ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ : ಮರ್ದಿತರ, ಶೋಷಿತರ ದಮನಿತರ ಮತ್ತು ಅವಕಾಶ ವಂಚಿತರ ಪರವಾಗಿ ಮತ್ತು ದೇಶದ ಸಮಾನ ನ್ಯಾಯ ರಕ್ಷಣೆಗಾಗಿ ಎಸ್ ಡಿ ಪಿ ಐ ಹೋರಾಟ ನಡೆಸುವ ಪಕ್ಷವಾಗಿದೆ ಎಂದು ಎಸ್ ಡಿ ಪಿ ಐ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಎ ಆರ್ ಹೇಳಿದ್ದಾರೆ.
ಅವರು ಎಸ್ ಡಿ ಪಿ ಐ ಸಂಸ್ಥಾಪನ ದಿನಚಾರಣೆಯ ಅಂಗವಾಗಿ ಎಸ್ಡಿಪಿಐ ಉಳ್ಳಾಲ ನಗರಸಭೆ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಮಾಸ್ತಿಕಟ್ಟೆ ಜಂಕ್ಷನ್ನಿನಲ್ಲಿ ನಡೆದ ಧ್ವಜಾರೋಹಣದಲ್ಲಿ ಭಾಗವಹಿಸಿದರು. ಎಸ್ಡಿಪಿಐ ಉಳ್ಳಾಲ ನಗರಸಭೆ ಘಟಕದ ಅಧ್ಯಕ್ಷ ಅಝ್ಗರ್ ಅಲಿ , ಮುಹಮ್ಮದ್ ಯು.ಬಿ , ಅಬ್ದುಲ್ ರಝಾಕ್, ಪೈರೋಝ್ ಉಳ್ಳಾಲ್ ಉಪಸ್ಥಿತರಿದ್ದರು.


