Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಮನೆಗಳನ್ನು ತೊರೆಯುತ್ತಿರುವ ಪಾಂಡ್ಯ-ನಡೋಡಿ ನಿವಾಸಿಗಳು

UllalaVaniBy UllalaVaniJuly 23, 2015Updated:July 23, 2015No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುನ್ನೂರು: ಅಲ್ಲಿ ಎಲ್ಲರೂ ಮನೆಗಳನ್ನು ತೊರೆಯುತ್ತಿದ್ದಾರೆ. ಮುಂದೊಂದು ದಿನ ಅಲ್ಲಿ ಯಾರೂ ಇರುವುದಿಲ್ಲ. ಆ ವೇಳೆ ಅದು ನಿರ್ವಸತಿ ದ್ವೀಪ ನಿರ್ಮಾಣ ಆಗುವುದರಲ್ಲಿ ಸಂಶಯವಿಲ್ಲ. ಇದು ಮುನ್ನೂರು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುತ್ತಾರುಗುತ್ತು , ತೇವುಲ, ಬಟ್ಟೆದಡಿ ಪ್ರದೇಶಗಳು ಸುತ್ತುವರಿದ ಪಾಂಡ್ಯಾರ್ ಮತ್ತು ನಡೋಡಿ ಪ್ರದೇಶದ ಕತೆ.

ಸುಮಾರು ಐದು ಎಕರೆ ವಿಸ್ತೀರ್ಣದಲ್ಲಿರುವ ಪಾಂಡ್ಯ ಮತ್ತು ನಡೋಡಿ ಪ್ರದೇಶದಲ್ಲಿ 10ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಮನೆಗಳಿದ್ದವು. ಆದರೆ ಮಳೆಗಾಲದಲ್ಲಿ ಅವರ ಸ್ಥಿತಿ ಶೋಚನೀಯವಾಗಿರುವುದರಿಂದ ಐದು ಕುಟುಂಬಗಳು ಈಗಾಗಲೇ ಊರು ಬಿಟ್ಟು ಬೇರೆಡೆಗೆ ಸ್ಥಳಾಂತರಗೊಂಡಿದೆ. ಪಾಂಡ್ಯಾರ್ ಮತ್ತು ನಡೋಡಿ ಪ್ರದೇಶಗಳ ಸುತ್ತಲೂ ತಗ್ಗು ಪ್ರದೇಶಗಳಿದ್ದು, ಹೆಚ್ಚಿನ ಗದ್ದೆಗಳು ಮಳೆಗಾಲದಲ್ಲಿ ನೀರಿನಿಂದ ಆವೃತ್ತವಾಗುತ್ತಿದೆ. ಬೇಸಿಗೆ ಕಾಲದಲ್ಲಿ ಗದ್ದೆಯ ಬದಿಗಳೆ ಇವರಿಗೆ ಸಂಪರ್ಕ ರಸ್ತೆಯಾದರೆ ಮಳೆಗಾಲದಲ್ಲಿ ನೀರು ತುಂಬಿದ ಗದ್ದೆಗಳೇ ಇವರಿಗೆ ಸಂಪರ್ಕ ರಸ್ತೆ. ಈಗಾಗಲೇ ಪಾಂಡ್ಯಾರ್‍ನ ಒಂದು ಕುಟುಂಬ ಸ್ವಂತ ಮನೆ ಬಿಟ್ಟು ಉಳ್ಳಾಲಕ್ಕೆ ವಲಸೆ ಹೋಗಿದ್ದು, ನಡೋಡಿಯಲ್ಲಿ ನಾಲ್ಕು ಕುಟುಂಬಗಳು ಊರು ಬಿಟ್ಟಿದ್ದಾರೆ. ಖಾಲಿ ಬಿದ್ದಿರುವ ಮನೆಗಳು ಕುಸಿಯುವ ಭೀತಿಯಲ್ಲಿದೆ.

