UN networks
ಕೊಣಾಜೆ: ಯುವಕನೋರ್ವ ಮನೆಯೊಳಗೆ ನೆಡಣುಬಿಗಿದು ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ
ಮೂಡಿಜೇರ ಸೈಟ್ ನಲ್ಲಿ ನಡೆದಿದೆ.
ಕೊಣಾಜೆ ಸಮೀಪದ ನಾರಾಯಣ ಶೆಟ್ಟಿ ಎಂಬವರ ಪುತ್ರ ಮಹೇಶ್ ಶೆಟ್ಟಿ(35) ಆತ್ಮಹತ್ಯೆ ಮಾಡಿಕೊಂಡ ಯುವಕ . ಪ್ಲಂಬರ್ ಆಗಿದ್ದ ಮಹೇಶ್ ಶೆಟ್ಟಿ ಅವಿವಾಹಿತರಾಗಿದ್ದಾರೆ. ಓರ್ವನೇ ಪುತ್ರನಾಗಿರುವ ಇವರು ಮನೆಮಂದಿಗೆ ಆಧಾರವಾಗಿದ್ದರು. ಇಬ್ಬರು ಸಹೋದರಿಯರು ವಿವಾಹಿತರಾಗಿದ್ದಾರೆ.
ತಾಯಿ ತನ್ನ ಸಹೋದರಿ ಮನೆಗೆ ತೆರಳಿದ್ದ ಸಂದರ್ಭ ಮಹೇಶ್ ಮನೆಯಲ್ಲಿ ಒಬ್ಬರೇ ಇದ್ದರು. ಸಂಜೆ ಗೆಳೆಯರ ಜೊತೆಗೆ ಕ್ರಿಕೆಟ್ ಆಟವಾಡಿ ಮನೆಗೆ ಬಂದಿದ್ದ ಮಹೇಶ್, ಗೆಳೆಯರಿಗೆ ವಾಟ್ಸ್ಯಾಪ್ ನಲ್ಲಿ ಫಾರ್ವಡ್೯ ಮೆಸೇಜ್ ಗಳನ್ನು ಮಾಡಿದ್ದರು. ಆದರೆ ಸಂಜೆ 7 ರ ನಂತರ ಫಿನಾಯಿಲ್ ಸೇವಿಸಿ, ಅರ್ಧ ದೋಸೆ ತಿಂದು ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೊಬೈಲ್ ವಶಕ್ಕೆ ಪಡೆದುಕೊಂಡಿರುವ ಕೊಣಾಜೆ ಪೊಲೀಸರು ಅದನ್ನು ಅನ್ಲಾಕ್ ನಡೆಸಿದ ಬಳಿಕವಷ್ಟೇ ಕಾರಣ ತಿಳಿದುಬರಲಿದೆ ಎನ್ನುತ್ತಾರೆ ಮಹೇಶ್ ಆಪ್ತ ವಲಯ.


