UN networks
ಉಳ್ಳಾಲ: ಉಳ್ಳಾಲದ ಮಾಸ್ತಿಕಟ್ಟೆ ಜಂಕ್ಷನ್ನಿನಲ್ಲಿರುವ ಶುದ್ಧ ನೀರಿನ ವಾಟರ್ ಕಿಯೋಸ್ಕ್ ಯಂತ್ರ ಕ್ಕೆ ಕಾಯಿನ್ ಹಾಕಿದರೂ ನೀರು ಬರುತ್ತಿಲ್ಲ. ಆದರೆ ಯಂತ್ರ ಮಾತ್ರ ಕಾಯಿನ್ ಅನ್ನು ನುಂಗುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರೋತ್ಥಾನ-3 ರ ಅನುದಾನದಡಿ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಕಳೆದ ವರ್ಷ ಸ್ಥಾಪಿಸಲಾಗಿತ್ತು. ಉತ್ತಮ ಗುಣಮಟ್ಟದ ಯಂತ್ರ ಇದಾಗಿದ್ದು, ವರ್ಷ ಪೂರ್ತಿ ಶುದ್ಧ ನೀರನ್ನು ಜನತೆ ಹಾಕುವ ಹಣಕ್ಕೆ ತಕ್ಕಂತೆ ಪೂರೈಸುತಿತ್ತು. ಆದರೆ ಇದೀಗ ಕೆಲ ದಿನಗಳಿಂದ ಯಂತ್ರ ಕಾಯಿನ್ ಮಾತ್ರ ನುಂಗುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಯಂತ್ರ, ಇದೀಗ ಮತ್ತೆ ಜನರ ಹಣವನ್ನು ನುಂಗುತ್ತಿದೆ ಅನ್ನುವ ಸಂದೇಶ ವಾಟ್ಸ್ಯಾಪ್ ಮೂಲಕ ಹರಿದಾಡುತ್ತಿದೆ


