UN networks
ಉಳ್ಳಾಲ: ದೇರಳಕಟ್ಟೆಯ ಎ.ಬಿ. ಶೆಟ್ಟಿ.ದಂತ ಮಹಾವಿದ್ಯಾಲಯದಲ್ಲಿ ದಂತ ವೈದ್ಯಕೀಯ ಶಿಕ್ಷಣ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿಮಹತ್ತರವಾದ ಬದಲಾವಣೆಗಳು ನಡೆಯುತ್ತಿದ್ದು, ಪ್ರಸ್ತುತ ವಿದ್ಯಾಲಯದಲ್ಲಿ ನವೀಕೃತ, ಉನ್ನತೀಕರಿಸಿದ ಅತ್ಯಾಧುನಿಕ ಸೌಲಭ್ಯದಿಂದ ಈ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವಲ್ಲಿ ಸಂದೇಹವಿಲ್ಲ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿತ ವಿಶ್ವದ್ಯಾಲಯದ ಅಧೀನ ಸಂಸ್ಥೆ ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ನವೀಕರಿಸಿದ ವಿಭಾಗಗಳನ್ನು ಮತ್ತು ನವೀಕೃತ, ಉನ್ನತೀಕರಿಸಿದ ಅತ್ಯಾಧುನಿಕ ಸೌಲಭ್ಯವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.


ಎ.ಬಿ. ಶೆಟ್ಟಿ.ದಂತ ವಿಜ್ಞಾನ ಮಹಾವಿದ್ಯಾಲಯದ ಡೀನ್ ಹಾಗೂ ಪ್ರಾಂಶುಪಾಲ ಡಾ| ಯು.ಎಸ್. ಕೃಷ್ಣ ನಾಯಕ್ ಮಾತನಾಡಿ
ಎನ್‍ಐಆರೆಫ್ -2020 ಸೂಚ್ಯಂಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ 2ನೇ ಸ್ಥಾನದಲ್ಲಿರುವ ಈ ಖಾಸಗಿ ಕಾಲೇಜು ಆಸ್ಪತ್ರೆಯಲ್ಲಿ ರೋಗಿಗಳಿಗೆ ಎಲ್ಲ ದಂತ ಚಿಕಿತ್ಸೆಗಳು ಉಚಿತವಾಗಿದೆ. ಆಧುನಿಕ ಹಾಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಇಪ್ಪತ್ತು ದಂತ ಕುರ್ಚಿಗಳನ್ನು ಕಲ್ಪಿಸಲಾಗಿದೆ.
ದಂತ ವಿದ್ಯಾಲಯದ ಎಲ್ಲ ವಿಭಾಗ ನವೀಕರಿಸಲಾಗಿದ್ದು ಅತ್ಯಾಧುನಿಕ ಸೌಲಭ್ಯವನ್ನೊಳಗೊಂಡಿದ್ದು, ಆರ್ಥೊಡಾಂಟಿಕ್ಸ್ ಮತ್ತು ಡೆಂಟೋ ಫೇಶಿಯಲ್ ಆರ್ಥೋಪೆಡಿಕ್ಸ್ ಸಂಶೋಧನಾ ಕೊಠಡಿ, ಅತ್ಯಾಧುನಿಕ ಸೆಮಿನಾರ್ ಹಾಲ್, ಹವಾನಿಯಂತ್ರಿತ ಪ್ರದರ್ಶನ ಕೊಠಡಿ ಮತ್ತು ಪ್ರಯೋಗಾಲಯ ಸೌಲಭ್ಯ ಹೊಂದಿದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸಹ ಕುಲಾ?ಪತಿ ಡಾ|.ಎಂ. ಶಾಂತಾರಾಮ್ ಶೆಟ್ಟಿ, ಆಡಳಿತ ಸಹ ಕುಲಾ?ಪತಿ ಎನ್. ವಿಶಾಲ್ ಹೆಗ್ಡೆ, ಹಣಕಾಸು ನಿರ್ದೇಶಕ ರಾಜೇಂದ್ರ ಎಂ., ನಿಟ್ಟೆ ವಿವಿ ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, ಸಹ ಕುಲಪತಿ ಪೆÇ?ರ| ಎಂ.ಎಸ್. ಮೂಡಿತ್ತಾಯ, ನಿಟ್ಟೆ ವಿವಿಯ ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ, ಎ.ಬಿ. ಶೆಟ್ಟಿ.ದಂತ ವಿಜ್ಞಾನ ಮಹಾವಿದ್ಯಾಲಯದ ವಿಶ್ರಾಂತ ಡೀನ್ ಶ್ರೀಧರ ಶೆಟ್ಟಿ , ಉಪ ಪ್ರಾಂಶುಪಾಲೆ ಮಿತ್ರ ಎನ್. ಹೆಗ್ಡೆ , ಡಾ| ರವಿ ಮತ್ತು ಎಲ್ಲ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