22ullal1 - Copy

22ullal2

22ullal3

DSC_6905

DSC_6907

 

DSC_6910

DSC_6919

DSC_6922

DSC_6923

DSC_6928 DSC_6950

DSC_6953

DSC_6957

DSC_6965

DSC_6972

DSC_6978

DSC_6986 DSC_6988ಹೆಣ್ಮಕ್ಕಳಿಗೆ ಮದುವೆ ಭಾಗ್ಯವಿಲ್ಲ:

ಈ ಪ್ರದೇಶದಲ್ಲಿರುವ ಐದು ಮನೆಗಳಲ್ಲಿ ಮದುವೆ ವಯಸ್ಸಿನ ಹಲವು ಹೆಣ್ಮಕ್ಕಳಿದ್ದಾರೆ. ಆರ್ಥಿಕವಾಗಿ ಸಬಲರಲ್ಲದ ಕುಟುಂಬ ಬೇರೆಡೆ ಸ್ಥಳಾಂತರವಾಗಲು ಅಶಕ್ತರಾಗಿದ್ದಾರೆ. ಇವರ ಮನೆಗಳಿಗೆ ಸರಿಯಾದ ದಾರಿಯಿಲ್ಲ, ಮಳೆಗಾಲದಲ್ಲಂತೂ ಹೋಗುವುದೇ ಅಸಾಧ್ಯ ಎಂದು ಇಲ್ಲಿನ ಯುವತಿಯರನ್ನು ಮದುವೆಯಾಗಲು ಯುವಕರ್ಯಾರೂ ಮುಂದಾಗುತ್ತಿಲ್ಲ. ಇದೇ ಕಾರಣದಿಂದ ಮನೆ ಬಿಟ್ಟು ಹೋದ ಕುಟುಂಬಗಳೂ ಇವೆ.

ಮಳೆ ಬಂದರೆ ಮಕ್ಕಳಿಗೆ ಶಾಲೆ ಇಲ್ಲ :

ಈ ಪ್ರದೇಶದಲ್ಲಿರುವ ಮಕ್ಕಳಿಗೆ ಮಳೆ ಬಂದರೆ ಶಾಲೆಗೆ ರಜೆ ಮಾಡುವ ಸ್ಥಿತಿ. ಸಾಧಾರಣ ಮಳೆಯಾದರೆ ಹೆತ್ತವರು ಮಕ್ಕಳನ್ನು ಹೆಗಲ ಮೇಲೆ ಕುಳ್ಳಿರಿಸಿ ಕರೆದುಕೊಂಡು ಹೋದರೆ, ತೀವ್ರ ಮಳೆ ಬಂದರೆ ಮಕ್ಕಳಿಗೂ ಶಾಲೆಗೆ ರಜೆ, ಎಸಕ್ಕೆ ಹೋಗುವವರು ಮನೆಯಲ್ಲಿಯೇ ಇರುವ ಸ್ಥಿತಿ. ಮಳೆಗಾಲದಲ್ಲಿ ಅನಾರೋಗ್ಯವಾದರೆ ಸೂಕ್ತ ಚಿಕಿತ್ಸೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಇಲ್ಲ ಎನ್ನುತ್ತಾರೆ ಸ್ಥಳೀಯರಾದ ಮಹಮ್ಮದ್.

ಹಾವು ಕಚ್ಚಿದಾಗ ಕೇಳುವವರಿರಲಿಲ್ಲ :

