ಮಂಗಳೂರು: ನಗರದ ಹೃದಯಭಾಗ ಫಳ್ನೀರ್ನಲ್ಲಿ ಎಂ ಎಫ್ ಸಿ ಬ್ಯಾನರ್ ನಡಿ ರಾಯಲ್ ಬೇಕ್ಸ್ ದ ರಿಯಲ್ ಟೇಸ್ಟ್ ಆಫ್ ಇಂಡಿಂiÀi ಬೇಕರಿ ಹಾಗೂ ರೆಸ್ಟೋರೆಂಟ್ ಅನ್ನು ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಸೋಮವಾರ ಉದ್ಘಾಟಿಸಿದರು. ಪ್ಲಾಟಿನಂ ಥಿಯೇಟರ್ ಇದ್ದ ಸ್ಥಳದಲ್ಲಿ ಸಂಸ್ಥೆ ಕಾರ್ಯಾರಂಭಗೊಂಡಿದ್ದು, ಉತ್ತಮ ಜನಾರ್ಕಷಣೆಯನ್ನು ಹೊಂದಿದೆ.
2012 ರಲ್ಲಿ ಅಥೆನಾ ಆಸ್ಪತ್ರೆ ಎದುರುಗಡೆ ಎಂಎಫ್ಸಿ ಮೊದಲ ಘಟಕವನ್ನು ಆರಂಭಿಸಿತ್ತು. 2020 ರ ಆ.13 ರಂದು ಫಳ್ನೀರ್ ನಲ್ಲಿ
ಫುಡ್ ಮಾರ್ಟ್ ರೆಸ್ಟೋರೆಂಟ್ ಆಗಿ ಎರಡನೇ ಘಟಕ ಆರಂಭಗೊಂಡಿತು. . ಇದೀಗ ಗ್ರಾಹಕರ ಬೇಡಿಕೆಯ ಮೇರೆಗೆ ರಾಯಲ್ ಬೇಕ್ಸ್ ಅನ್ನು ಬೇಕರಿ ಆರಂಭಿಸಲಾಗಿದೆ. ಇಲ್ಲಿ ಡ್ರೈಫ್ರೂಟ್ಸ್, ಬೇಕರಿ ಐಟಂ, ಇಂಪೋರ್ಟೆಡ್ ಸ್ವೀಟ್ಸ್ ಹಾಗೂ ಚಾಕಲೇಟುಗಳು, ಅತ್ಯುತ್ತಮ ಗುಣಮಟ್ಟದ ಕ್ಯಾಷಿವ್ ಸ್ವೀಟ್ಸ್, ಬೆಂಗಾಳಿ ಸ್ವೀಟ್ಸ್, ರಸಗುಲ್ಲಾ, ಮಲಾಯಿಗುಲ್ಲ, ಇಂಪೋರ್ಟೆಡ್ ಫ್ರೂಟ್ಸ್, ಎನರ್ಜಿ ಡ್ರಿಂಕ್ಸ್ ಮುಂಬೈನಲ್ಲಿ ಖ್ಯಾತಿ ಗಳಿಸಿರುವ ಅಫ್ಲಾತುಲ್, ಮಾಂಗುಲಾಯಿ ನಂತಹ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಲಭ್ಯವಿದೆ. ಸ್ನ್ಯಾಕ್ಸ್ ಹಾಗೂ ಚಾಕಲೇಟ್ ಐಟಂಗಳು ಅಂತರಾಷ್ಟ್ರೀಯ ಗುಣಮಟ್ಟದ್ದಾಗಿದೆ.
ಎಂ ಎಫ್ ಸಿ ಫುಡ್ ಮಾರ್ಟ್ ನಲ್ಲಿ ಮಂಗಳೂರಿನ ಜನತೆ ಇಷ್ಟಪಟ್ಟಿರುವ ಟರ್ಕಿ ಶ್ವಾರ್ಮ, ಚಿಕನ್ ಟಿಕ್ಕಾ, ಚಿಕನ್ ಆಲ್ಫಂ, ಬ್ರೋಸ್ಟೆಡ್ ಚಿಕನ್ ಬಿರಿಯಾನಿ ಹಾಗೂ ಗೀ ರೈಸ್ ಲಭ್ಯವಿದೆ. ಸಂಸ್ಥೆ ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಗ್ರಾಹಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ದೇರಳಕಟ್ಟೆ, ಸುರತ್ಕಲ್, ಬಿ.ಸಿರೋಡ್ ಭಾಗಗಳಲ್ಲಿಯೂ ಅಂಗಸಂಸ್ಥೆಗಳಿದ್ದು, ಆ ಭಾಗಗಳಲ್ಲಿ ಡೆಲಿವರಿಯೂ ಲಭ್ಯವಿದೆ.
ಕುದ್ರೋಳಿ ನಡುಪಳ್ಳಿ ಖತೀಬರು ದುಆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಶಾಸಕ ಯು.ಟಿ ಖಾದರ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಯುವಕಾಂಗ್ರೆಸ್ ಮುಖಂಡ ಮಿಥುನ್ ರೈ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೋ, ಇಬ್ರಾಹಿಂ ಸಖಾಫಿ ಬೆಂಗಳೂರು, ಸಹಾಯಕ ಪೆÇಲೀಸ್ ಆಯುಕ್ತ ಪಿ.ಎ ಹೆಗಡೆ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ರೈ ಹಾಗೂ ಸಂಸ್ಥೆ ಪಾಲುದಾರರಾದ ಸಿದ್ದೀಖ್ ಎಂ.ಎಫ್ .ಸಿ, ಸಲೀಂ ಎಂ.ಎಫ್ .ಸಿ, ವಫ್ಫಾರ್ ಎಂ ಎಫ್ ಸಿ ಭಾಗವಹಿಸಿದ್ದರು.
ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ಹೃದಯಭಾಗದಲ್ಲಿ ತೆರೆದುಕೊಂಡಿರುವ ಎಂ ಎಫ್ ಸಿ ರಾಯಲ್ ಬೇಕ್ಸ್ ಷೋರೂಮ್ ಗ್ರಾಹಕರಿಗೆ ಒಳ್ಳೆಯ ಅವಕಾಶ. ಮಂಗಳೂರು ನಗರದಲ್ಲಿ ಯಾವ ವ್ಯಾಪಾರವೂ ಸಕ್ಸೆಸ್ ಆಗದೆ ಉಳಿಯಲಿಲ್ಲ. ವ್ಯಾಪಾರದತ್ತ ಹೆಚ್ಚಿನ ಗಮನ ಕೊಡುವುದು, ಗ್ರಾಹಕರನ್ನು ಚೆನ್ನಾಗಿ ನೋಡಿಕೊಳ್ಳುವುದು ಹಾಗೂ ಉತ್ತಮ ಗುಣಮಟ್ಟದ ಪ್ರಾಡಕ್ಟ್ ಗಳನ್ನು ನೀಡಿದಲ್ಲಿ ಯಶಸ್ಸು ಖಂಡಿತ. ಹಿಂದೆ ನಗರದ ಜನತೆ ಪ್ಲ್ಯಾಟಿನಂ ಥಿಯೇಟರಿಗೆ ಮುಗಿಬೀಳುತ್ತಿದ್ದರು. ಮುಂದೆ ಅದೇ ಸ್ಥಳದಲ್ಲಿ ಕಾರ್ಯಾರಂಭಗೊಂಡ ಎಂಎಫ್ ಸಿ ಸಂಸ್ಥೆ ಇನ್ನಷ್ಟು ಶಾಖೆಗಳನ್ನು ಕಾರ್ಯಾರಂಭಗೊಳಿಸಲಿ ಹಾಗೂ ಗ್ರಾಹಕರು ಮುಗಿಬೀಳಲಿ ಎಂದು ಶುಭಹಾರೈಸಿದರು.
ಯುವಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ , ಎಂ ಎಫ್ ಸಿ ಸಂಸ್ಥೆ ಫಳ್ನೀರ್ ಗೆ ಮಾತ್ರ ಸೀಮಿತವಾಗಿರದೆ ಜಿಲ್ಲೆ, ರಾಜ್ಯದಲ್ಲಿಯೂ ಎಂಎಫ್ ಸಿ ಹೆಸರು ರಾರಾಜಿಸಲಿ. ಇದಕ್ಕೆ ಸಿಬ್ಬಂದಿ ಹಾಗೂ ಸಂಸ್ಥೆ ಪಾಲುದಾರರು ಶ್ರಮವಹಿಸಲು ದೇವರು ಶಕ್ತಿ ನೀಡಲಿ ಎಂದು ಹಾರೈಸಿದರು.












