UN networks
ಕೊಣಾಜೆ: ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ, ಕೌಶಾಲಾಭಿವೃದ್ಧಿ , ಐಟಿ ಹಾಗೂ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಆವರು ಉದ್ಘಾಟನೆ ನಡೆಸುತ್ತಿದ್ದಂತೆ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಮಂಗಳ ಸಭಾಂಗಣದ ಎದುರು ಪ್ರತಿಭಟನೆ ನಡೆಸಿದ್ದು, ಪೆÇಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಉದ್ಘಾಟನಾ ಕಾರ್ಯಕ್ರಮಕ್ಕೆ ತಡೆಯೊಡ್ಡುವ ವಿಚಾರದಲ್ಲಿ ಮೊದಲೇ ಪೆÇಲೀಸರಿಗೆ ಮಾಹಿತಿ ಇದ್ದರಿಂದ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ಗೆ ತೆರಳುವ ಎಲ್ಲಾ ದಾರಿಗಳಲ್ಲಿ ನಾಕಾಬಂ„ಯನ್ನು ಹಾಕಲಾಗಿತ್ತು. ಆದರೆ ಒಳದಾರಿಗಳ ಮೂಲಕ ನಡೆದುಕೊಂಡು ಬಂದ ಸಿಎಪ್ಐ ಕಾರ್ಯಕರ್ತರು ಸಚಿವರ ಕಾರ್ಯಕ್ರಮ ನಡೆಯುವ ಮಂಗಳಾ ಸಭಾಂಗಣದ ಹೊರಗೆ ಇರುವ ಮುಖ್ಯ ರಸ್ತೆ ಬಳಿ ಸುಮಾರು 40ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆ ನಡೆಸಲು ಆರಂಬಿಸಿದರು. ಪೆÇಲೀಸರು ಪ್ರತಿಭಟನಾ ಕಾರರನ್ನು ವಶಕ್ಕೆ ತೆಗೆದುಕೊಂಡು ಪೆÇಲೀಸ್ ಬಸ್ನಲ್ಲಿ ಕೊಂಡೊಯ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷರಿಗೇ ಪ್ರವೇಶವಿಲ್ಲ : ಸಚಿವರ ಕಾರ್ಯಕ್ರಮದ ವಿಚಾರದಲ್ಲಿ ಪ್ರತಿಭಟನೆ ನಡೆಯುವ ಮಾಹಿತಿ ಇದ್ದರಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೆÇಲೀಸ್ ಠಾಣೆಗಳ ಪೆÇಲೀಸರು, ಕೆಎಸ್ಆರ್ಪಿ ಪೆÇಲೀಸರು ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ಗೆ ಸಂಪರ್ಕಿಸುವ ಎಲ್ಲಾ ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ವಾಹನಗಳನ್ನು ಸಂಚರಿಸಲು ಬಿಡುತ್ತಿರಲಿಲ್ಲ. ಗಣೇಶ ಮಹಲ್, ಮಂಗಳೂರು ವಿಶ್ವವಿದ್ಯಾನಿಲಯ ಮುಖ್ಯ ದ್ವಾರ, ಪುರುಷರ ವಸತಿಗೃಹ, ಮಹಿಳಾ ವಸತಿಗೃದ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಕೊಣಾಜೆ ಬೆಳ್ಮ, ಕೊಣಾಜೆ ಜಂಕ್ಷನ್, ಗ್ರಾಮಚಾವಡಿ, ಪಾವೂರು ಹರೇಕಳ ಸಂಚರಿಸುವ ವಾಹನಗಳು ಕಂಬಳಪದವು ಮಾರ್ಗವಾಗಿ ಸಂಚರಿಸಬೇಕಾಯಿತು. ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷಿ ಅವರು ಗ್ರಾಮ ಪಂಚಾಯತ್ಗೆ ತೆರಳಲು ಪೆÇಲೀಸರು ಅಡ್ಡಿಪಡಿಸಿದ್ದು ಸುಮಾರು ಅಧರ ಗಮಟೆಗಳ ಕಾಲ ಪೆÇಲೀಸರೊಂದಿಗೆ ಪಂಚಾಯತ್ ಅಧ್ಯಕ್ಷೆ ನಡುವೆ ಮಾತಿನ ಚಕಮಕಿ ನಡೆಯಿತು. ಸೋಮವಾರ ಬೆಳಗ್ಗಿನಿಂದ ಸಂಜೆವರೆಗೆ ಸಚಿವರ ಕಾರ್ಯಕ್ರಮ ಮುಗಿಯುವ ತನಕ ಪೆÇಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.