ವರ್ಷದ ಹಿಂದೆ ಪಾಂಡ್ಯಾರಿನಲ್ಲಿದ್ದ ಮನೆಯೊಂದರ ಬಾಲಕನಿಗೆ ನೆರೆ ನೀರಿನಲ್ಲಿ ಬಂದ ಹಾವೊಂದು ಕಚ್ಚಿತ್ತು. ಆದರೆ ರಾತ್ರಿ ಸಮಯವಾಗಿದ್ದರಿಂದಾಗಿ ಬಾಲಕನನ್ನು ಔಷಧಿಗೆ ಕೊಂಡೊಯ್ಯುವ ವ್ಯವಸ್ಥೆಯಿರಲಿಲ್ಲ. ಮನೆಯ ಸುತ್ತಲೂ ನೀರು ತುಂಬಿದ್ದರಿಂದಾಗಿ ಮನೆಯವರು ಅಸಹಾಯಕಾರಿದ್ದರು. ಬಳಿಕ ಬೊಬ್ಬೆ ಹಾಕಲು ಆರಂಭಿಸಿದ ಮನೆಯವರ ದನಿ ಕೇಳಿ ಸುಮಾರು 4. ಕಿ.ಮೀ ದೂರದಲ್ಲಿದ್ದ ಸ್ಥಳೀಯರು ದೋಣಿ ಮೂಲಕ ಬಂದು ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದರು. ಸ್ವಲ್ಪ ಹೊತ್ತಾದರೂ ಬಾಲಕನ ಜೀವಕ್ಕೆ ಅಪಾಯವಿತ್ತು. ಎಂದು ಮನೆಯವರು ತಿಳಿಸಿದ್ದಾರೆ.

ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ :

ಪಾಂಡ್ಯಾರ್ ಮತ್ತು ನಡೋಡಿ ಪ್ರದೇಶದ ಸುತ್ತಮುತ್ತಲಿನ ಪ್ರದೇಶ ಖಾಸಗಿಯಾಗಿರುವುದರಿಂದ ರಸ್ತೆ ನಿರ್ಮಾಣಕ್ಕೆ ತಡೆಯಾಗುತ್ತಿದೆ. ಇನ್ನೊಂದೆಡೆ ಈ ಪ್ರದೇಶ ಜನಪ್ರತಿನಿಧಿಗಳಿಂದ ಅವಗಣನೆಯಾಗಿದೆ ಎನ್ನುವುದು ಸ್ಥಳೀಯರ ವಾದ. ಕಳೆದ 15 ವರ್ಷಗಳಿಂದ ಸ್ಥಳೀಯ ಶಾಸಕರಿಗೆ, ಜಿಲ್ಲಾ ಮಟ್ಟ, ಗ್ರಾಮ ಪಂಚಾಯತ್ ಮಟ್ಟದ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾರೂ ಕೂಡಾ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಶ್ರಫ್.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ತಲಪಾಡಿಯ ಶಾರದಾ ಪದವಿ ಕಾಲೇಜಿನಲ್ಲಿ ಬಿಎಸ್ಇ ಪ್ರಮಾಣೀಕೃತ ಹಣಕಾಸು ಜಾಗೃತಿ ಕಾರ್ಯಕ್ರಮ

May 14, 2026

ಮೇ 17 -ಕೆ ಸಿ ನಗರದಲ್ಲಿ ಸುನ್ನೀ ಆದರ್ಶ ಸಂಗಮ

May 14, 2026

ಮಂಗಳೂರು ವಿವಿಯಲ್ಲಿ ಏ.27ರಂದು ರಕ್ತದಾನ ಶಿಬಿರ

May 13, 2026
Leave A Reply

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
suddi

ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ: ಹೊಣೆ ಯಾರದು? ಕೇಂದ್ರ ಶಿಕ್ಷಣ ಸಚಿವಾಲಯ ಯಾಕೆ ಮೌನ?

By UllalaVaniMay 15, 20260

ನವದೆಹಲಿ: ದೇಶದ ಅತ್ಯಂತ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದಿನದಿಂದ ದಿನಕ್ಕೆ ಹೊಸ…

ಸಂವಿಧಾನ ರಕ್ಷಣೆಯೇ ಪ್ರಮುಖ ಗುರಿ: ಹಿಜಬ್ ಆದೇಶ ಸ್ವಾಗತಿಸಿ ಸರ್ಕಾರಕ್ಕೆ ಇಬ್ರಾಹಿಂ ನವಾಝ್ ಅಭಿನಂದನೆ

May 15, 2026

ಡೀಸೆಲ್ ದರ ಏರಿಕೆ : ಖಾಸಗಿ ಬಸ್ ನೌಕರರು ಮತ್ತು ಸಾರ್ವಜನಿಕರ ಮೇಲೆ ಭಾರೀ ಹೊರೆ

May 15, 2026

ಜೂನ್ 21ಕ್ಕೆ ನೀಟ್-ಯುಜಿ ಮರು ಪರೀಕ್ಷೆ ನಿಗದಿ..!

