ವರದಿ : ಸುರೇಶ್ ಪಡು
ಕುಂಪಲ : ಕುಂಪಲದ ಲಾಸ್ಟ್ ಸ್ಟಾಪ್ ಎಂದೇ ಪ್ರಸಿದ್ಧಿ ಪಡೆದಿರುವ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಅಮೃತನಗರದಲ್ಲಿ ಚರಂಡಿ ಅವ್ಯವಸ್ಥೆ ರಸ್ತೆಯನ್ನೇ ನುಂಗುವ ಸ್ಥಿತಿ ನಿರ್ಮಾಣವಾಗಿದೆ. ದಿನದಲ್ಲಿ 10 ರಿಂದ 15 ಶಾಲಾ ಬಸ್ಸುಗಳು ಸಂಚರಿಸುತ್ತಿದೆ. ಚರಂಡಿಯ ಕುಸಿತದಿಂದ ಅವಘಢ ಸಂಭವಿಸುವ ಭೀತಿಯಿದೆ. ಇಲ್ಲಿ ದಿನನಿತ್ಯ ಶಾಲಾ ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ನಡೆದುಕೊಂಡು ಹೋಗುವವರೂ ಅಪಾಯವನ್ನು ಎದುರಿಸುವಂತಾಗಿದೆ. ಕೋಟೆಕಾರು ಪಟ್ಟಣಪಂಚಾಯತ್ ಬಗಂಬಿಲದಿಂದ ಬರುವ ಮಳೆ ನೀರು ಇದೇ ಚರಂಡಿ ಮೂಲಕ ಸಾಗಿ ಮಡ್ಯಾರು ಸಮೀಪದ ರಾಜಕಾಲುವೆ ಸೇರುತ್ತದೆ. ಇದೇ ಚರಂಡಿಯ ಒಂದು ಮೀ ಅಂತರದಲ್ಲಿ ರಸ್ತೆ ಉಬ್ಬು ಇದೆ. ಇದರಿಂದಾಗಿ ಹೆಚ್ಚಿನ ಪ್ರಾಣಹಾನಿಯನ್ನು ಇದು ತಪ್ಪಿಸಿದೆ. ಸೋಮೇಶ್ವರ ಗ್ರಾ.ಪಂ.ನ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕಾಮಗಾರಿ ನಡೆಸದೇ ಇದ್ದಲ್ಲಿ, ಕುಂಪಲದ ಲಾಸ್ಟ್ ಸ್ಟಾಪ್ ಇನ್ನೊಬ್ಬರ ಬಾಳಲ್ಲಿ ಲಾಸ್ಟ್ ಡೇ ಆಗುವುದರಲ್ಲಿ ಸಂಶಯವಿಲ್ಲ.

ಸೋಮೆಶ್ವರ ಪುರಸಭೆಯ ಆಡಳಿತ ವರ್ಗ ಕ್ಯಾಥರ್ಹಾಲ್ ಕಾಯಿಲೆ (ವಾಸನೆ ಪ್ರಜ್ಞೆಯಿಲ್ಲದ ಕಾಯಿಲೆ) ಕಾಯಿಲೆಯಿಂದ ನರಳುತ್ತಿದೆಯೇ?. ಇಂತಹ ಸಂಶಯ ಪುರಸಭೆ ವ್ಯಾಪ್ತಿಯ ಮನೆಮನೆಗಳಲ್ಲಿ ಚರ್ಚೆಯಾಗುತ್ತಿವೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸೋಮೇಶ್ವರ ಗ್ರಾಮ ಪಂಚಾಯತ್ ಕಚೇರಿ

ವಾಣಿ ಆಳ್ವ
ಆಡಳಿತಾಧಿಕಾರಿ
ಸೋಮೇಶ್ವರ ಪುರಸಭೆ


