UN NETWORKS
ಕೈರಂಗಳ: ಕೈರಂಗಳ ಪುಣ್ಯಕೋಟಿನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಲಾಯಿತು.

ಶಾಲಾ ಸಂಚಾಲಕ ಟಿ ಜಿ ರಾಜಾರಾಮ ಭಟ್, ಸಂಸ್ಥೆಯ ಮಾರ್ಗದರ್ಶಕ ಪಿ ಶಂಕರ ಭಟ್, ಆಡಳಿತ ಮಂಡಳಿಯ ಹಿರಿಯ ಸದಸ್ಯ ಮುಂಡಾಜೆ ಬಾಲಕೃಷ್ಣ ರೈ ಮೊದಲಾದವರು ಪಾಲ್ಗೊಂಡಿದ್ದರು. ವಿಟ್ಲ ತಾಲೂಕು ಸಹಕಾರ್ಯವಾಹ ವರುಣ್ ಶಂಭೂರು ಬೌದ್ಧಿಕ್ ನಡೆಸಿಕೊಟ್ಟರು. ಶಾಲೆಯ ನೂರಾರು ಮಕ್ಕಳು ಪ್ರೀತಿಯ ಸಂಕೇತವಾದ ರಾಖಿ ಕಟ್ಟಿ ದೇಶಪ್ರೇಮ ಮೆರದರು.


