UN networks
ಉಳ್ಳಾಲ: ದೇರಳಕಟ್ಟೆ ಪ್ರದೇಶ ಶೈಕ್ಷಣಿಕವಾಗಿ ಅಭಿವೃದ್ಧಿ ಯ ಕೇಂದ್ರ, ಭವಿಷ್ಯದಲ್ಲಿ ಸರ್ವರಿಗೂ ಶಿಕ್ಷಣ ನೀಡುವ ಶಿಕ್ಷಣ ಕಾಶಿಯಾಗಿ ಹೊರಹೊಮ್ಮಲಿದೆ ಎಂದು ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಯು.ಟಿ ಖಾದರ್ ಹೇಳಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ವಠಾರದಲ್ಲಿ ನಿರ್ಮಾಣಗೊಂಡ ದೇರಳಕಟ್ಟೆ ಪದವಿಪೂರ್ವ ಕಾಲೇಜು ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಪಿಯುಸಿ ಕಾಲೇಜು ಆರಂಭವಾಗಬೇಕೆಂದು ಕೋಟೆಕಾರು, ಹರೇಕಳ, ಸುಜೀರ್, ಪಾವೂರು, ಕೊಣಾಜೆ ಪ್ರದೇಶಗಳಲ್ಲಿ ಒತ್ತಡಗಳಿದ್ದರೂ, ಎಲ್ಲರಿಗೂ ಸಹಕಾರವಾಗುವ ಉದ್ದೇಶದಿಂದ ದೇರಳಕಟ್ಟೆಯಲ್ಲಿ ಕಾಲೇಜು ನಿರ್ಮಿಸಲಾಗಿದೆ. ಮಂಗಳೂರು ಕ್ಷೇತ್ರ ದ ಪ್ರತಿ ಗ್ರಾಮಗಳಲ್ಲಿ ಹೈಸ್ಕೂಲ್ ಇರುವುದು ಹೆಮ್ಮೆಯ ಸಂಗತಿ. ಶಿಕ್ಷಣ ಸಚಿವ ನಾಗೇಶ್ ಹಾಗೂ ಅಧಿಕಾರಿಗಳಿಗೆ ಕಾಲೇಜು ಒದಗಿಸಿರುವುದಕ್ಕಾಗಿ ಅಭಿನಂಧನೆ ಸಲ್ಲಿಸುತ್ತೇನೆ. ಜಿಲ್ಲೆಯ ವಿವಿದೆಡೆಗಳ ಶಾಸಕರು ಐದು ಕಾಲೇಜುಗಳಿಗೆ ಬೇಡಿಕೆಗಳನ್ನು ಇಟ್ಟಿದ್ದರೂ ಸಚಿವರು ನನ್ನ ಕ್ಷೇತ್ರಕ್ಕೆ ನೀಡಿರುವುದು ಕೃತಜ್ಞತಾ ಪೂರ್ವ. ತಾನು ಸಚಿವನಾಗಿದ್ದ ಸಂದರ್ಭ ಅವರ ಕ್ಷೇತ್ರಕ್ಕೆ ಯೋಜನೆಗಳನ್ನು ಒದಗಿಸಿರುವ ಋಣವನ್ನು ಇಟ್ಟು ತನ್ನ ಕ್ಷೇತ್ರಕ್ಕೆ ಕಾಲೇಜು ಮಂಜೂರುಗೊಳಿಸಿದ್ದಾರೆ. ಕಲಾ ವಿಭಾಗ ಮಾತ್ರ ಸದ್ಯ ಆರಂಭಗೊಂಡಿದ್ದು, ಎಲ್ಲಾ ಸರಿಹೋದಲ್ಲಿ ವಾಣಿಜ್ಯ, ವಿಜ್ಞಾನ ವಿಭಾಗಗಳನ್ನು ಸ್ಥಾಪಿಸುತ್ತೇವೆ. ಐಟಿಐ ಸ್ಥಾಪನೆಗೆ ಇಲಾಖೆ ವಿಶ್ವಾಸ ನೀಡಿದ್ದರೂ, ಸ್ಥಳಾವಕಾಶವಿಲದ ಹಿನ್ನೆಲೆಯಲ್ಲಿ ವಾಪಸ್ಸು ಹೋಗಿದೆ ಎಂದರು.
ಬೆಳ್ಮ ಗ್ರಾ.ಪಂ ಉಪಾಧ್ಯಕ್ಷೆ ರಮ್ಲತ್ ಭಾನು, ಪಿಯು ಕಾಲೇಜಿನ ನಿಯೋಜಿತ ಪ್ರಾಂಶುಪಾಲ ಬಾಬು ಗಾಂವ್ಕರ್, ವಾಡ್೯ ಸದಸ್ಯ ಇಕ್ಬಾಲ್, ಸುರಕ್ಷಾ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ, ಶಿಶು ಕಲ್ಯಾಣ ಇಲಾಖೆ ಸಹನಿರ್ದೇಶಕ ಹರೀಶ್, ಅಂಗನವಾಡಿ ಮೇಲ್ವಿಚಾರಕಿ ಕಲ್ಪನಾ, ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಪಿ ಹೆಚ್ ಇಸ್ಮಾಯಿಲ್,ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ರೈ, ಕಾರ್ಯದರ್ಶಿ ಸುರೇಶ್ ಆಚಾರ್, ಸಿದ್ದೀಖ್ ಬೆಳ್ಮ ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಯೂಸುಫ್ ಬಾವಾ, ವಿಜಯ ಕುಮಾರಿ,
ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ನಯನಾ ಕುಮಾರಿ ಕೆ ಸ್ವಾಗತಿಸಿದರು. ಬೆಳ್ಮ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಸತ್ತಾರ್ ಪ್ರಸ್ತಾವನೆಗೈದರು. ಅಂಬಿಕಾ ನಿರೂಪಿಸಿದರು. ಶಿಕ್ಷಕಿ ವಿಮಲ ವಂದಿಸಿದರು.
ಈ ವೇಳೆ ಬೆಂಗಳೂರು ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಇವರ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿಯನ್ನು ನೀಡಲಾಯಿತು.


