Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಕೊಣಾಜೆ

ಕೊಣಾಜೆ : ವಿವಿಗಳ ಆದರ್ಶ ಪುನಶ್ಚೇತನವಾಗಲಿ

UllalaVaniBy UllalaVaniJuly 9, 2019No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕೊಣಾಜೆ: ದೇಶದಲ್ಲಿ ವಿಶ್ವವಿದ್ಯಾನಿಲಯಗಳು ಹಿಂದಿನ ಗೌರವವನ್ನು ಕಳೆದುಕೊಳ್ಳುತ್ತಿವೆ. ಇದಕ್ಕೆ ಆರ್ಥಿಕ -ಸಾಮಾಜಿಕ ಸಂಪನ್ಮೂಲಗಳ ಕೊರತೆ ಕಾರಣ. ನಮ್ಮ ವಿವಿಗಳು ವಿದೇಶಿ ವಿವಿಗಳನ್ನು ಅನುಕರಣೆ ಮಾಡದೆ ನಮ್ಮದೇ ಮಾದರಿಯಲ್ಲಿ ಶೈಕ್ಷಣಿಕ ಗುಣಮಟ್ಟಕ್ಕೆ ಒತ್ತು ನೀಡುವುದರೊಂದಿಗೆ ಆದರ್ಶ ರೀತಿಯಲ್ಲಿ ಪುನಶ್ಚೇತನವಾಗಬೇಕು. ನೂತನ ಕುಲಪತಿ ಪ್ರೊ| ಎಡಪಡಿತ್ತಾಯ ಅವರ ನೇತೃತ್ವದಲ್ಲಿ ಮಂಗಳೂರು ವಿವಿ ಇದೇ ಮಾರ್ಗದಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಡಾ| ಎಡಪಡಿತ್ತಾಯ ಅಭಿನಂದನ ಸಮಿತಿ ವತಿಯಿಂದ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಶನಿವಾರ ನೂತನ ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅವರಿಗೆ ಅಭಿನಂದನೆ ನೆರವೇರಿಸಿ ಅವರು ಮಾತನಾಡಿದರು.50 ವರ್ಷಗಳಲ್ಲಿ ನಾನು ಹಲವಾರು ವಿಶ್ವವಿದ್ಯಾನಿಲಯ, ಕುಲಪತಿಗಳು, ರಾಜ್ಯಪಾಲರನ್ನು ಕಂಡಿದ್ದೇನೆ. ಹಿಂದೆ ವಿವಿಗಳಿಗೆ ಇದ್ದ ಹೆಸರು -ಗೌರವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳ ಬುದ್ಧಿಮತ್ತೆ, ಜ್ಞಾನವನ್ನು ದುಡಿಸಿಕೊಳ್ಳುವ ಕಾರ್ಯಕ್ಕೆ ಪ್ರಾಧ್ಯಾಪಕರು ಮುಂದಾಗಬೇಕು. ಮಂಗಳೂರು ವಿವಿ ಮೇಲೆ ಹಲವು ನಿರೀಕ್ಷೆಗಳಿದ್ದು, ನಮ್ಮದೇ ಜಿಲ್ಲೆಯ ಉಪಕುಲಪತಿಗಳು ಅಧಿಕಾರ ಸ್ವೀಕರಿಸಿದ ಬಳಿಕ ವಿವಿಯನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಭರವಸೆ ನೀಡಿದ್ದಾರೆ. ವಿವಿ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಉತ್ತಮ ದಾಖಲಾತಿ ಆಗಬೇಕಾದರೆ ಉದ್ಯೋಗ ಸೃಷ್ಟಿ ಆಗಬೇಕು. ಪ್ಲೇಸ್‌ಮೆಂಟ್‌ ನೀಡುವುದರೊಂದಿಗೆ ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯ ಆಗಲಿ. ಈ ನಿಟ್ಟಿನಲ್ಲಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಕಾರ್ಯ ನಿರ್ವಹಿಸುವ ಭರವಸೆ ಇದೆ ಎಂದರು.ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ್‌ ರೈ ಮಾತನಾಡಿ, ಪ್ರೊ| ಎಡಪಡಿತ್ತಾಯ ಅವರು ಇದೇ ವಿವಿಯ ವಿದ್ಯಾರ್ಥಿ, ಹಣಕಾಸು ಅಧಿಕಾರಿ, ಕುಲಸಚಿವರಾಗಿ ಅನುಭವ ಹೊಂದಿರು ವುದರಿಂದ ನಿರೀಕ್ಷೆಗಳು ಹೆಚ್ಚಿವೆ ಎಂದರು.

ಜವಾಬ್ದಾರಿಯೂ ಹೆಚ್ಚಿದೆ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಲಪತಿ ಪ್ರೊ| ಎಡಪಡಿತ್ತಾಯ ಅವರು, ಈ ಹುದ್ದೆ ಅಲಂಕರಿಸುವ ಮೂಲಕ ಹೊಣೆಗಾರಿಕೆ, ಜವಾಬ್ದಾರಿಯೂ ಹೆಚ್ಚಿದೆ. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಶೈಕ್ಷಣಿಕ ವಾತಾವರಣವನ್ನು ಪುನರ್‌ ಸೃಷ್ಟಿಸುವ ಕಾರ್ಯವನ್ನು ಪ್ರಾಮಾ ಣಿಕವಾಗಿ ಮಾಡುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಅಭಿನಂದನ ಭಾಷಣ ಮಾಡಿದರು. ನೂತನ ಉಪಕುಲಪತಿಗಳಿಗೆ ಗಿಡ ನೀಡುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಡಾ| ಪಿ.ಎಲ್‌. ಧರ್ಮ ಸ್ವಾಗತಿಸಿದರು. ಉಮಪ್ಪ ಪೂಜಾರಿ ವಂದಿಸಿದರು. ಡಾ| ಧನಂಜಯ ಕುಂಬ್ಳೆ ನಿರೂಪಿಸಿದರು.

