
ಉಳ್ಳಾಲ: ಕಿನ್ಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳ ಗ್ರಾಮವಾಸ್ತವ್ಯ ಯಶಸ್ವಿಯಾಗಿ ನಡೆದಿದ್ದು, ಸ್ಥಳದಲ್ಲಿ ಮೂವರಿಗೆ ವೃದ್ಯಾಪ್ಯ ವೇತನ ಪಿಂಚಣಿ, ವಿಲೇವಾರಿ, ಘನತ್ಯಾಜ್ಯ ವಿಲೇವಾರಿಗೆ ಸ್ಥಳ ಗುರುತಿಸುವಿಕೆ, ರುದ್ರಭೂಮಿ ಮತ್ತು ನಿವೇಶನದ ಸ್ಥಳ ತನಿಖೆ ನಡೆಸುವ ಮೂಲಕ ಕಿನ್ಯ ಗ್ರಾಮದ ಕೆಲವು ಕಡತಗಳ ವಿಲೇವಾರಿಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ಶನಿವಾರ ನಡೆಸಲಾಯಿತು.
ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ತಹಶೀಲ್ದಾರ್ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಕಿನ್ಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲಿನಿ ಪೂಜಾರಿ, ಮಾಜಿ ಉಪಾಧ್ಯಕ್ಷ ಸಿರಾಜುದ್ದೀನ್ ಕಿನ್ಯ, ಮಾಜಿ ಅಧ್ಯಕ್ಷ ಹಮೀದ್ ಕಿನ್ಯ, ಸದಸ್ಯರಾದ ಬಾಗಿ , ಸೈಯದ್ ತ್ವಾಹ ತಂಗಲ್, ನಜೀರ್ ಹುಸೈನ್ , ಸಂತೋಷ್ ಮೊಂತೆರೊ , ಶಾಹಿನಾ,ಫಾರುಕ್ ಕಿನ್ಯ , ಫಯಾಝ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.
ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ ಒಂದು ದಿನಕ್ಕೆ ತಾಲೂಕು ಕಚೇರಿಯೇ ಗ್ರಾಮ ವಾಸ್ತವ್ಯದ ಮೂಲಕ ಕಿನ್ಯ ಗ್ರಾಮಕ್ಕೆ ಬಂದಿದ್ದು, ಸ್ಥಳದಲ್ಲೇ ಕಡತಗಳ ವಿಲೇವಾರಿ ಬಾಕಿ ಉಳಿದಿರುವ ಕಡತಗಳು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸುವುದು ಮುಖ್ಯ ಉದ್ಧೇಶವಾಗಿತ್ತು. ಗ್ರಾಮದಲ್ಲಿ ಅವಶ್ಯಕ ಯೋಜನೆಗಳಿಗೆ ಭೂಮಿ ನೀಡುವ ಕಾರ್ಯ ಬಾಕಿ ಉಳಿದಿದ್ದು, ಈ ವಾಸ್ತವ್ಯದಲ್ಲಿ ಸ್ಮಶಾನ, ನಿವೇಶನ, ಘನತ್ಯಾಜ್ಯ ವಿಲೇವಾರಿಗೆ ಸಂಬಂ„ಸಿದ ಸ್ಥಳವನ್ನು ತನಿಖೆ ನಡೆಸಿ ಜಾಗವನ್ನು ಈ ಯೋಜನೆಗಳಿಗೆ ಕಾಯ್ದಿರಿಸಲಾಗಿದೆ ಇದರೊಂದಿಗೆ ಪೌದಿ ಖಾತೆಗಳನ್ನು ವಾರಸುದಾರ ಹೆಸರಲ್ಲಿ ನೋಂದಾಯಿಸುವ ಕಾರ್ಯ. ಸಾಮಾಜಿಕ ಸೇವಾ ಭದ್ರತೆಯಡಿ ಇರುವ ಯೋಜನೆಗಳನ್ನು ಜನರಿಗೆ ಮುಟ್ಟಿಸುವದು ಮತ್ತು ಅರ್ಜಿ ನೀಡದೆ ಇರುವವರ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಮೂವರು ಪಿಂಚಣಿದಾರರಿಗೆ ಸ್ಥಳದಲ್ಲೇ ಪಿಂಚಣಿ ಸೇವೆಯನ್ನು ನೀಡಲಾಗಿದೆ. ಇಬ್ಬರ 94 ಸಿಸಿ ಸರ್ವೇ ಹೆಸರು ತಪ್ಪು ಗಳಿದ್ದು ಸ್ಥಳದಲ್ಲೆ ತಿದ್ದುಪಡಿ ಮಾಡುವ ಕಾರ್ಯ ಆಗಿದೆ. ಇದರೊಂದಿಗೆ 9 ಜನರಿಗೆ 94 ಸಿಸಿ ಹಕ್ಕು ಪತ್ರ , 32 ಪಿಂಚಣಿ ಅದೇಶಗಳನ್ನು ಕೊಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಅಗ್ರಿಗೋಲ್ಡ್‍ನಿಂದ ವಂಚನೆಗೊಳಗಾದ ಸಂತ್ರಸ್ತರ ಸಭೆ ನಡೆಸಿ ಸರಕಾರ ಮುಟ್ಟುಗೋಲು ಹಾಕಿರುವ ಸ್ಥಳದ ಮಾಹಿತಿಯನ್ನು ನೀಡಲಾಯಿತು ಮುಟ್ಟುಗೋಲು ಹಾಕಲಾಗಿರುವ ಜಾಗದ ಮುಂದಿನ ಕ್ರಮದ ಕುರಿತು ಸಭೆಯಲ್ಲಿ ವಿವರಿಸಲಾಯಿತು.
ಶಾಸಕ ಯು.ಟಿ. ಖಾದರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ಕಂದಾಯ ಮಂತ್ರಿಗಳನ್ನು ಅಬಿನಂದಿಸಿದರು. ಇಂತಹ ಗ್ರಾಮ ವಾಸ್ತವ್ಯಗಳು ಪ್ರತೀ ಗ್ರಾಮಗಳಲ್ಲಿ ನಡೆದು ಜನರ ಕುಂದು ಕೊರೆತೆ ಆಲಿಸಿ ಅವರ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಆಹಾರ ಇಲಾಖೆಯ ಉಪ ತಹಶೀಲ್ದಾರ್ ಮೋಹಿನಿ ಪುರಾಣಿಕ್, ಆಹಾರ ನಿರೀಕ್ಷಕಿ ರಾಜೇಶ್ವರಿ, ತಾಲೂಕು ಸರ್ವೇಯರ್ ಧನಶೇಖರ್, ಎಡಿಎಲ್‍ಆರ್ ಶಾಖೆಯ ಸೂಪರಿಟೆಂಡ್ ಗಿರೀಶ್ ಕಂದಾಯ ನಿರೀಕ್ಷಕ ಸ್ಟಿಫನ್, ತಾಲೂಕು ಕಚೇರಿ ಸಿಬಂದಿಗಳಾದ ಗುಡ್ಡಪ್ಪ ಮತ್ತು ಹರಿ, ಗ್ರಾಮ ಕರಣಿಕರಾದ ಅಕ್ಷತಾ, ಲಾವಣ್ಯ, ನಯನಾ, ಸುಮಂತ್, ಎನ್. ಜಿ ಪ್ರಸಾದ್, ಮನೋಹರ್ ಕಿನ್ಯ ಪಪಂಚಾಯತ್ ಕಾರ್ಯದರ್ಶಿ ಶಾಲಿನಿ ಉಪಸ್ಥಿತರಿದ್ದು, ಆರ್ಜಿಗಳನ್ನು ವಿಲೇವಾರಿಯಲ್ಲಿ ಸಹಕರಿಸಿದರು.
ಕಂದಾಯ ಇಲಾಖೆಯ ರವಿ ಸ್ವಾಗತಿಸಿದರು. ಕಿನ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅ„ಕಾರಿ ವಿಶ್ವನಾಥ ಬೈಲಮೂಲೆ ಪ್ರಸ್ತಾವನೆಗೈದರು.



