UN NETWORKS
ದೇರಳಕಟ್ಟೆ : ಹಿರಿಯ ಸಾಹಿತಿ, ಕಲಾವಿದ ಇಬ್ರಾಹೀಂ ತಣ್ಣೀರುಬಾವಿ ಅವರಿಗೆ ಸಂತಾಪ ಸೂಚಕ ಸಭೆಯು ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ-ಮೇಲ್ತೆನೆ-ಯ ವತಿಯಿಂದ ರವಿವಾರ ದೇರಳಕಟ್ಟೆಯಲ್ಲಿ ಜರುಗಿತು.

ಮೇಲ್ತೆನೆಯ ಅಧ್ಯಕ್ಷ ಹಂಝ ಮಲಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕವಿ, ಹಾಡುಗಾರ ಬಶೀರ್ ಅಹ್ಮದ್ ಕಿನ್ಯ, ಲೇಖಕ ಇಸ್ಮತ್ ಪಜೀರ್ ನುಡಿನಮನ ಸಲ್ಲಿಸಿದರು. ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಉಪಾಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್, ಕೋಶಾಧಿಕಾರಿ ಇಸ್ಮಾಯೀಲ್ ಮಾಸ್ಟರ್, ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು. ಸದಸ್ಯ ಆಶಿರುದ್ದೀನ್ ಆಲಿಯಾ ಮಂಜನಾಡಿ ವಂದಿಸಿದರು.


