UN NETWORKS
ಕೊಣಾಜೆ : ಐರೋಪ್ಯ ಸಮುದಾಯವು 6 ಸದಸ್ಯ ರಾಷ್ಟ್ರಗಳಿಂದ ಆರಂಭವಾಗಿ ಪ್ರಸ್ತುತಚ28 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಇದು ಪ್ರಮುಖವಾಗಿ ಯುದ್ದ ಮತ್ತು ಸಂಘರ್ಷಗಳಿಂದ ಮುಕ್ತವಾಗಿ, ಶಾಂತಿಯುತವಾಗಿ ಆರ್ಥಿಕ ಬಲವರ್ಧನೆಗೊಳಿಸಿ ಜಾಗತಿಕ ಮಟ್ಟದಲ್ಲಿ ಐರೋಪ್ಯ ಒಕ್ಕೂಟದ ಪ್ರಭಾವವನ್ನು ಹಚ್ಚಿಸಿಕೊಳ್ಳಲು ಪ್ರಯತ್ನಿಸಿದೆ. ಈ ಒಕ್ಕೂಟವು ಸಹಕಾರವನ್ನು ವೃದ್ದಿಸಿಕೊಳ್ಳುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಪ್ರಭಾವಿ ಸಂಘಟನೆಯಾಗಿದೆ ಎಂದು ಭಾರತದಲ್ಲಿನ ಪೊಲಾಂಡ್ ಮಾಜಿ ರಾಯಬಾರಿಯಾಗಿ ಥಾಮಸ್ ಲುಕಾಸ್ಜುಕ್ ಅವರು ಹೇಳಿದರು.

ಅವರು ಜೀನ್ ಮಾನೆಟ್ ಮಾಡ್ಯುಲ್, ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗ, ಇತಿಹಾಸ ವಿಭಾಗ ಮತ್ತು ಸಮಾಜಶಾಸ್ರ್ರ ವಿಭಾಗಗಳ ಸಹಯೋಗದೊಂದಿಗೆ ಬುಧವಾರ ಯೂರೋಪಿಯನ್ ಯೂನಿಯನ್: ಇತಿಹಾಸ, ಸಂಸ್ಕೃತಿ ಮತ್ತು ರಾಜಕಾರಣ ಕುರಿತಾದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಂಗಳೂರು ವಿವಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ಐರೋಪ್ಯ ಒಕ್ಕೂಟ ಐತಿಕಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದು, ಇದರ ಸಂಸ್ಕೃತಿ, ಬೌಗೋಳಿಕತೆಯು ಆರ್ಥಿಕ ಮತ್ತು ರಾಜಕೀಯ ದೃಷ್ಟಿಕೋನದಿಂದ ಮಹತ್ವದಾಗಿದೆ. ಐರೋಪ್ಯ ಒಕ್ಕೂಟದ ಮೂಲ ಮೌಲ್ಯಗಳು, ಯೂರೋಪಿಯನ್ ಸಂಸ್ಕೃತಿಯ ಮೂಲಾಧಾರವಾದ ಗ್ರೀಕ್ ಮತ್ತು ರೋಮನ್ ನಾಗರಿಕತೆಯ ಮೌಲ್ಯಗಳನ್ನು ಹೊಂದಿದೆ. ಆದರೆ ಈ ನಾಗರಿಕತೆಯು ಯೂರೋಪಿನ ಹೊರಗಿನ ಪ್ರದೇಶ ಮುಖ್ಯವಾಗಿ ಭಾರತದಂತಹ ದೇಶದ ಒಡನಾಟದಿಂದ ರೂಪಿಸಲ್ಪಟ್ಟಿವೆ. ನಂತರ ಎರಡನೇಯ ಮಹಾಯುದ್ದದ ನಂತರದಲ್ಲಿ ಜಾಗತಿಕ ಮಟ್ಟದಲ್ಲಿ ಎರಡು ಶಕ್ತಿಶಾಲಿ ರಾಷ್ಟ್ರಗಳಾಗಿ ಅಮೇರಿಕಾ ಮತ್ತು ಸೋವಿಯತ್ ಯೂನಿಯನ್ ತಮ್ಮ ನೆಲೆಯನ್ನು ಯೂರೋಪ್‍ನಲ್ಲಿ ಗುರುತಿಸಿಕೊಂಡು, ತಮ್ಮ ಪ್ರಾಬಲ್ಯವನ್ನು ಮೆರೆಯಲು ಮುಂದಾದವು. ಪಶ್ಚಿಮ ಯೂರೋಪ್ ರಾಷ್ಟ್ರಗಳ ಮಾರ್ಷಲ್ ಯೋಜನೆಗಳ ಮೂಲಕ ಆರ್ಥಿಕ ನೆರವುಗಳನ್ನು ನೀಡುವುದರ ಮೂಲಕ ತನ್ನ ಹಿಡಿತವನ್ನು ಸಾಧಿಸಲು ಅಮೇರಿಕಾ ಮುಂದಾದರೆ ಮತ್ತೊಂದೆಡೆ ಸೋವಿಯತ್ ಯೂನಿಯನ್ ಪೂರ್ವಯೂರೋಪಿನ ರಾಷ್ಟ್ರಗಳ ಮೂಲಕ ತನ್ನ ಹಿಡಿತವನ್ನು ಸಾಧಿಸಲು ಮುಂದಾಯಿತು. ಈ ಬೆಳವಣಿಗೆಯ ತೀವ್ರತೆ ಅರಿತ ಯೂರೋಪಿಯನ್ ರಾಷ್ಟ್ರಗಳು ತನ್ನದೇ ಆದ ಸಂಘಟನೆಯನ್ನು ಅರಂಭಿಸಿ ಅರ್ಥಿಕತೆಯನ್ನು ಬಲಪಡಿಸಿಕೊಳ್ಳಲು ಯೂರೋಪಿಯನ್ ಯೂನಿಯನ್ ಸಮುದಾಯವನ್ನು ಪ್ರಾರಂಭಿಸಲು ಮುಂದಾದವು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಜೀನ್ ಮಾನೆಟ್ ಮಾಡ್ಯುಲ್ ಸಂಯೋಜಕಾರದ ಪ್ರೊ.ಜಯರಾಜ್ ಅಮೀನ್ ಅವರು, ಐರೋಪ್ಯ ಒಕ್ಕೂಟ ಒಂದು ಪ್ರಬಲ ಆರ್ಥಿಕ ಸಂಘಟನೆಯಾಗಿದ್ದು ಜಾಗತಿಕ ಅರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾದ್ಯಾಪಕರಾದ ಡಾ.ದಯಾನಂದ್ ನಾಯಕ್, ಡಾ. ರಾಜ್ ಪ್ರವೀಣ್, ಇತಿಹಾಸ ವಿಭಾಗದ ಪ್ರೊ. ಹನುಮ ನಾಯಕ್, ಪ್ರೊ. ನಿರ್ಮಲ್‍ರಾಜ್, ಸಮಾಜಶಾಸ್ತ್ರ ವಿಭಾಗದ ಪ್ರೊ. ವಿನಯ್‍ರಜತ್, ಸಹಾಯಕ ಪ್ರಾದ್ಯಪಕರಾದ ಡಾ. ಗೋವಿಂದರಾಜು, ಸಬಿತಾ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ವೈ ಮುನಿರಾಜು, ಮಣಿಪಾ¯ ವಿಶ್ವವಿದ್ಯಾನಿಲಯದ ಜಿಯೋ-ಪಾಲಿಟಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ನಂದಕಿಶೋರ್ ಮೊದಲಾದವರು ಭಾಗವಹಿಸಿದ್ದರು.


