UN NETWORKS
ಉಳ್ಳಾಲ : ಸಮುದ್ರ ತೀರದಲ್ಲಿ ಮಹಿಳೆಯೊಬ್ಬರ ಅರ್ಧ ಕೊಳೆತ ದೇಹ ಪತ್ತೆಯಾಗಿದ್ದು, ಸೊಂಟದ ನಂತರದ ಭಾಗ ಪತ್ತೆಯಾಗದೇ ಇರುವುದರಿಂದ ಪ್ರಕರಣ ನಿಗೂಢವಾಗಿದೆ. ಉಳ್ಳಾಲ ಪೊಲೀಸರು ದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಿದ್ದಾರೆ.


ಸೊಂಟದ ಭಾಗ, ಒಳ ಉಡುಪು ಕಾಲಿನಲ್ಲಿ ಗೆಜ್ಜೆ ಹಾಗೂ ಕಾಲುಂಗುರ ಇರುವ ದೇಹ ಪತ್ತೆಯಾಗಿದೆ. ವಿವಾಹಿತ ಮಹಿಳೆಯ ದೇಹ ಇದಾಗಿದೆ ಎಂದು ಸಂಶಯಿಸಲಾಗಿದೆ. ಆತ್ಮಹತ್ಯೆ ಪ್ರಕರಣವೋ ಕೊಲೆಯೋ ಅನ್ನುವುದು ದೃಢವಾಗಿಲ್ಲ. ಸಮುದ್ರದಲ್ಲಿ ತುಂಬಾ ದಿನ ಇದ್ದು, ಇದರಿಂದಾಗಿ ಅರ್ಧ ದೇಹವನ್ನು ಮೀನು ತಿಂದಿರುವ ಸಾಧ್ಯತೆ ಇರಬಹುದು ಅನ್ನುವುದು ಸ್ಥಳೀಯರ ಅಭಿಪ್ರಾಯವಾದರೂ, ಈವರೆಗೆ ಅರ್ಧದಷ್ಟು ತಿಂದ ಉದಾಹರಣೆ ಇಲ್ಲ. ಮಹಿಳೆಯನ್ನು ಕಡಿದು ಕೊಲೆಗೈದು ಸಮುದ್ರಕ್ಕೆ ಎಸೆದಿರುವ ಸಾಧ್ಯತೆಯೂ ಇದೆ ಅನ್ನುವ ಅಭಿಪ್ರಾಯ ಸಾರ್ವ ಜನಿಕ ವಲಯದಿಂದ ಕೇಳಿಬಂದಿದೆ. ಒಂದು ತಿಂಗಳ ಅವಧಿಯಲ್ಲಿ ಮೂರನೇ ಮಹಿಳೆಯ ಮೃತದೇಹ ಉಳ್ಳಾಲ ಠಾಣಾ ವ್ಯಾಪ್ತಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಎರಡು ಪ್ರಕರಣಗಳ ಗುರುತು ಪತ್ತೆಯಾಗಿದೆ. ಬೇರೆಡೆ ಹಾರಿಯೋ ಅಥವಾ ಕೊಲೆಗೈದು ಎಸೆದಿರು ದೇಹ ಉಳ್ಳಾಲ ಸಮುದ್ರ ತೀರ ಸೇರಿರುವ ಸಾಧ್ಯತೆಯೂ ಇದೆ. ಉಳ್ಳಟಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯ ಅರ್ಧ ದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವಾರೀಸುದಾರರಿದ್ದಲ್ಲಿ ಉಳ್ಳಾಲ ಪೊಲೀಸರನ್ನು ಸಂಪರ್ಕಿಸಲು ಕೋರಲಾಗೊದೆ.


