UN NETWORKS
ಕೊಣಾಜೆ : ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ವತಿಯಿಂದ ಸೆಪ್ಟಂಬರ್ ನಲ್ಲಿ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 165 ನೇ ಜನ್ಮ ದಿನೋತ್ಸವದ ಆಮಂತ್ರಣ ಪತ್ರಿಕೆಯನ್ನು ಕೊಣಾಜೆ ಬ್ರಹ್ಮಶ್ರಿ ಸೇವಾ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ಪಾವೂರು ಅವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಚಂದ್ರಹಾಸ್ ಅಮೀನ್, ಪ್ರಧಾನ ಕಾರ್ಯದರ್ಶಿಯವರಾದ ರವೀಂದ್ರ ಬಂಗೇರ, ಸದಸ್ಯರಾದ ಗಂಗಾಧರ ಪೂಜಾರಿ, ಲಕ್ಷ್ಮಣ ಸಾಲಿಯಾನ್, ದುಗ್ಗಪ್ಪ ಪೂಜಾರಿ, ಪಿ.ಕೆ.ರಾಮ, ದಯಾನಂದ, ಸುರೇಶ್ ಪೂಜಾರಿ, ಲೋಕೇಶ್, ತಾರನಾಥ, ಜಯಾನಂದ ಅಮೀನ್, ವೇಣುಗೋಪಾಲ್, ಪುರುಷೋತ್ತಮ ಬಂಗೇರ, ಸರಿತಾ, ಪ್ರಭಾಕರ, ರವಿಕಲಾ ಸುಭಾಶ್, ಯಶೋಧರ ಅಂಚನ್, ಪ್ರವೀಣ್ ಪೂಜಾರಿ, ಜಯಂತಿ, ರವಿ ಮಲೆಕುಡಿಯ, ರವೀಂದ್ರ ಮರ್ಕಮೆ ಮೊದಲಾದವರು ಉಪಸ್ಥಿತರಿದ್ದರು.