May 15, 2026
1 2 3 … 1,918 Next
Automatic YouTube Gallery

ಮಹಿಳಾ ಸ್ನೇಹಿ ಆಡಳಿತಕ್ಕೆ ಜಿಲ್ಲಾಡಳಿತದ ಮಹತ್ವದ ಹೆಜ್ಜೆ

ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ “ವಾತ್ಸಲ್ಯ ಕೊಠಡಿ” ಆರಂಭ; ಮಹಿಳಾ ಸಿಬ್ಬಂದಿಗೆ ಮಕ್ಕಳೊಂದಿಗೆ ಸಮಯ ಕಳೆಯಲು ವಿಶೇಷ ಸೌಲಭ್ಯ

ಮಕ್ಕಳ ಆರೈಕೆಗೆ ಸಿಬ್ಬಂದಿ ನೇಮಕಕ್ಕೆ ಸಿಇಒಗೆ ಪತ್ರ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಹಿಳಾ ಸ್ನೇಹಿ ಆಡಳಿತಕ್ಕೆ ಜಿಲ್ಲಾಡಳಿತದ ಮಹತ್ವದ ಹೆಜ್ಜೆ
Now Playing
ಮಹಿಳಾ ಸ್ನೇಹಿ ಆಡಳಿತಕ್ಕೆ ಜಿಲ್ಲಾಡಳಿತದ ಮಹತ್ವದ ಹೆಜ್ಜೆ
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ “ವಾತ್ಸಲ್ಯ ಕೊಠಡಿ” ಆರಂಭ; ಮಹಿಳಾ ಸಿಬ್ಬಂದಿಗೆ ...
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ “ವಾತ್ಸಲ್ಯ ಕೊಠಡಿ” ಆರಂಭ; ಮಹಿಳಾ ಸಿಬ್ಬಂದಿಗೆ ಮಕ್ಕಳೊಂದಿಗೆ ಸಮಯ ಕಳೆಯಲು ವಿಶೇಷ ಸೌಲಭ್ಯ

ಮಕ್ಕಳ ಆರೈಕೆಗೆ ಸಿಬ್ಬಂದಿ ನೇಮಕಕ್ಕೆ ಸಿಇಒಗೆ ಪತ್ರ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಭಾರತದಲ್ಲಿ MBBS ದುಬಾರಿ: ವಿದೇಶದತ್ತ ವಿದ್ಯಾರ್ಥಿಗಳ ಮುಖ
Now Playing
ಭಾರತದಲ್ಲಿ MBBS ದುಬಾರಿ: ವಿದೇಶದತ್ತ ವಿದ್ಯಾರ್ಥಿಗಳ ಮುಖ
ಒಂದು ಕೋಟಿ ಇದ್ದರೂ MBBS ಕನಸು ದೂರ; ಖಾಸಗಿ ಮೆಡಿಕಲ್ ಕಾಲೇಜು ಶುಲ್ಕಕ್ಕೆ ಪೋಷಕರ ...
ಒಂದು ಕೋಟಿ ಇದ್ದರೂ MBBS ಕನಸು ದೂರ; ಖಾಸಗಿ ಮೆಡಿಕಲ್ ಕಾಲೇಜು ಶುಲ್ಕಕ್ಕೆ ಪೋಷಕರ ಕಂಗಾಲು

ವೈದ್ಯಕೀಯ ಶಿಕ್ಷಣ ಶ್ರೀಮಂತರಿಗಷ್ಟೇ ಸೀಮಿತವೇ?

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #mbbs #Doctor #Students
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version