UN NETWORKS
ತೊಕ್ಕೊಟ್ಟು : ಉಳ್ಳಾಲ ವ್ಯಾಪ್ತಿಯಲ್ಲಿ ಶುಕ್ರವಾರ ಧಾರಕಾರವಾಗಿ ಮಳೆ ಸುರಿದಿದ್ದು, ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಜಂಕ್ಷನ್ನಲ್ಲಿ ಕೃತಕ ನೆರಯಾದರೆ ತೊಕ್ಕೊಟ್ಟು ಭಟ್ನಗರದಿಂದ ಜಂಕ್ಷನ್ ಸಂಪರ್ಕಿಸುವ ಚರಂಡಿಯ ಮಣ್ಣನ್ನು ತೆಗೆದು ನೀರು ಹರಿಯುವಂತೆ ಮಾಡಿದ್ದು, ಈ ಪ್ರದೇಶ ಸಂಪೂರ್ಣ ಕೆಸರುಮಯವಾಗಿದೆ.

ಜಂಕ್ಷನ್ನಲ್ಲಿ ಕೃತಕ ನೆರೆಗೆ ಕಾರಣವಾಗುತ್ತಿದ್ದ ಚರಂಡಿ ದುರಸ್ತಿ ಕಾಮಗಾರಿ ಬೆಳಗ್ಗಿನಿಂದಲೇ ಆರಂಭಗೊಂಡಿದ್ದು ಸಂಜೆಯವೇಳೆಗೆ ಮಣ್ಣು ತೆಗೆಯುವ ಕಾರ್ಯ ಮುಗಿದಿದೆ, ಜೆಸಿಬಿ ಸಹಾಯದಿಂದ ಮಣ್ಣು ತೆಗೆದರೂ ಮಣ್ಣನ್ನು ಚರಂಡಿಯ ಬದಿಯಲ್ಲೇ ರಾಶಿ ಹಾಕಿದ್ದರಿಂದ ಸಣಪೂರ್ಣ ಕೆಸರುಮಯವಾಗಿ ಪಾದಾಚಾರಿಗಳಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಚರಂಡಿ ಬದಿಯಲ್ಲಿ ಹಾಕಿರುವ ಮಣ್ಣನ್ನು ಸ್ಥಳಾಂತರಿಸುವ ಅಗತ್ಯ ಇದೆ.
ಮೇಲ್ಸೇತುವೆಯಿಂದ ಮುಂದುವರೆದ ಜಲಪಾತ : ಧಾರಾಕಾರವಾಗಿ ಮಳೆ ಸುರಿಯುವುದರಿಂದ ಮೇಲ್ಸೇತುವೆಯಿಂದ ಜಲಪಾತದಿಂದ ನೀರು ಜಂಕ್ಷನ್ಗೆ ಬೀಳುತ್ತಿದ್ದು ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ. ತೊಕ್ಕೊಟ್ಟು ಜಂಕ್ಷನ್ನಲ್ಲಿ ಸಂಜೆ ಸುರಿದ ಮಳೆಗೆ ಕೃತಕ ನೆರೆಯಾಗಿದೆ. ರಸ್ತೆಗಳು ಹೊಂಡದಿಂದ ಕೂಡಿದೆ.
ಸಮುದ್ರ ಅಬ್ಬರ : ಸೋಮೇಶ್ವರ ಉಚ್ಚಿಲ ಮತ್ತು ಉಳ್ಳಾಲದ ಕೆಲವೆಡೆ ಸಮುದರ ಅಬ್ಬರಿಸಿದ್ದು ಯಾವುದೇ ಹಾನಿಯಾಗಿಲ್ಲ. ಉಚ್ಚಿಲದ ಬಟ್ಟಪ್ಪಾಡಿ, ನ್ಯೂ ಉಚ್ಚಿಲ, ಉಳ್ಳಾಲದ ಕೈಕೋ, ಕಿಲೇರಿಯಾನಗರದಲ್ಲಿ ಅಲೆಗಳು ಅಬ್ಬರಿಸಿದ್ದು ಹಾನಿಯಾಗಿಲ್ಲ.


