UN NETWORKS
ಮುಡಿಪು : ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ಸ್ ಘಟಕ ಹಾಗೂ ದೈಹಿಕ ಶಿಕ್ಷಣ ವಿಬಾಗದ ವತಿಯಿಂದ ಮೇಜರ್ ಧ್ಯಾನ್ಚಂದ್ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾದಿನ ಆಚರಿಸಲಾಯಿತು.

.ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ತಮೀಮ್, ಮಹಮದ್ ಶಾಫಿ, ಮಹಮದ್ ಶಮ್ಶೀರ್, ಮಹಮದ್ ಶಫೀಕ್(ಕಬ್ಬಡಿ), ಮಹಮದ್ ಮೌಸೂರ್, ಸಂಕೇತ್(ವಾಲಿಬಾಲ್), ರುದ್ರೀಶ್ ಕುಮಾರ್(ಚೆಸ್), ಹಸೀನ(ತ್ರೋಬಾಲ್), ಫೌಸ್ಟಿನ್ ಡಿಸೋಜಾ(ಅತ್ಲೆಟಿಕ್ಸ್), ಹರ್ಷಿತ, ದೀಕ್ಷಿತಾ, ಗುಣವತಿ, ಅಪರ್ಣ ಕುಮಾರಿ(ಲಗೋರಿ) ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಗಿರಿಧರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕುರ್ನಾಡ್ ಪ್ರೌಢಶಾಲೆಯ ಶಿಕ್ಷಕಿ ಜಯಲಕ್ಷ್ಮೀ, ಕಾಲೇಜಿನ ಕ್ರೀಡಾ ಜೊತೆ ಕಾರ್ಯದರ್ಶಿ ಫೌಸ್ಟಿನ್ ಡಿಸೋಜಾ ಮುಖ್ಯ ಅತಿಥಿಗಳಾಗಿದ್ದರು. ದೈಹಿಕ ಶಿಕ್ಷಣ ನಿರ್ದೇಶಕಿ ಶುಭ ಕೆ.ಎಚ್. ಸ್ವಾಗತಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.