ಹುದ್ದೆ ಭರ್ತಿಗೆ ಯುಜಿಸಿ ಮಾರ್ಗಸೂಚಿ
ಖಾಲಿ ಹುದ್ದೆ ತುಂಬುವ ಕುರಿತು ಯುಜಿಸಿ ಈಗಾಗಲೇ ಒಂದು ಮಾರ್ಗಸೂಚಿ ಹೊರಡಿಸಿದೆ. ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಎಂಎಚ್‌ಆರ್‌ಡಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವಂತೆ ಸೂಚಿಸಲಾಗಿದೆ. ರಾಜ್ಯದ ಉನ್ನತ ಶಿಕ್ಷಣ ಸಚಿವರು ಕೂಡ ಈ ಬಗ್ಗೆ ಭರವಸೆ ನೀಡಿದ್ದಾರೆ. ಒಂದು ವರ್ಷದೊಳಗೆ ಖಾಲಿ ಹುದ್ದೆ ತುಂಬಬಹುದು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ

March 14, 2026

ಮಂಗಳೂರು ವಿವಿಯಲ್ಲಿ ‘ವಿವೇಕವಾಣಿ ‘ ಉಪನ್ಯಾಸ ಕಾರ್ಯಕ್ರಮ

March 14, 2026

ಗಾಂಜಾ ಮಾರಾಟ ಪ್ರಕರಣ; ಇಬ್ಬರ ಬಂಧನ..!

March 14, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ವಿದೇಶಕ್ಕೆ ರಫ್ತಾಗುತ್ತಿದ್ದ ಮೀನು,ಮಲ್ಲಿಗೆ ಸ್ಥಗಿತ..!!

By UllalaVaniMarch 14, 20260

ಮಂಗಳೂರು, ಮಾ. 14 : ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡದಿಂದ ಕರಾವಳಿ ಭಾಗದಿಂದ ವಿದೇಶಕ್ಕೆ ರಫ್ತಾಗುತ್ತಿದ್ದ ಮಲ್ಲಿಗೆ ಹೂವುಗಳ ಬೇಡಿಕೆ ಕಮರಿದರೆ, ಮೀನುಗಳ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೋಳಿ ಅಂಕಕ್ಕೆ ದಾಳಿ-ಐವರ ವಿರುದ್ಧ ಪ್ರಕರಣ ದಾಖಲು

March 14, 2026

ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ

March 14, 2026

ಮಂಗಳೂರು ವಿವಿಯಲ್ಲಿ ‘ವಿವೇಕವಾಣಿ ‘ ಉಪನ್ಯಾಸ ಕಾರ್ಯಕ್ರಮ

March 14, 2026
1 2 3 … 1,832 Next
Automatic YouTube Gallery

ಬಾವ ಫೌಂಡೇಷನ್ ವತಿಯಿಂದ ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ

ಗುರುಪುರ ;ಬಾವ ಫೌಂಡೇಷನ್ ವತಿಯಿಂದ ; ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ

ಗುರುಪುರ ಕ್ಯೆಕಂಬದ ಮೆಘಾ ಹಾಲ್‌ನಲ್ಲಿ ಆಯೋಜನೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #ifthar #gurupura #news #latestnews
Show More
ಬಾವ ಫೌಂಡೇಷನ್ ವತಿಯಿಂದ ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ
Now Playing
ಬಾವ ಫೌಂಡೇಷನ್ ವತಿಯಿಂದ ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ
ಗುರುಪುರ ;ಬಾವ ಫೌಂಡೇಷನ್ ವತಿಯಿಂದ ; ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ ...
ಗುರುಪುರ ;ಬಾವ ಫೌಂಡೇಷನ್ ವತಿಯಿಂದ ; ಇಫ್ತಾರ್ ಸೌಹಾರ್ದ ಕೂಟ, ಕಿಟ್ ವಿತರಣೆ

ಗುರುಪುರ ಕ್ಯೆಕಂಬದ ಮೆಘಾ ಹಾಲ್‌ನಲ್ಲಿ ಆಯೋಜನೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #ifthar #gurupura #news #latestnews
Show More
ಗುರುಪುರ ಜಂಕ್ಷನ್‌ನಲ್ಲಿ ಬೇಕರಿ ಸಹಿತ ಮೊಬೈಲ್ ಅಂಗಡಿಗೆ ಗುದ್ದಿದ ಲಾರಿ..!
Now Playing
ಗುರುಪುರ ಜಂಕ್ಷನ್‌ನಲ್ಲಿ ಬೇಕರಿ ಸಹಿತ ಮೊಬೈಲ್ ಅಂಗಡಿಗೆ ಗುದ್ದಿದ ಲಾರಿ..!
ಕೆಂಪು ಬಾಕ್ಸೈಟ್ ತುಂಬಿದ ಲಾರಿ ಅಪ*ಘಾ#ತ;ಗುರುಪುರ ಜಂಕ್ಷನ್‌ನಲ್ಲಿ ನಡೆದ ಘಟನೆ ...
ಕೆಂಪು ಬಾಕ್ಸೈಟ್ ತುಂಬಿದ ಲಾರಿ ಅಪ*ಘಾ#ತ;ಗುರುಪುರ ಜಂಕ್ಷನ್‌ನಲ್ಲಿ ನಡೆದ ಘಟನೆ

ಲಾರಿ ಡ್ರೈವರ್‌ಗೆ ಗಂಭೀರ ಗಾಯ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d