ಆಹಾರ ಸೇವಿಸುವುದಕ್ಕೂ ಅಸಾಧ್ಯವಾಗಿತ್ತು. ಉಸಿರಾಡಲು ಕಷ್ಟವಾಗುತ್ತಿತ್ತು. ಮುಖದ ತುಂಬ ಒಂದು ಭಾಗದಿಮದ ಇನ್ನೊಮದು ಭಾಗಕ್ಕೆ ಸುಮಾರು ೧೮ಸೆಂ. ಮೀ. ಉದ್ದದ ಗಡ್ಡೆ ಬೆಳೆದಿದ್ದು ಗಂಭೀರ ಪ್ರಮಾಣದಲ್ಲಿ ಕ್ಯಾನ್ಸರ್ ಆವರಿಸಿದ್ದರೂ ಕಣಚೂರು ಆಸ್ಪತ್ರೆಯ ತಜ್ಞ ವೈದ್ಯರ ತಂಡದ ಅವಿರತ ಶ್ರಮದ ಫಲವಾಗಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದರು.


ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹಿಮಾನ್, ಚೀಫ್ ಮೆಡಿಕಲ್ ಆಫೀಸರ್ ಡಾ. ರೋಹನ್ ಮೋನಿಸ್, ಮೆಡಿಕಲ್ ಸುಪರಿಂಡೆಂಟ್ ಡಾ. ಎಂ.ಎಸ್. ಹರೀಶ್ ಶೆಟ್ಟಿ ಚಿಕಿತ್ಸೆ ನಡೆಸಿದ ಹಾಗೂ ಸಹಕರಿಸಿದ ವೈದ್ಯ ತಂಡದ ಆಂಕೋಲಾಜಿ ಸರ್ಜನ್ ಡಾ. ರವಿವರ್ಮ ಕೆ., ಡಾ. ಗುರುಪ್ರಸಾದ್, ಡಾ. ನಜೀಬ್, ಡಾ. ಮನೀಷ್ ಶೆಟ್ಟಿ, ಡಾ. ಸಂಭ್ರಮ್, ಡಾ. ಪದ್ಮರಾಜ್, ಡಾ. ಚೇತನ್, ಹಾಗೂ ಅನಸ್ತೇಶಿಯಾ ವಿಭಾಗ ಮುಖ್ಯಸ್ಥ ಡಾ. ವಿನ್ಸೆಂಟ್ ಮಥಾಯಿಸ್ ಉಪಸ್ಥಿತರಿದ್ದರು. ಸಾತ್ವಿಕ್ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್ಗೆ: ಕೊಪ್ಪದ ಬಾಲಕನಿಗೆ ನಡೆಸಿದ ಶಸ್ತ್ರ ಚಿಕಿತ್ಸೆ ವೈದ್ಯಕೀಯ ಕ್ಷೇತ್ರದ ಪ್ರಪ್ರಥಮ ಯಶಸ್ವಿ ಶಸ್ತ್ರಚಿಕಿತ್ಸೆ ಎಂಬುದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ. ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯಕೀಯ ಕ್ಷೇತ್ರದಲ್ಲಿ ದಾಖಲೆ ಬರೆದ ವೈದ್ಯರ ತಂಡಕ್ಕೆ ಆಡಳಿತ ಮಂಡಳಿಯ ಪರವಾಗಿ ಅಭಿನಂದನೆಗಳು. ಈ ಸಾಧನೆಯ ಕುರಿತಾದ ಲೇಖನಗಳು ಇಂಟರ್ ನ್ಯಾಷನಲ್ ಜರ್ನಲ್ಗಳಲ್ಲಿ ಪ್ರಕಟವಾಗಲಿದೆ. ಹಾಗೆಯೇ ಕಣಚುರು ಆಸ್ಪತ್ರೆ ಕೇವಲ ವೈದ್ಯಕೀಯ ಶಿಕ್ಷಣ ನೀಡುವ ವೈದ್ಯಕೀಯ ಕಾಲೇಜು ಮಾತ್ರವಲ್ಲ, ಅತ್ಯುತ್ತಮ ದಾಖಲಾರ್ಹ ಚಿಕಿತ್ಸೆ ನೀಡುವ ಆಸ್ಪತ್ರೆಯೂ ಹೌದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೊಪ್ಪದ ಬಾಲಕನ ಚಿಕಿತ್ಸೆ ಮಹಾನಗರಗಳಲ್ಲಿ ತುಂಬ ದುಬಾರಿಯಾಗಿದ್ದು ನಾವು ಸಂಪೂರ್ನ ಉಚಿತವಾಗಿ ನಡೆಸುವ ಮೂಲಕ ಮಾನವೀಯ ನೆಲೆಯಲ್ಲಿ ಕಣಚೂರು ಆಸ್ಪತ್ರೆ ಸದಾ ರೋಗಿಗಳ ಜೊತೆಗೆ ಇದೆ ಎಂಬುದನ್ನು ಸಾರಿದೆ. ಆಝಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಆಸ್ಪತ್ರೆಯಲ್ಲಿ ಒಂದು ತಿಂಗಳು ಬಹಳಷ್ಟು ಸೇವೆಗಳನ್ನು ಉಚಿತವಾಗಿ ನೀಡುತ್ತಿದ್ದೇವೆ.
ನಿರ್ದೇಶಕರು
ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ
**ಒಂದೆಡೆ ಮಗನ ರೋಗ ಉಲ್ಬಣಗೊಳ್ಳುತ್ತಿತ್ತು. ಇನ್ನೊಂದೆಡೆ ಚಿಕಿತ್ಸೆಗೆ ಹಣವೂ ಇರಲಿಲ್ಲ. ಪರಿಸ್ಥಿತಿ ಯಾವ ಹಂತಕ್ಕೆ ತಲುಪಿತ್ತೆಂದರೆ ಮಗನಿಗೆ ಉಸಿರಾಡಲೂ ಸಾಧ್ಯವಾಗುತ್ತಿರಲಿಲ್ಲ, ತೊಟ್ಟು ಹನಿ ನೀರು ಕುಡಿಯಲೂ ಆಗುತ್ತಿರಲಿಲ್ಲ. ಕುಟುಂಬ ನಿರ್ವಹಣೆಗೆ ಮನೆಯಲ್ಲಿ ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿಯಲ್ಲಿದ್ದ ನಮ್ಮ ಕುಟುಂಬದ ಮಗನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಸಂಪೂರ್ಣ ಉಚಿತವಾಗಿ ನಡೆಸಿಸಿಕೊಡುವ ಮೂಲಕ ಕಣಚೂರು ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ವೈದ್ಯರು ನಮ್ಮ ಪಾಲಿನ ದೇವರಾಗಿದ್ದಾರೆ.
ಚಿಕಿತ್ಸೆ ಪಡೆದ ರೋಗಿಯ ತಾಯಿ
ಫೊಟೋ ೨೫ಉಳ್ಳಾಲ್ ಕಣಚೂರು, ೧


